ಬೆಂಗಳೂರು: ನಾಳೆ ಶನಿವಾರ ವಾರಾಂತ್ಯ. ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಮೂರನೇ ದಿನ. ಬಿಡುವಾಗಿ, ಸಿನೆಮಾಗಳ ಪಟ್ಟಿ ಮಾಡಿ, ಸಮಯವನ್ನು ಸದ್ಬಳಕೆ ಮಾಡಿ ಒಳ್ಳೆಯ ಸಿನೆಮಾಗಳನ್ನು ನೋಡಿ. ಈ ಸಮಯದಲ್ಲಿ ಸಿನೆಮಾಸಕ್ತ ಪ್ರಶಾಂತ್ ಕೃಷ್ಣ ಮತ್ತು ಕನಡಪ್ರಭ[ಡಾಟ್]ಕಾಂನ ಆಯ್ಕೆಯ ಈ ಐದು ಚಿತ್ರಗಳನ್ನು ಸಾಧ್ಯವಾದರೆ ನೋಡಿ.
೧. ಅಂಬಾಸಡರ್ ಟು ಬರ್ನ್ - ಹಂಗೇರಿ - ನಿರ್ದೇಶಕ: ಅಟ್ಟಿಲ್ಲಾ ಶಾಜ್ - ೭೬ ನಿಮಿಷ - ಫನ್ ಸಿನೆಮಾಸ್ - ಸ್ಕ್ರೀನ್ ೨ ರಲ್ಲಿ ಪ್ರದರ್ಶನ (ಬೆಳಗ್ಗೆ ೧೦:೧೫ ಕ್ಕೆ)
೨. ದ ಎಂಪ್ಟಿ ಹವರ್ಸ್ - ಮೆಕ್ಸಿಕೋ - ನಿರ್ದೇಶಕ:ಆರನ್ ಫರ್ನಾಂಡೆಸ್ - ೧೦೫ ನಿಮಿಷ - ಫನ್ ಸಿನೆಮಾಸ್ - ಸ್ಕ್ರೀನ್ ೧ ರಲ್ಲಿ ಪ್ರದರ್ಶನ (ಮಧ್ಯಾಹ್ನ ೧೨:೧೫ ಕ್ಕೆ)
೩. ಡೋಂಟ್ ಕ್ಲಿಕ್ - ಸೌತ್ ಕೊರಿಯಾ - ನಿರ್ದೇಶಕ: ಕಿಂ ತ್ಯಾ ಕ್ಯುಂಗ್ - ೧೦೭ ನಿಮಿಷ - ಸುಲೋಚನದಲ್ಲಿ ಪ್ರದರ್ಶನ (ಮಧ್ಯಾಹ್ನ ೨:೩೦ ಕ್ಕೆ)
೪. ಪ್ರಕೃತಿ - ಭಾರತ - ನಿರ್ದೇಶಕ: ಪಂಚಾಕ್ಷರಿ - ೧೧೪ ನಿಮಿಷ - ಲಿಡೋ ಸ್ಕ್ರೀನ್ ೧ ರಲ್ಲಿ ಪ್ರದರ್ಶನ (ಸಂಜೆ ೬ ಘಂಟೆಗೆ)
೫. ಟ್ರಾಪ್ಪಡ್ - ಇರಾನ್ - ನಿರ್ದೇಶಕ: ಪರ್ವೀಜ್ ಶಹಬಾಜಿ - ಲಿಡೋ ಸ್ಕ್ರೀನ್ ೨ ರಲ್ಲಿ ಪ್ರದರ್ಶನ (ರಾತ್ರಿ ೮:೪೫ ಕ್ಕೆ)
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ