
ಬೆಂಗಳೂರು: ಈಗಾಗಲೇ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿರುವ ಮರಾಠಿ ಸಿನಿಮಾ ಏಕ್ ಹಜಾರಚಿ ನೋಟ್ ಚಲನಚಿತ್ರದ ನಿರ್ದೇಶಕ ಶ್ರೀಹರಿ ಸಾಠೆ "ಬೋಧನೆ ಮಾಡದೆ ಸಾಮಾಜಿಕ ವಿಷಗಳನ್ನು ಚರ್ಚಿಸಲು ನನಗೆ ಇಷ್ಟ" ಎಂದು ಪತ್ರಿಕಾಘೋಷ್ಟಿಯಲ್ಲಿ ತಿಳಿಸಿದ್ದಾರೆ. ಅಮೆರಿಕಾವಾಸಿ ಶ್ರೀಹರಿ ಅವರ ಈ ಸಿನೆಮಾ ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಷೇಶ ಜ್ಯೂರಿ ಪ್ರಶಸ್ತಿ ಪಡೆದಿತ್ತು. ದುಖ್ತರ್ ಎಂಬ ಪಾಕಿಸ್ತಾನಿ ಚಲನಚಿತ್ರವನ್ನು ಕೂಡ ನಿರ್ಮಿಸಿರುವ ಇವರು, ಏಕ್ ಹಜಾರಚಿ ನೋಟ್ ಸಿನಿಮಾಗೆ ಮಹಾರಾಷ್ಟ್ರದ ವಿದರ್ಭ ಜಿಲ್ಲೆಯ ಕಡು ಬಡವ ರೈತರ ಜೀವನವನ್ನು ಅಧ್ಯಯನ ಮಾಡಿದ್ದಾಗಿ ತಿಳಿಸಿದರು. ದುಖ್ತರ್ ಕೂಡ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಎಚ್ ಐ ವಿ ಪೀಡಿತರ ಬಗ್ಗೆ ಅದೊಮ್ಯ ಎಂಬ ಸಿನಿಮಾದ ನಿರ್ದೇಶಕಿ ಬಾಬ್ಬಿ ಶರ್ಮಾ ಬರುವಾ ಮಾತನಾಡಿ, ಜಾಗತಿಕ ಸಮಸ್ಯೆ ಆಗಿರುವ ಏಡ್ಸ್ ಪೀಡಿತ ಎಲ್ಲ ರೋಗಿಗಳಿಗೂ ನಾನು ಈ ಸಿನೆಮಾವನ್ನು ಅರ್ಪಿಸಿದ್ದೇನೆ ಎಂದರು. ಅಸ್ಸಾಮಿ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಪರಿಣಾಮಕಾರಿಯಾಗಿ ಸಿನಿಮಾದಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನೆ ಎಂದರು.
ದ ರಿವರ್ ಆಫ್ ಕಲರ್ಸ್ ಚಲನಚಿತ್ರದ ಬಾಂಗ್ಲಾದೇಶಿ ನಿರ್ದೇಶಕಿ ಶಹನೋಯಾಜ್ ಕಾಕೋಯ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಬೆಂಗಳೂರು ಸಿನಿಮೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
Advertisement