ಸಿನಿಮೋತ್ಸವದಲ್ಲಿ ನೋಡಲೆಬೇಕಾದ ೫ ಚಿತ್ರಗಳು

ಡಿಸೆಂಬರ್ ೪ ರಿಂದ ಡಿಸೆಂಬರ್ ೧೧ ರ...
ಟು ಡೇಸ್, ಒನ್ ನೈಟ್ ಸಿನೆಮಾದ ಸ್ಟಿಲ್
ಟು ಡೇಸ್, ಒನ್ ನೈಟ್ ಸಿನೆಮಾದ ಸ್ಟಿಲ್

ಬೆಂಗಳೂರು: ಡಿಸೆಂಬರ್ ೪ ರಿಂದ ಡಿಸೆಂಬರ್ ೧೧ ರವರೆಗೆ ನಡೆಯುವ ೭ನೆ ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ, ನೀವು ಮಿಸ್ ಮಾಡಬಾರದ ಐದು ಸಿನೆಮಾಗಳ ಪಟ್ಟಿ ಇಲ್ಲಿದೆ.

ಸ್ವಪಾನಂ ( The Voiding Soul / ಭಾರತ/ ಮಲಯಾಳಂ/ ೧೫೦ ನಿಮಿಷ)

ಶಾಜಿ ಎನ್ ಕರುಣ್ ಅವರ ಆರನೆಯ ಚಲನಚಿತ್ರ ಇದು. ಈ ಚಲನಚಿತ್ರ, ಜೀವನ ಮತ್ತು ಕಲೆಯನ್ನು ಅಕ್ಕಪಕ್ಕದಲ್ಲಿಟ್ಟು, ಒಬ್ಬನ ಪ್ಯಾಶನ್ ಅರಳುವುದಕ್ಕೆ ಸೋತಾಗ ಉಂಟಾಗುವ ಭಾವನೆಗಳನ್ನು ಸೆರೆ ಹಿಡಿಯುತ್ತದೆ. ಈ ಸಿನೆಮಾದ ನಟರಲ್ಲೊಬ್ಬರಾದ ಜಯರಾಂ ತಮ್ಮ ಜೇವನದ ಅದ್ಭುತ ನಟನೆ ನೀಡಿದ್ದಾರೆ. ಕಾದಂಬರಿ, ಲಕ್ಷ್ಮಿ ಗೋಪಾಲ ಸ್ವಾಮಿ, ಸಿದ್ದಿಕ್ ಮತ್ತು ವಿನೀತ್ ಇತರ ನಟರು.

ಕಳೆದ ದುಬೈ ಚಲನಚಿತ್ರೋತ್ಸವದಲ್ಲಿ ಈ ಸಿನೆಮಾ ಪ್ರದರ್ಶನ ಕಂಡಿತ್ತು. ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನೆಮಾಗಳ ವಿಭಾಗದಲ್ಲಿ ಪ್ರದರ್ಶನ ಕಂಡಿದ್ದು, ಬಿಫ್ಸ್ ನಲ್ಲಿ ಏಶಿಯಾ ಸಿನೆಮಾ ಸ್ಪರ್ಧಾ ವಿಭಾಗದಲ್ಲಿ ಸ್ಥಾನ ಪಡೆದಿದೆ.

ಟು ಡೇಸ್, ಒನ್ ನೈಟ್ (ಬೆಲ್ಜಿಯಮ್/ಇಟಲಿ/ಫ್ರಾನ್ಸ್/೯೫ ನಿಮಿಷ)

ಸದ್ಯಕ್ಕೆ ಯೂರೋಪಿಯನ್ ದೇಶಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಬಿಂಬಿಸಿರುವ ಟು ಡೇಸ್, ಒನ್ ನೈಟ್ ಸಿನೆಮಾದ ನಿರ್ದೇಶಕರು ಡಾರ್ಡೆನ್ನೆ ಸಹೋದರರು. ಆಸ್ಕರ್ ಪ್ರಶಸ್ತಿ ವಿಜೇತೆ ಮಾರಿಯೋನ್ ಕಾಟಿಲ್ಲಾರ್ಡ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ, ತನ್ನ ಕೆಲಸ ಉಳಿಸಿಕೊಳ್ಳಲು ಒಬ್ಬ ಮಹಿಳೆ ತನ್ನ ಗಂಡ ಜೊತೆ,  ತನ್ನ ಸಹೋದ್ಯೋಗಿಗಳು ತಮ್ಮ ಬೋನಸ್ ಅನ್ನು ತ್ಯಜಿಸುವಂತೆ ಒಪ್ಪಿಸುವ ಕಥಾ ಹಂದರವಿದೆ. ಈ ಸಿನೆಮಾ ವಿಶ್ವ ಸಿನೆಮಾಗಳ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ.

ಮಿಷನ್ ರೇಪ್, ಎ ಟೂಲ್ ಆಫ್ ವಾರ್ (ಡೆನ್ಮಾರ್ಕ್/ ೫೮ ನಿಮಿಷ)

ಅನೆತ್ತೆ ಮಾರಿ ಒಸ್ಲೇನ್ ಮತ್ತು ಕಾಟಿಯಾ ಫೋರ್ಬೆಟ್ ಪೀಟರ್ಸನ್ ನಿರ್ದೇಶಿಸಿರುವ ಈ ಚಲನಚಿತ್ರ ಆಧುನಿಕ ಯುದ್ಧದ ತಂತ್ರವಾಗಿ ರೇಪ್ ಉಪಯೋಗಿಸಿಕೊಳ್ಳುವುದರ ಕಥಾ ಹಂದರವಿದೆ.

೧೯೯೨-೯೫ ರ ಬಾಲ್ಕನ್ ಯುದ್ಧದ ವೇಳೆಯಲ್ಲಿ ಗುಂಪಾಗಿ ರೇಪ್ ಮಾಡಿದ್ದಕ್ಕೆ ಸುಮಾರು ೪೦ ರಿಂದ ೪೫ ಸಾವಿರ ಮಹಿಳೆಯರು ಬಲಿಪಶುಗಳಾಗಿದ್ದರು. ಇಪ್ಪತ್ತು ವರ್ಷಗಳ ನಂತರ ಕೆಲವೇ ಕೆಲವು ಜನ ಈ ಲೈಂಗಿಕ ಹಿಂಸೆಯ ಯುದ್ಧ ಅಪರಾಧಗಳು ತನಿಖೆಯಾಗಿ ಕೆಲವರಿಗಷ್ಟೇ ಶಿಕ್ಷೆಯಾಗಿದೆ. ತಾವು ಘನತೆಯಿಂದ ಬದುಕಲು ಈ ಕಾನೂನು ನ್ಯಾಯವಷ್ಟೇ ಸಹಕಾರಿ ಅವರಿಗೆ.

ದ ಕಾನ್ಸ್ಟಾಂಟ್ ಫ್ಯಾಕ್ಟರ್ (ಪೋಲೆಂಡ್/೧೯೮೦)

ಹಿನ್ನೋಟ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಚಲನಚಿತ್ರದ ನಿರ್ದೇಶಕ ಕ್ರಿಸ್ಟಾಫ್ ಜಾನುಸ್ಸಿ. ವಿಜ್ಞಾನದ ಬಗ್ಗೆ ಆಸಕ್ತಿಯಿರುವ ವಿಥೋಲ್ದ್ ಎಂಬ ಯುವಕ ತನ್ನ ವೈಯಕ್ತಿಕ ನೆಮ್ಮದಿಗೆ ಹೋರಾಡುವ ಕಥೆ ಇದು. ತಾನು ೧೨ ವರ್ಷದ ಬಾಲಕನಿರುವಾಗ ಹಿಮಾಲಯ ಏರಲು ಹೋಗಿ ಮೃತಪಟ್ಟ ತನ್ನ ತಂದೆಯ ನೆನಪಿನಲ್ಲಿ ಆ ಪರ್ವತ ಶ್ರೇಣಿಯನ್ನು ಏರಲು ಢೃಢ ಸಂಕಲ್ಪ ಮಾಡುತ್ತಾನೆ. ತನ್ನ ಮಿಲಿಟರಿ ಸೇವೆಯ ನಂತರ ಗಣಿತಶಾಸ್ತ್ರವನ್ನು ಓದಿ ಎಲೆಕ್ಟ್ರಿಕ್ ಎಂಜಿನಿಯರ್ ಆಗಿ, ದುಡ್ಡು ಉಳಿತಾಯ ಮಾಡಿ ವಿದೇಶ ಪ್ರವಾಸ ಮಾಡಬೇಕು ಎಂದುಕೊಂಡಿರುತ್ತಾನೆ.

ಆದರೆ ತನ್ನ ಸಂಸ್ಥೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ಕಂಡು ಹಿಡಿದ ನಂತರ ತನ್ನ ಆಸೆಗಳನ್ನೆಲ್ಲಾ ತೊರೆದು ಅದರ ವಿರುದ್ಧ ಹೋರಾಟಕ್ಕೆ ನಿಲ್ಲುತ್ತಾನೆ. ಆದರೆ ಇದೇ ಅವನ್ನು ಮೂಲೆಗುಂಪಾಗಿಸಿ, ತನ್ನ ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಇಡಾ (ಪೋಲೆಂಡ್/ ೮೨ ನಿಮಿಷ)

ಪೋಲೆಂಡ್ ನ ಯುದ್ಧಾ ನಂತರದ ೬೦ರ ದಶಕದಲ್ಲಿ ನಡೆಯುವ ಈ ಸಿನೆಮಾ, ಯುವ ನನ್ ಒಬ್ಬಳ ಕಥೆ ಹೇಳುತ್ತದೆ.

ಈ ಸಿನೆಮಾದ ನಟರ ಅದ್ಭುತ ನಟನೆ ಮತ್ತು ಅತ್ಯುತ್ತಮ ಚಿತ್ರೀಕರಣಕ್ಕೆ ಈ ಸಿನೆಮಾ ನೋಡಲೇಬೇಕು. ಇದು ಬಿಫ್ಸ್ ನಲ್ಲಿ ವಿಮರ್ಶಕರ ಮೆಚ್ಚುಗೆ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ.

-ಶ್ಯಾಮಾ ಕೃಷ್ಣ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com