
ಮಲೆನಾಡಿನ ದಟ್ಟ ವಿವರಗಳು, ಬಹುರಾಷ್ಟ್ರೀಯ ಔಷಧ ಕಂಪನಿಗಳ ದುಷ್ಟವ್ಯೂಹ, ತುಸುಮಟ್ಟಿಗೆ ಎಕ್ಸೆಂಟ್ರಿಕ್ ಅನ್ನಬಹುದಾದ ಪಾತ್ರಗಳು, ನಿಗೂಢ ಮೂಲಿಕೆ ಮದ್ದುಗಳ ವಿವರಗಳನ್ನೆಲ್ಲ ಒಳಗೊಂಡಿರುವ ಈ ಕಾದಂಬರಿ ಕನ್ನಡ ಸಾಹಿತ್ಯಕ್ಕೆ ಹೊಸ ಪ್ರತಿಭೆಯೊಂದರ ಆಗಮನವನ್ನು ನಿಸ್ಸಂಶಯವಾಗಿ ಸೂಚಿಸುತ್ತಿದೆ. ತುಸು ಎಳೆ ತಪ್ಪಿದರೂ ಮಾಮೂಲಿ ಕ್ರೈಂ ಥ್ರಿಲ್ಲರ್ ಆಗಬಹುದಾಗಿದ್ದ ಕೃತಿಯ ಓಟ ಹಾಗೂ ಬೆಳವಣಿಗೆಗಳನ್ನು ಅದರ ನಿರೂಪಣೆಯ ಧಾಟಿ, ಕೃತಿಯ ಆರಂಭ ಹಾಗೂ ಅಂತ್ಯಗಳ ವಿಲಕ್ಷಣತೆಗಳು ಬದಲಾಯಿಸಿವೆ. 3 ಜಿ ಸರ್ಕಲ್ನ ಥಿಯೋಡರ್ ಪಾತ್ರದ ಮೂಲಕ, ಕರ್ವಾಲೋದ ಮಂದಣ್ಣನಿಗೆ ಉತ್ತರಾಧಿಕಾರಿಯೊಬ್ಬ ಸಿಕ್ಕಿದ್ದಾನೆ. ನವಿರುತನ ಅಚ್ಚುಕಟ್ಟುತನ' ಸೊಫಿಸ್ಟಿಕೇಶನ್ಗಳಿಂದ ನರಳುತ್ತಿರುವ ಕನ್ನಡ ಕಾದಂಬರಿ ಸೊಫಿಸ್ಟಿಕೇಶನ್ಗಳಿಂದ ನರಳುತ್ತಿರುವ ಕನ್ನಡ ಕಾದಂಬರಿ ಲೋಕಕ್ಕೆ ಥಿಯೋಡರ್ನ ಕಚ್ಚಾತನ ,ದೇಸಿಜ್ಞಾನ ಮತ್ತು ಹುಂಬತನಗಳು ಜೀವಂತಿಕೆಯ ಹೊಸ ಸ್ಪರ್ಶ ನೀಡಲಿ...
-ಹರೀಶ್ ಕೇರ
ಈ ವಾರದ ಹೊತ್ತಗೆ: 3ಜಿ ಸರ್ಕಲ್ (ಕಾದಂಬರಿ)
ಬೆಲೆ : ರು.90
ಲೇಖಕರು: ಕೀರ್ತಿ ಕೋಲ್ಗಾರ್
ಪ್ರಕಾಶಕರು
ಅಭಿರುಚಿ ಪ್ರಕಾಶನ
ನಂ.386, 14ನೆಯ ಮುಖ್ಯರಸ್ತೆ
3ನೆಯ ಅಡ್ಡರಸ್ತೆ, ಸರಸ್ವತೀಪುರ
ಮೈಸೂರು-9
ಫೋನ್: 9980560013
ಇಮೇಲ್: abhiruchiprakshana@yahoo.co.in
Advertisement