ಫೆಡ್ರಿಕೊ ಫೆಲಿನಿ
ಫೆಡ್ರಿಕೊ ಫೆಲಿನಿ

ಸಿನಿಮೋತ್ಸವ: 'ಫೆಲಿನಿ ಆನ್ ಫೆಲಿನಿ', ಪುಸ್ತಕದ ಆಯ್ದ ಭಾಗ

ಇಟಲಿಯ ಸಿನೆಮಾ ನಿರ್ದೇಶಕ ಫೆಡ್ರಿಕೊ ಫೆಲಿನಿ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕರುಗಳಲ್ಲೊಬ್ಬರು.
Published on

ಇಟಲಿಯ ಸಿನೆಮಾ ನಿರ್ದೇಶಕ ಫೆಡ್ರಿಕೊ ಫೆಲಿನಿ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕರುಗಳಲ್ಲೊಬ್ಬರು. ಅವರು ಚಲನಚಿತ್ರೋತ್ಸವಗಳ ಬಗ್ಗೆ ಆಡಿರುವ ಈ ಮಾತುಗಳನ್ನು ಏಳನೇ ಬೆಂಗಳೂರು  ಅಂತರಾಷ್ಟ್ರೀಯ ಸಿನಿಮೊತ್ಸವದ ಸಮಯದಲ್ಲಿ, ಅವರ ' ಫೆಲಿನಿ ಆನ್ ಫೆಲಿನಿ' ಪುಸ್ತಕದಿಂದ ಆಯ್ದು ಇಲ್ಲಿಡಲಾಗಿದೆ.
 
ನಾನು ಚಲನಚಿತ್ರೋತ್ಸವಗಳನ್ನು ಇಷ್ಟ ಪಡುವುದಿಲ್ಲ


ಇವುಗಳಲ್ಲಿ ನನಗೆ ಹಿಡಿಸದ ಪರಿಸರ ಇರುತ್ತದೆ-ಸ್ಪರ್ಧಾತ್ಮಕ ಪರಿಸರ, ಇದು ನನ್ನ ಮನಸ್ಥಿತಿಗೆ ಹೊರತಾದದ್ದು. ಈ ಉತ್ಸವಗಳು ಮತ್ತು ನ್ಯೂಯಾರ್ಕ್ ನ  ಕಾಕ್ ಟೆಲ್  ಪಾರ್ಟಿಗಳು: ಇವೆರಡರಲ್ಲೂ ಒಂದೆ ತರಹದ ವಾತಾವರಣ, ಅಲ್ಲಿಗೆ ಬರುವವರೆಲ್ಲಾ ಬರೀ  ಮಾತು ಮಾತು ಮಾತು. ಅವರೆಲ್ಲಾ ನನ್ನನ್ನು ಪ್ರಶ್ನಾತ್ಮಕ ದೃಷ್ಟಿಯಿಂದಲೇ ನೋಡುತ್ತಿರುತ್ತಾರೆ. ನಾನು ಸಿನೆಮಾ ಮಾಡಿ ಮುಗಿಸಿದ ಮೇಲೆ, ಅದು ಬಿಡುಗಡೆಯಾಗದಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಚಿತ್ರಗಳು ಗೆದ್ದಾಗ ಖುಷಿಯಾಗುತ್ತದೆ, ಆದರೆ ಅವು ಸೋತಾಗ ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ನಾನು ಸಿನೆಮಾ ಮಾಡಿ ಮುಗಿಸಿದ ಮೇಲೆ ನನಗೆ ಮಾಡುವಂತೆ ಹೇಳುವ ನಂತರದ ಕೆಲಸಗಳು ನನನ್ನು ಆಯಾಸ ಮಾಡುತ್ತವೆ.

ನನ್ನ ಸಿನೆಮಾಗಳ ನಿರ್ಮಾಕ ರಿಜೋಲ್ಲಿ ೭೫ ವರ್ಷದವರು, ಸಿನಿಮೋತ್ಸವಗಳಿಗೆ ಹೋಗಲು ಇಷ್ಟ ಪಡುತ್ತಾರೆ. ಅವರ ಯಾಚ್ ನಲ್ಲಿ ಹೋಗಲು ಅವರಿಗೆ ಇಷ್ಟ. 'ಯಾಚ್ ಮೇಲೆ ಒಳ್ಳೆಯ ಸಮಯ ಕಳೆಯಬಹುದು, ಸುಂದರವಾದ ಮಹಿಳೆಯರು ನೋಡ ಸಿಗುತ್ತಾರೆ, ಒಳ್ಳೆಯ ಊಟ ಮಾಡಬಹುದು' ಎಂದೆಲ್ಲ ಅವರು ನನಗೆ ಹೇಳುತ್ತಾರೆ. ನಾನು ಅವರಿಗೆ ಹೇಳುವುದೆಂದರೆ, ಈ ಚಲನಚಿತ್ರೋತ್ಸವಗಳು ಬಹಳ ಅಪಾಯಕಾರಿ. ನನ್ನ ಈ ಸಿನೆಮಾಗೆ ಪ್ರಚಾರ ಬೇಕಿಲ್ಲ. ಸಿನಿಮೊತ್ಸವಗಳಿಗೆ ಹೋದರೆ ನಿಮ್ಮ ಘನತೆ ಹೆಚ್ಚುವುದಿಲ್ಲ. ಚಿತ್ರೋತ್ಸವಗಳೆಲ್ಲಾ ಹಳೆಯ ಕಾಲದ್ದು. ನನಗೆ ಸ್ಪರ್ಧಾತ್ಮಕ ಪರಿಸರ ಕಂಡರೆ ಕೋಪ. ಆ ಪತ್ರಿಕಾ ಗೋಷ್ಠಿಗಳನ್ನು ಕಂಡರೆ ಆಗುವುದಿಲ್ಲ. ಆದರೆ ರಿಜೋಲ್ಲಿಗೆ ಇವೆಲ್ಲ ಸಮ್ಮತವಲ್ಲ, ಆದುದರಿಂದ ನಾನೇ ಸೋತು ಒಪ್ಪಿಕೊಂಡುಬಿಡುತ್ತೇನೆ. ನನಗೆ ರಿಜೋಲ್ಲಿ ಜೊತೆ ಜಗಳ ಮಾಡಲು ಇಷ್ಟವಿಲ್ಲ. ಅಲ್ಲದೆ ನನ್ನ ಕೆಲಸದ ಹೊರಗೆ ಬೇರೆ ವಿಷಯಗಳ ಮೇಲೆ ನನಗೆ ನಿರ್ಧಿಷ್ಟ ಯೋಚನೆಗಳಿಲ್ಲ. ಸಿನಿಮೋತ್ಸವದ ಸ್ಪರ್ಧಾತ್ಮಕ ವಾತಾವರಣ ನನಗೆ ಹಿಡಿಸುವುದಿಲ್ಲ ಎಂದಷ್ಟೇ ನನಗೆ ಗೊತ್ತಿರುವುದು. ನಾನು ಚಿಕ್ಕವನಿದ್ದಾಗ, ಸ್ಪರ್ಧೆಯಲ್ಲಿ ಭಾಗವಹಿಸಲು ನಿರಾಕರಿಸುತ್ತಿದ್ದೆ. ವಿದ್ಯಾರ್ಥಿಯಾಗಿ ಹಾಗೂ ನಂತರ ಸಮಯದಲ್ಲಿ, ಸುಂದರವಾದ ಮಹಿಳೆಯರಿಗೆ ಯಾವತ್ತೂ ಸ್ಪರ್ಧಿಸಲಿಲ್ಲ. ಸ್ಪರ್ಧೆಯಲ್ಲಿ ನನಗೆ ಕಳೆದುಕೊಳ್ಳುವ ಹಾಗೆ ಅನಿಸುತ್ತದೆ. ನಾನು ಸರಿಯಾದ ಮನಸ್ಥಿತಿಯಲ್ಲಿ ಹೋರಾಡಬಲ್ಲೆ, ಆದರೆ ಅದಕ್ಕೆ ಮೊದಲು ನನಗೆ ನಿರ್ಲಿಪ್ತತೆಯ ಅನುಭವವಾಗಬೇಕು.

ಚಲನಚಿತ್ರೋತ್ಸವಗಳೆಂದರೆ ನನಗೆ ಕಲಾ ಉತ್ಸವದಂತಿರಬೇಕು


ಇಂತಹ ಪ್ರದರ್ಶನಗಳು ಉತ್ಸವ-ಹಬ್ಬಗಳ, ಮತ್ತು ಉತ್ಸಾಹದ ವಾತಾವರಣದಲ್ಲಿ ಅಂದರೆ ಚೈತನ್ಯ ತುಂಬಿದ, ತೆರೆದ ಮನಸ್ಸಿರುವ ಜಾಗಗಳಲ್ಲಿ ನಡೆಯಬೇಕು. ಸಂಸ್ಕೃತಿ ಅಂದರೆ ಕಳೆಗುಂದಿದ ವಾತಾವರಣದಲ್ಲಿ, ಬೆಳಕಿಲ್ಲದ ಕಪ್ಪು ಜಾಗಗಳಲ್ಲಿ, ಭಯಪಡಿಸುವ ಹಾಗಿರಬೇಕಿಲ್ಲ, ಅದರಲ್ಲೂ ಸಾಂಸ್ಕೃತಿಕ ಕಾರ್ಯಕ್ರಮ ಸಿನೆಮಾಗಳನ್ನು ತೋರಿಸುವಾಗ, ದುಖಃ ತಪ್ತ, ಸುದೀರ್ಘ ಕಾಲದ ಚಿಂತೆಯಿಂದ ಬೇಸತ್ತ ಪರಿಸರವನ್ನು ನಿರ್ಮಿಸುವುದು ಸ್ವಾಭಾವಿಕ ಪ್ರಕೃತಿಗೆ ವಿರುದ್ಧ. ವೆನಿಸ್ ನಲ್ಲಿ ನಡೆಯುವ ಸಿನೆಮಾ ಪ್ರದರ್ಶನಗಳಲ್ಲಿ ಅಧಿಕೃತ ಕಲಾತ್ಮಕ ಪರಿಸರದ ಸುತ್ತ ಸ್ವಲ್ಪ ಪೆದ್ದುತನದ, ಪ್ರದರ್ಶನ ಮನೋಭಾವದ ವಾತಾವರಣ ಕೂಡ ಇಲ್ಲದೆ ಹೋದರೆ ನನಗೆ ಬೇಸರವಾಗುತ್ತದೆ. ಒಂದು ಸಿನೆಮಾ ಚೆನ್ನಾಗಿದ್ದರೆ, ಅದು ಒಬ್ಬಳು ಸುಂದರ ಮಹಿಳೆಯಿಂದ ಆಗಿದ್ದರೂ ಅಥವಾ ಪ್ರಚಾರಕ್ಕೆ ಹಲುಬುವ ನಟಿಯಿಂದ ಚೆನ್ನಾಗಿದ್ದರೂ ಅಥವಾ ಸಿನೆಮಾಗೆ ಸಂಬಂಧಿಸಿದ ಒಂದು ನಿರ್ಮಾಪಕರಿಂದಲೆ ಇರಬಹುದು, ಸಿನೆಮಾ ಒಳ್ಳೆಯದೇ ಆಗಿರುತ್ತದೆ. ಇಂತಹ ಮಸಾಲೆ ಅಂಶಗಳು ಸಿನೆಮಾವನ್ನು ಒಪ್ಪಿಕೊಳ್ಳಲು ಸಹಕರಿಸುತ್ತವೆ. ಆದರೆ ಸಿನೆಮಾ ಚೆನ್ನಾಗಿಲ್ಲವಾದರೆ, ಇಂತಹ ಅಂಶಗಳನ್ನು ಬಿಟ್ಟಾಕ್ಷಣ ಸಿನೆಮಾ ಉತ್ತಮಗೊಳ್ಳುವುದಿಲ್ಲ.

ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಅತೀವ ಶಿಸ್ತು ಮತ್ತು ಅನುಕೂಲವಲ್ಲದ ಭಾರಿ ಸಿದ್ಧತೆಗಳು ಮತ್ತು ಪೂರ್ವ ಯೋಜನೆಗೆ ಬಿಡದೆ ಅಂಟಿಕೊಳ್ಳುವುದು ಇವೆಲ್ಲ ಬಹುಷಃ ತೋರಿಸುವುದಕ್ಕೆ ಒಳ್ಳೆಯದು ಇಲ್ಲದಿರುವುದನ್ನು ನಿಭಾಯಿಸಲು ಮಾಡುವ ವ್ಯವಸ್ಥೆ ಎಂದೆನಿಸುತ್ತದೆ ನನಗೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com