ಲೈಂಗಿಕ ಹಿಂಸೆ: ಬೆಂಗಳೂರು ಸಿನಿಮೋತ್ಸವದಲ್ಲಿ ೬ ವಿಶೇಷ ಚಲನಚಿತ್ರ ಪ್ರದರ್ಶನ

ನಗರ ಮತ್ತು ದೇಶಾದ್ಯಂತ ಹೆಚ್ಚುತ್ತಿರುವ ಲೈಂಗಿಕ ಅಪರಾಧಗಳ ಬಗ್ಗೆ ವಿಶೇಷ ಬೆಳಕು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರ ಮತ್ತು ದೇಶಾದ್ಯಂತ ಹೆಚ್ಚುತ್ತಿರುವ ಲೈಂಗಿಕ ಅಪರಾಧಗಳ ಬಗ್ಗೆ ವಿಶೇಷ ಬೆಳಕು ಚೆಲ್ಲಲು ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ೭ ನೆ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ವಿಶ್ವದ ವಿವಿಧ ದೇಶಗಳಿಂದ ೬ ಚಲನಚಿತ್ರಗಳ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದೆ.

ಭಾರತದಲ್ಲಿ ಲೈಂಗಿಕ ಹಿಂಸೆ ಎಂದರೆ ಸಾಮಾನ್ಯವಾಗಿ ರೇಪ್ ಅಷ್ಟೇ ಎಂಬ ಅಭಿಪ್ರಾಯವಿದೆ. ಆದರೆ ಲೈಂಗಿಕ ಹಿಂಸೆ-ಅಪರಾಧಗಳಲ್ಲಿ ವಿವಿಧ ಸ್ಥರಗಳಿವೆ. ಲೈಂಗಿಕೆ ಹಿಂಸೆಗೆ ಒಳಪಡುವುದು ಮಹಿಳೆಗೆ ಒಂದು ಹಿಂಸೆಯಾದರೆ, ಅವಳ ಮುಂದಿನ ಜೀವನದ ಬಗ್ಗೆ ಬೆಳಕಿ ಚೆಲ್ಲುವ ಹಲವಾರು ಸಿನೆಮಾಗಳಿವೆ. ಅಂಥ ಸಿನೆಮಾಗಳನ್ನು ನಾವು ಇಲ್ಲಿ ಪ್ರದರ್ಶಿಸಲು ಪ್ರಯತ್ನಿಸಿದ್ದೇವೆ ಎನ್ನುತ್ತಾರೆ, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ನಿರ್ದೇಶಕ ವಿದ್ಯಾಶಂಕರ್.

ಎಥಿಯೋಪಿಯಾ, ಡೆನ್ಮಾರ್ಕ್ ಅಮೇರಿಕಾ, ಇರಾನ್, ಅಫ್ಘಾನಿಸ್ಥಾನ ಮತ್ತು ಐರ್ಲಾಂಡ್  ದೇಶಗಳ ಈ ಸಿನೆಮಾಗಳು ಲೈಂಗಿಕ ಹಿಂಸೆಯ ವಿವಿಧ ಸ್ತರಗಳನ್ನು ಸೆರೆ ಹಿಡಿಯುವ ಚಿತ್ರಗಳು. ನ್ಯಾಶಲಿಸಂ ಎಂಬ ವಸ್ತು ಹೇಗೆ ಮಹಿಳೆಯರನ್ನು ಹಿಂಸಿಸುತ್ತದೆ ಹಾಗೂ ಹಂತ ಹಂತವಾಗಿ ಮಹಿಳೆಯರನ್ನು ನಗಣ್ಯ ಮಾಡುತ್ತದೆ ಎಂಬ ವಿಷಯಾಧಾರಿತವಾಗಿ ಈ ಸಿನೆಮಾಗಳು ಮಹತ್ವವಾಗಿವೆ

ಡೆನ್ಮಾರ್ಕ್ ನ ಚಲನಚಿತ್ರ "ಮಿಷನ್ ರೇಪ್- ಎ ಟೂಲ್ ಆಫ್ ವಾರ್"  ಅಂತಹ ಸಿನೆಮಾದಲ್ಲೊಂದು. ೧೯೯೨-೯೩ ರ ಬಾಲ್ಕನ್ ಯುದ್ಧದಲ್ಲಿ ಸಾವಿರಾರು ಮಹಿಳೆಯರು, ಯುದ್ಧ ತಂತ್ರಕ್ಕೆ ಒಳಗಾಗಿ ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಈ ಮಹಿಳೆಯರೆಲ್ಲಾ ಒಟ್ಟಾಗಿ ಸೇರಿ ನ್ಯಾಯಕ್ಕಾಗಿ ಒತ್ತಾಯಿಸುತ್ತಾರೆ. ಅಪರಾಧವನ್ನು ಎಸಗಿದವರಲ್ಲಿ ಸುಮಾರು ೬೧ ಜನ ಕಾನೂನು ಶಿಕ್ಷೆಗೆ ಒಳಗಾಗುತ್ತಾರೆ. ಕಾನೂನು ಮಹಿಳೆಯರಿಗೆ ಹೇಗೆ ಆತ್ಮಾಭಿಮಾನ-ಸ್ವಾಭಿಮಾನಗಳನ್ನು ತುಂಬಬಲ್ಲುದು ಎಂಬುದನ್ನು ಈ ಸಿನೆಮಾ ಹೇಳುತ್ತದೆ. ಈ ಚಿತ್ರವನ್ನು ಇಬ್ಬರು ಮಹಿಳಾ ನಿರ್ದೇಶಕಿಯರು ಅನೆಟ್ಟೆ ಮಾರಿ ಒಸ್ಲೇನ್ ಮತ್ತು ಕಾಟಿಯಾ ಫಾರ್ಬೆಟ್ ಪೀಟರ್ಸನ್ ನಿರ್ದೇಶಿಸಿದ್ದಾರೆ.

ಇನ್ನು ಎಥಿಯೋಪಿಯಾದ "ಆಬ್ಲಿವಿಯನ್" ಸಿನೆಮಾದ ಕಥಾವಸ್ತು ವಿಭಿನ್ನ. ಈ ಚಿತ್ರಕಥೆ ನಡೆಯುವ ಪ್ರದೇಶದಲ್ಲಿ ಸಂಪ್ರದಾಯದ ಪ್ರಕಾರ ಹೆಣ್ಣು ಮಕ್ಕಳನ್ನು ಅಪಹರಿಸಿ ಬಲವಂತವಾಗಿ ಮದುವೆ ಆಗಬಹುದು. ಇಂತಹ ಕೃತ್ಯಕ್ಕೆ ಒಳಗಾದ ಹೆಣ್ಣು ಮಗಳೊಬ್ಬಳು ತನ್ನ ಗಂಡನನ್ನು ಕೊಲೆ ಮಾಡಿ ನೈತಿಕವಾಗಿ ಸರಿಯಾಗಿದ್ದರೂ ಕಾನೂನನ್ನು ಎದುರಸಿಬೇಕಾದ ಕಥೆಯನ್ನು ಹೇಳುತ್ತದೆ. ಈ ಚಿತ್ರದ ನಿರ್ದೇಶಕ ಬೆರ್ಹೇಣ್ ಮೆಹಾರಿ.

ಇನ್ನುಳಿದ ಚಿತ್ರಗಳು ಹೀಗಿವೆ:-
"ಸ್ಟೋನಿಂಗ್ ಸೋರಯ" - ಅಮೇರಿಕ - ನಿರ್ದೇಶಕ: ಸೈರಸ್ ನಾವ್ರಾಸ್ತೆ
"ದ ಪೆಟರ್ನಲ್ ಹೌಸ್"- ಇರಾನ್ - ನಿರ್ದೇಶಕ: ಕಿಯಾಂಡೂಶ್ ಅಯ್ಯಾರಿ
"ಒಸಾಮಾ" - ಅಫ್ಘಾನಿಸ್ಥಾನ - ನಿರ್ದೇಶಕ: ಸಿದ್ದಿಕ್ ಬರ್ಮಾಕ್
"ಮೆಗ್ಡಾಲ್ನೆ ಸಿಸ್ಟರ್ಸ್" - ಐರ್ಲಾಂಡ್ - ಪಿಟರ್ ಮುಲ್ಲನ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com