ಫೆ 2 ರಿಂದ 9ರವರೆಗೆ ೯ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

೯ನೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಸಿನಿಮೋತ್ಸವ 2017ರ ಫೆಬ್ರವರಿ 2 ರಿಂದ 9 ವರೆಗೆ 8 ದಿನಗಳ ಕಾಲ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದೆ
ಫೆ 2 ರಿಂದ 9ರವರೆಗೆ ೯ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ಫೆ 2 ರಿಂದ 9ರವರೆಗೆ ೯ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
Updated on
ಬೆಂಗಳೂರು: ೯ನೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಸಿನಿಮೋತ್ಸವ 2017ರ ಫೆಬ್ರವರಿ 2 ರಿಂದ 9 ವರೆಗೆ 8 ದಿನಗಳ ಕಾಲ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಅವರು ತಿಳಿಸಿದ್ದಾರೆ. 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸಿನಿಮೋತ್ಸವ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಬೆಂಗಳೂರಿನಲ್ಲಿ ಫೆಬ್ರವರಿ 2 ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ಓರಾಯನ್ ಮಾಲ್ ಪಿ.ವಿ.ಆರ್. ಸಿನಿಮಾಸ್‍ನ 11 ಪರದೆಗಳು ಮತ್ತು ಮೈಸೂರಿನ ಮಾಲ್ ಆಫ್ ಮೈಸೂರು ಐನಾಕ್ಸ್ ಸಿನಿಮಾಸ್‍ನ 4 ಪರದೆಗಳಲ್ಲಿ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಫೆಬ್ರವರಿ 9 ರಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ" ಎಂದಿದ್ದಾರೆ. 
ಸುಮಾರು 50 ದೇಶಗಳ ಒಟ್ಟು 180 ಚಿತ್ರಗಳು ಈ ಸಿನಿಮೋತ್ಸವದ ವಿವಿಧ ವಿಭಾಗಗಳಲ್ಲಿ ಪ್ರದರ್ಶನ ಕಾಣಲಿವೆ. ಸಿನಿಮೋತ್ಸವದ ವಿಶೇಷ ಆಕರ್ಷಣೆಗಳೆಂದರೆ ಏಶಿಯನ್ ಚಿತ್ರಗಳ ಸ್ಪರ್ಧೆ, ಭಾರತೀಯ ಚಿತ್ರಗಳ ಸ್ಪರ್ಧೆ, ಕನ್ನಡ ಚಿತ್ರಗಳ ಸ್ಪರ್ಧೆ ಹಾಗೂ ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ಸ್ಪರ್ಧೆಯನ್ನೂ ಸಹ ಈ ವರ್ಷದಿಂದ ಆಯೋಜಿಸಲಾಗಿದೆ.
ಇದೆ ಮೊದಲ ಬಾರಿಗೆ ಜನಪ್ರಿಯ ಕಾನಂದ ಸಿನೆಮಾಗಳ ಸ್ಪರ್ಧೆ ವಿಭಾಗವು ಇದ್ದು, ಪ್ರದರ್ಶನಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಐದು ಸಿನೆಮಾಗಳನ್ನು ಆಯ್ಕೆ ಮಾಡಲಿದೆ ಎಂದು ಸಿನಿಮೋತ್ಸವದ ನಿರ್ದೇಶಕ ವಿದ್ಯಾಶಂಕರ್ ಹೇಳಿದ್ದಾರೆ. 
ಸಮಕಾಲಿನ ವಿಶ್ವ ಸಿನಿಮಾ: ಲಕ್ಸೆಂಬರ್ಗ್, ಈಜಿಪ್ಟ್, ವಿಯೆಟ್ನಾಂ ಮತ್ತು ಏಶಿಯಾ ಫೆಸಿಫಿಕ್ ದೇಶಗಳ ನೋಟ. ಉತ್ಸವದಲ್ಲಿ ಎರಡು ವಿಶೇಷ ವಿಭಾಗಗಳಿದ್ದು ವಿಷಯಾಧರಿತ ವಿಭಾಗದಲ್ಲಿ ಅದ್ವೀತಿಯ ಹಾಸ್ಯಚಿತ್ರಗಳು ಮತ್ತು ಸ್ತ್ರೀಶಕ್ತಿ ವಿಭಾಗದಲ್ಲಿ ಮಹಿಳಾ ನಿರ್ದೇಶಕರುಗಳ ಚಿತ್ರಗಳು ಸೇರಿವೆ. ಪ್ರದರ್ಶನಗೊಳ್ಳುವ ವಿಶ್ವ ಸಿನಿಮಾಗಲ್ಲಿ  ೩೦% ಗೂ ಹೆಚ್ಚಿನ ಸಿನೆಮಾಗಳು ಮಹಿಳೆಯರೇ ನಿರ್ದೇಶಿಸಿರುವುದು ವಿಶೇಷ. 
"ಸಿನಿಮಾ ಪ್ರದರ್ಶನಗಳ ಜೊತೆ ಸಿನಿಮಾ ಶೈಕ್ಷಣಿಕ ಕಾರ್ಯಾಗಾರ, ವಿಚಾರ ಸಂಕಿರಣಗಳಿಗೆ ಸಹ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು, ಪ್ರತಿದಿನ 2 ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕನ್ನಡ ಸಿನಿಮಾಗಳಿಗೆ ವಿಶೇಷವಾಗಿ ಜಾಗತಿಕ ನಿರ್ಮಾಣ ಸಂಸ್ಥೆಗಳ ಹೂಡಿಕೆ, ಕನ್ನಡ ಸಿನಿಮಾಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಅವಕಾಶಗಳು ಮತ್ತು ಕನ್ನಡ ಸಿನಿಮಾಗಳ ಆನ್‍ಲೈನ್ ಮಾರಾಟದ ವಿಷಯಗಳ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಜಾಗತಿಕ ಸಿನಿಮಾಗಳ ವಿಭಾಗದಲ್ಲಿ ಶೇ. 30 ಕ್ಕಿಂತ ಹೆಚ್ಚು ಮಹಿಳಾ ನಿರ್ದೇಶಕರಿರುವ ಸಿನಿಮಾಗಳನ್ನು ಆಯ್ಕೆಮಾಡಲು ತೀರ್ಮಾನಿಸಲಾಗಿದೆ" ಎಂದು ಉತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್ ಹೇಳಿದ್ದಾರೆ.
"ಸರ್ಕಾರ ಚಲನಚಿತ್ರ ರಂಗದ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಸರ್ಕಾರ ಪ್ರಕಟಿಸಿರುವ ಜನತಾ ಚಿತ್ರಮಂದಿರ ಸೇರಿದಂತೆ ಅನೇಕ ಯೋಜನೆಗಳು ಉತ್ತಮವಾಗಿವೆ. ಈ ಚಿತ್ರೋತ್ಸವದಲ್ಲಿ ಕನ್ನಡದ ಜನಪ್ರಿಯ ಮನರಂಜನಾ ಚಿತ್ರಗಳ ಸ್ವರ್ಧೆಯನ್ನು ಪರಿಗಣಿಸಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ, ಇದು ಬಹುದಿನಗಳ ಬೇಡಿಕೆಯಾಗಿತ್ತು" ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ತಿಳಿಸಿದ್ದಾರೆ. 
ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಮಾತನಾಡಿ "ಕಳೆದ ಸಾಲಿನ ಉತ್ಸವದಲ್ಲಿ ಅತ್ಯುತ್ತಮ ಚಿತ್ರಗಳು ಪ್ರದರ್ಶನ ಕಂಡರೂ ಪ್ರಚಾರದ ಕೊರತೆಯಿಂದ ಸಾರ್ವಜನಿಕರನ್ನು ಹೆಚ್ಚಿನ ಮಟ್ಟದಲ್ಲಿ ತಲುಪಲಾಗಲಿಲ್ಲ, ಅದಕ್ಕಾಗಿ ಈ ಬಾರಿ ಉತ್ಸವದ ಪ್ರಚಾರಕ್ಕಾಗಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಿನಿಮಾಗಳ ಪ್ರದರ್ಶನಗಳಿಗಾಗಿ ಜಾಗತಿಕ ಉತ್ತಮ ಉದಾಹರಣೆಯಾಗಬೇಕೆಂಬುದು ಅವರ ಉದ್ದೇಶ" ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com