
ಬೆಂಗಳೂರು: ಡಿಸೆಂಬರ್ ೪ ರಿಂದ ೧೧ ರವರೆಗೆ ನಡೆಯುವ ಬೆಂಗಳೂರು ಅಂತರಾಷ್ಟ್ರೀಯ ಚಲಚಿತ್ರೋತ್ಸವದ ಹಿನ್ನೋಟದಲ್ಲಿ ಖ್ಯಾತ ಪೋಲೆಂಡ್ ಚಲನಚಿತ್ರ ನಿರ್ದೇಶಕ-ನಿರ್ಮಾಪಕ ಕ್ರಿಸ್ಟಾಫ್ ಜಾನುಸ್ಸಿ ಅವರ ೭ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಲ್ಲದೆ ವಿಶ್ವ ಸಿನೆಮಾ ಸ್ಪರ್ಧೆಯಲ್ಲಿ ಕೂಡ ೨೦೧೩ ರಲ್ಲಿ ನಿರ್ಮಾಣಗೊಂಡ ಇದೇ ನಿರ್ದೇಶಕನ ಒಂದು ಸಿನೆಮಾ ಪ್ರದರ್ಶನಗೊಳ್ಳುತ್ತಿದೆ.
ಕ್ರಿಸ್ಟಾಫ್ ಜಾನುಸ್ಸಿ ಬೌದ್ಧಿಕ ಸಿನೆಮಾ ನಿರ್ದೇಶಕ ಎಂದು ಬಣ್ಣಿಸುವ ಚಲನಚಿತ್ರೋತ್ಸವದ ನಿರ್ದೇಶಕ ವಿದ್ಯಾಶಂಕರ್, ಸಿನೆಮಾಗಳನ್ನು ಮಾಡುವ ಸಾಧ್ಯತೆಗಳನ್ನು ನಾವಿಲ್ಲಿ ತೋರಿಸುತ್ತಿದ್ದೇವೆ ಎನ್ನುತ್ತಾರೆ. ವಿಜ್ಞಾನದ ವಿಷಯಗಳನ್ನು ತೆಗೆದುಕೊಂಡು ಸಿನೆಮಾಗಳನ್ನು ಮಾಡುವ ಜಾನುಸ್ಸಿ ನಮ್ಮ ಕಾಲದ ಅತ್ಯುತ್ತಮ ನಿರ್ದೇಶಕರಲ್ಲೊಬ್ಬರು ಎನ್ನುತ್ತಾರೆ.
"ದ ಇಲ್ಲುಮಿನೇಶನ್" ಚಲನಚಿತ್ರ ಭೌತ ವಿಜ್ಞಾನಿಯೊಬ್ಬನ ಕಥೆ. ಅವನ ಕೆಲಸ, ಪ್ರೇಮ ಮತ್ತು ಜೀವನದಾಚೆಗಿನ ಸತ್ಯಕ್ಕೆ ಅವನ ತುಡಿತ ಇವುಗಳನ್ನು ತಾತ್ವಿಕ ನೆಲಟ್ಟಿನಲ್ಲಿ ಚರ್ಚಿಸುವ ಸಿನೆಮಾ ಜಾನುಸ್ಸಿ ಅವರ ಅತ್ಯುತ್ತಮ ಸಿನೆಮಾಗಳಲ್ಲಿ ಒಂದು.
ಈ ಕೆಳಕಂಡ ಸಿನೆಮಾಗಳು ಕೂಡ ಪ್ರದರ್ಶನ ಕಾಣಲಿವೆ.
ದ ಸಪ್ಲಿಮೆಂಟ್
ಇನ್ ಫುಲ್ ಗ್ಯಾಲಪ್
ಕಾಮೋಫ್ಲೇಜ್
ಲೈಫ್ ಆಸ್ ಅ ಫೇಟಲ್ ಎಸ್ ಟಿ ಡಿ
ಪರ್ಸೋನಾ ನಾನ್ ಗ್ರಾಟಾ
ಈ ಚಲನಚಿತ್ರಗಳಲ್ಲದೆ ೨೦೧೩ ರಲ್ಲಿ ನಿರ್ಮಾಣವಾದ "ಫಾರಿನ್ ಬಾಡಿ" ಚಲನಚಿತ್ರ ಕೂಡ ಅಂತರಾಷ್ಟ್ರೀಯ ಚಲನಚಿತ್ರಗಳ ಸ್ಪರ್ಧೆಯ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.
ಚಲನಚಿತ್ರೋತ್ಸವದಲ್ಲಿ ಜಾನುಸ್ಸಿ ಅವರು ಖುದ್ದಾಗಿ ಭಾಗವಹಿಸಿ ಸಂವಾದದಲ್ಲಿ ಪಾಲ್ಗೊಳಲಿದ್ದಾರೆ.
Advertisement