ಕನಸಿನ ಚಿಟ್ಟೆಯ ಹಿಡಿಯಲು ಹೊರಟು

ಯಾವುದೇ ಘನ ಉದ್ದೇಶವಿಲ್ಲದೇ, ಸುಮ್ಮನೆ ಏನೋ ಹಂಚಿಕೊಳ್ಳಲು ಸ್ಮಾರ್ಟ್ ಫೋನ್‌ನಿಂದ ಫೇಸ್‌ಬುಕ್‌ಗಾಗಿ...
ಕನಸಿನ ಚಿಟ್ಟೆಯ ಹಿಡಿಯಲು ಹೊರಟು
Updated on

ಯಾವುದೇ ಘನ ಉದ್ದೇಶವಿಲ್ಲದೇ, ಸುಮ್ಮನೆ ಏನೋ ಹಂಚಿಕೊಳ್ಳಲು ಸ್ಮಾರ್ಟ್ ಫೋನ್‌ನಿಂದ ಫೇಸ್‌ಬುಕ್‌ಗಾಗಿ ಬರೆದಿದ್ದು ಕಡೆಗೊಂದು ಸಾಹಿತ್ಯ ಕೃತಿಯಾಗಿ ಆಕಾರ ತಾಳಿತು.. ಕುತೂಹಲಕ್ಕೆ ಗೂಗಲ್‌ನಲ್ಲಿ ಮೊಬೈಲ್ ಫೋನ್‌ನಿಂದ ಕೃತಿ ರಚಿಸಿದವರು ಯಾರಿದ್ದೀರಿ? ಎಂದೆ. ಆಗ ನನ್ನ ಎಂದೂ ಕಾಣದ ಹೊಸ ಜಗತ್ತೇ ತೆರೆದುಕೊಂಡು ನನ್ನನ್ನು ವಿನೀತನನ್ನಾಗಿಸಿತು.

ಜಪಾನ್ ದೇಶದ ಯೋಶಿ ಎಂಬಾತ 2003ರಲ್ಲಿ ಜಗತ್ತಿನ ಮೊದಲ ಸೆಲ್‌ಫೋನ್ ಕಾದಂಬರಿ 'ಡೀಪ್ ಲವ್‌' ಬರೆದ. ಅದು ಜನಪ್ರಿಯವಾಗಿ ಮುಂದೆ ಪುಸ್ತಕ ರೂಪದಲ್ಲಿ ಪ್ರಕಟವಾಗಿ ಲಕ್ಷಾಂತರ ಪ್ರತಿಗಳು ಮಾರಾಟವಾದುವು. ಮುಂದೆ ಟಿವಿ ಸೀರಿಯಲ್ ಕೂಡಾ ಆಗಿ ಜನಪ್ರಿಯತೆ ಗಳಿಸಿತು. ಹಾಗಾಗಿ ಜಪಾನನ್ನು ಸೆಲ್‌ಫೋನ್ ಕೃತಿಗಳ ಜನ್ಮಸ್ಥಳ ಎಂದು ಗುರುತಿಸಲಾಗುತ್ತದೆ.  ನಂತರ ಇದು ಅಮೇರಿಕಾ, ಯೂರೋಪ್, ಆಫ್ರಿಕಾ ದೇಶಗಳಲ್ಲಿ ಹಬ್ಬಿ ಹೆಚ್ಚು ಜನಪ್ರಿಯತೆ ಗಳಿಸಿತು.

ಈ ಸೆಲ್‌ಫೋನ್ ಕೃತಿಗಳು ತಮ್ಮ ಪುಟ್ಟ ಗಾತ್ರ, ಆಕರ್ಷಕ ಶೈಲಿ ಹಾಗು ಬಹುಮುಖ್ಯವಾಗಿ ಅಂಗೈಯಲ್ಲಿರುವ ಮೊಬೈಲ್‌ನಲ್ಲೇ ಸಿಗುವುದರಿಂದ ಯುವಜನರನ್ನು ಬಹಳ ಆಕರ್ಷಿಸಿಬಿಟ್ಟಿತು.  'ಮಿನಿಮಲಿಸಂ'- ಅಂದರೆ ಕಡಿಮೆ ಪದಗಳಲ್ಲೇ  ಪರಿಣಾಮಕಾರಿಯಾಗಿ ಕತೆ ಹೇಳುವ ಪರಿಯನ್ನು ಇದು ನೆಚ್ಚಿಕೊಂಡಿತು ಮತ್ತು ಬೆಳೆಸಿತು.

ಕನಸಿನ ಚಿಟ್ಟೆ ಹಿಡಿಯಲು ಹೊರಟು ಕನ್ನಡ ಸಾಹಿತ್ಯ ಜಗತ್ತಿನ, ಪ್ರಾಯಶಃ ಭಾರತದ ಮೊದಲ ಮೊಬೈಲ್‌ಫೋನ್ ಕೃತಿ. ಎಂಟು ಜ್ಞಾನಪೀಠ ಪಡೆದು ಬೀಗುತ್ತಿರುವ ಕನ್ನಡಮ್ಮನ ಕಿರೀಟಕ್ಕೆ ಸಂದ ಮತ್ತೊಂದು ನವಿಲು ಗರಿ.
-ವಿದ್ಯಾಶಂಕರ್ ಹರಪನಹಳ್ಳಿ



ಈ ವಾರದ ಹೊತ್ತಗೆ : ಕನಸಿನ ಚಿಟ್ಟೆಯ ಹಿಡಿಯಲು ಹೊರಟು
ಬೆಲೆ : ರು. 90
ಲೇಖಕರು: ವಿದ್ಯಾಶಂಕರ್ ಹರಪನಹಳ್ಳಿ
ಪ್ರಕಾಶಕರು: ಅದ್ವೈತ್ ಪಬ್ಲಿಕೇಷನ್, ಬೆಂಗಳೂರು
#58, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ
ಭವಾನಿ ನಗರ, ರೈಲ್ವೇಸ್ ಲೇಔಟ್,  1ನೇ ಹಂತ, ಬೆಂಗಳೂರು-5600056
ಫೋನ್: 080-2324 0136, 09611133446
ಇಮೇಲ್:vidyashankar.h@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com