ಬಿಫ್ಸ್: ಕನ್ನಡ ಸಿನೆಮಾಗಳಿಗೆ ವಿಶ್ವ ಮಾರುಕಟ್ಟೆ ಒದಗಿಸಿಕೊಡಲು ಕಾರ್ಯಾಗಾರ

ಡಿಸೆಂಬರ್ ನಾಲ್ಕರಂದು ಪ್ರಾರಂಭವಾಗಲಿರುವ ಏಳನೇ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ, ಕನ್ನಡದ, ಭಾರತದ ಮತ್ತು ವಿಶ್ವದ ಸುಮಾರು ೧೭೦ ಕ್ಕೂ ಹೆಚ್ಚು ಸಿನೆಮಾಗಳ ಪ್ರದರ್ಶನ...
ಸಿನೆಮೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ "ಅತ್ತಿ ಹಣ್ಣು ಮತ್ತು ಕಣಜ" ಸಿನೆಮಾದ ಒಂದು ಸ್ಟಿಲ್
ಸಿನೆಮೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ "ಅತ್ತಿ ಹಣ್ಣು ಮತ್ತು ಕಣಜ" ಸಿನೆಮಾದ ಒಂದು ಸ್ಟಿಲ್

ಬೆಂಗಳೂರು: ಡಿಸೆಂಬರ್ ನಾಲ್ಕರಂದು ಪ್ರಾರಂಭವಾಗಲಿರುವ ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ, ಕನ್ನಡದ, ಭಾರತದ ಮತ್ತು ವಿಶ್ವದ ಸುಮಾರು ೧೭೦ ಕ್ಕೂ ಹೆಚ್ಚು ಸಿನೆಮಾಗಳ ಪ್ರದರ್ಶನ, ಸಂವಾದಗಳಲ್ಲದೆ ಕನ್ನಡ ಚಲನಚಿತ್ರಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸಲು ವೇದಿಕೆ ಸೃಷ್ಟಿಯಾಗುತ್ತಿದೆ.

ಈ ನಿಟ್ಟಿನಲ್ಲಿ ಸಿನೆಮೋತ್ಸವದ ವೇಳೆ ಕನ್ನಡ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ಇಟಾಲಿಯೊ ಸ್ಪಿನೇಲಿ ಮತ್ತು ದೀಪ್ತಿ ಚುನ್ಹಾ ಇವರುಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. "ಇವರಿಬ್ಬರೂ ಏಶಿಯಾ ಸಿನೆಮಾಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ಈಗಾಗಲೇ ಬಹಳ ಶ್ರಮಿಸಿದ್ದಾರೆ. ಇವರುಗಳ ಜೊತೆಯ ಮಾತುಕತೆಯೊಂದಿಗೆ ವಿಶ್ವ ಮಾರುಕಟ್ಟೆಗೆ ಕನ್ನಡ ಸಿನೆಮಾಗಳನ್ನು ಕೊಂಡೊಯ್ಯಲು ಸಹಕಾರಿಯಾಗುತ್ತದೆ" ಎನ್ನುತಾರೆ ಸಿನಿಮೋತ್ಸವದ ಕಲಾ ನಿರ್ದೇಶಕ ಎನ್ ವಿದ್ಯಾಶಂಕರ್.

"ರಜನಿ ಕಾಂತ್ ಅವರ ಲಿಂಗಾ ಈಗಾಗಲೇ ವಿಶ್ವದ ಹಲವಾರು ಭಾಷೆಗಳಿಗೆ ಮಾರಾಟವಾಗಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಕನ್ನಡ ಸಿನೆಮಾಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯಲು ಸಹಕರಿಸುತ್ತವೆ" ಎನ್ನುತ್ತಾರೆ ಕನ್ನಡ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ಎಸ್ ವಿ ರಾಜೇಂದ್ರ ಸಿಂಗ್ ಬಾಬು. "ಕನ್ನಡದ ಹಲವಾರು ಚಿತ್ರ ನಿರ್ದೇಶಕರಿಗೆ ಕಡಿಮೆ ವೆಚ್ಚದಲ್ಲಿ ಪಾಸುಗಳನ್ನು ಒದಗಿಸಿದ್ದೇವೆ. ಹೆಚ್ಚೆಚ್ಚು ಸಿನೆಮಾ ನಿರ್ಮಾತೃಗಳು ಇಂತಹ ಸಿನೆಮೋತ್ಸವದಲ್ಲಿ ಭಾಗವಹಿಸಿ ವಿಶ್ವದ ಸಿನೆಮಾಗಳಿಂದ ಜ್ಞಾನಾರ್ಜನೆ ಪಡೆಯಬೇಕು" ಎಂದಿದ್ದಾರೆ.

ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಯದಲ್ಲಿ ಇದೇ ರೀತಿಯ ಪ್ರಾದೇಶಿಕ ಚಲನಚಿತ್ರಗಳ ಪ್ರಚಾರಕ್ಕೆ "ಫಿಲಂ ಬಾಜಾರ್" ಎಂಬ ಸಮಾನಾಂತರ ಕಾರ್ಯಕ್ರಮ ಜರುಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com