ಸಂಗ್ರಹ ಚಿತ್ರ
ವಾಹನ
ರೇಸಿಂಗ್ ಪ್ರಿಯರಿಗಾಗಿ 'ಅಪಾಚಿ RR 310' 2.27 ಲಕ್ಷ ರೂ. ಮೌಲ್ಯದ ಟಿವಿಎಸ್ ಬೈಕ್ ಬಿಡುಗಡೆ
ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ರೇಸಿಂಗ್ ಸ್ಪರ್ಧೆಗೆ ಅನುಕೂಲಕರವಾದ ರೇಸ್ ಟ್ಯೂನ್ಡ್(ಆರ್ ಟಿ) ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡ ನೂತನ ಟಿವಿಎಸ್ ಅಪಾಚಿ ಆರ್ ಆರ್ 310...
ಹೊಸೂರು: ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ರೇಸಿಂಗ್ ಸ್ಪರ್ಧೆಗೆ ಅನುಕೂಲಕರವಾದ ರೇಸ್ ಟ್ಯೂನ್ಡ್(ಆರ್ ಟಿ) ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡ ನೂತನ ಟಿವಿಎಸ್ ಅಪಾಚಿ ಆರ್ ಆರ್ 310 ಅನ್ನು ಬಿಡುಗಡೆಗೊಳಿಸಿದೆ.
ಇದರ ಬೆಲೆ 2.27 ಲಕ್ಷ ರೂ.ಗಳಾಗಿದ್ದು, ಇದು ಸುಧಾರಿತ ಹಾಗೂ ಟಿವಿಎಸ್ ರೇಸಿಂಗ್ ವಾಹನಗಳ ಶ್ರೀಮಂತ ಪರಂಪರೆಯಿಂದ ತಯಾರಾದ ವಾಹನವಾಗಿದೆ. ಇದು ಗ್ರಾಹಕರ ದ್ವಿಚಕ್ರ ವಾಹನ ಚಲಾವಣೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೂ, ಅತಿಯಾದ ವೇಗದಲ್ಲಿ ಚಲಿಸುವಾಗ, ಮುಖ್ಯವಾಗಿ ತಿರುವುಗಳಲ್ಲಿ ವಾಹನದ ಸ್ಥಿರತೆಯನ್ನು ಕಾಪಾಡುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೊಸ ಟಿವಿಎಸ್ ಅಪಾಚಿ ಆರ್ ಆರ್ 310 ಆರ್ ಟಿ ಸ್ಲಿಪ್ಪರ್ ಕ್ಲಚ್ ಒಂದು ಶಕ್ತಿಯುತ ಹಾಗೂ ಅಧಿಕ ಉಪಯುಕ್ತತೆಯ ಸೌಲಭ್ಯವಾಗಿದ್ದು, ಇದು ನಗರ ಪ್ರದೇಶ, ಹೆದ್ದಾರಿಗಳ ಜೊತೆಗೆ ರೇಸಿಂಗ್ ಸ್ಪರ್ಧೆಗಳಿಗೂ ಉತ್ತಮವಾಗಿವೆ.
ಇದು ರೇಸಿಂಗ್ ಟ್ರ್ಯಾಕ್ ಗಳಲ್ಲಿ ವೇಗವಾಗಿ ಸಾಗುವಾಗ ಹಿಂಭಾಗದ ದೃಶ್ಯಗಳನ್ನು ಸ್ಪಷ್ಟವಾಗಿ ತೋರಿಸುವ ಡಿಒಎಚ್ ಸಿ (ಡಬ್ಬಲ್ ಓವರ್ ಹೆಡ್ ಕ್ಯಾಮೆರಾ), ಲಿಕ್ವಿಡ್ ಕೂಲ್ಡ್ ಇಂಜಿನ್ ಹಾಗೂ ಆಯಿಲ್ ಕೂಲಿಂಗ್ ತಂತ್ರಜ್ಞಾನ, 6-ವೇಗದ ಗೇರ್ ಬಾಕ್ಸ್, ಸ್ಪರ್ಧೆಗಳಿಗೆ ಅನುಕೂಲಕರವಾದ ವರ್ಟಿಕಲ್ ಸ್ಪೀಡೋ-ಕಮ್-ಟ್ಯಾಕೋಮೀಟರ್, ಮೈಕೆಲಿನ್ ಸ್ಟ್ರೀಟ್ ಸ್ಪೋರ್ಟ್ಸ್ ಚಕ್ರಗಳನ್ನು ಒಳಗೊಂಡಿದೆ. ಇದು ಕೆಂಪು ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

