ಸುಗುಣ ಕುಬೇರ ಮತ್ತಿತ್ತರ ಕಥನಗಳು

ಈ ಕತೆಗಳು ಊರೊಂದರ ಚರಿತ್ರೆಯನ್ನು ಹೇಳುತ್ತವೆ. ತನ್ನ ನೆಲಕ್ಕೆ ಆಳವಾಗಿ ಅಂಟಿಕೊಂಡಿರುವ ಜೀವವೊಂದು ಅಲ್ಲಿನ ಬದುಕಿನ ...
ಸುಗುಣ ಕುಬೇರ ಮತ್ತಿತ್ತರ ಕಥನಗಳು
Updated on

ಈ ಕತೆಗಳು ಊರೊಂದರ ಚರಿತ್ರೆಯನ್ನು ಹೇಳುತ್ತವೆ. ತನ್ನ ನೆಲಕ್ಕೆ ಆಳವಾಗಿ ಅಂಟಿಕೊಂಡಿರುವ ಜೀವವೊಂದು ಅಲ್ಲಿನ ಬದುಕಿನ ಹೊಳೆಯೊಳಗೆ ಕಂಠಮಟ್ಟ ಮುಳುಗಿದರೂ ಅದೇ ಸಮಯದಲ್ಲಿ ಅದರಿಂದ ಬೇರೆಯಾಗಿ, ಬದಲಾಗುತ್ತಿರುವ ಅದರ ತಿರುವು ಮುರುವು, ಏರಿಳಿವು, ಬಣ್ಣಗಳನ್ನು ಸೂಕ್ಷ್ಮವಾಗಿ ಗಮನಿಸುವ, ಕೆಲವೊಮ್ಮೆ ಅದರ ದಾರಿಯನ್ನು ಬದಲಿಸುವ ಸಾಹಸ ಕೂಡಾ ಮಾಡುತ್ತದೆ. ವ್ಯಕ್ತಿ, ಸಂಸ್ಥೆ, ಸಮುದಾಯದ ಬೀರುಕು ಸರಿಮಾಡುವ, ಜೀವಜಲದ ಮೇಲೆ ಕವಿದು ಬಿದ್ದಿರುವ ಮಣ್ಣನ್ನು ಅತ್ತ-ಇತ್ತ ಸರಿಸುವ, ನೋವಿಗೆ ಮಿಡಿಯುವ, ಸಹಾಯ ಹಸ್ತ ಚಾಚುವ, ಕೈ ಮೀರಿದ ಕ್ರೌರ್ಯ, ಸಣ್ಣತನಕ್ಕೆ ಸಿಡಿಯುವ 'ನಿರೂಪಕನ ಪಾತ್ರ' ಕಾಲದೇಶಬದ್ಧ ಈ ಕತೆಗಳು ಎಲ್ಲಿಯೂ ಸಂಭವಿಸಬಹುದಾದ್ದು ಎನ್ನಿಸಿಬಿಡುತ್ತವೆ. ನಿರ್ದಿಷ್ಟತೆ ಎಂಬುದು ಲೋಕ ಸಾಮಾನ್ಯತೆಯಾಗಿ ಮಾರ್ಪಾಟಾಗುವುದೇ ಈ ಕತೆಗಳ ದೊಡ್ಡ ಶಕ್ತಿ. ಇಲ್ಲಿ ಸಂಪತ್ತಯ್ಯಂಗಾರ್ ಅವರು ಎಲ್ಲಿಯೂ ತಮ್ಮನ್ನು ಮುಂದುಮಾಡಿಕೊಳ್ಳುವುದಿಲ್ಲ. ಘಟನೆಗಳು, ಸನ್ನಿವೇಶಗಳು ಮತ್ತು ಪ್ರಸಂಗಗಳನ್ನು ಮುಂಚೂಣಿಗೆ ತಂದು ನಿಲ್ಲಿಸುತ್ತಾರೆ. ತಾವು ನಂಬುವ ನೈತಿಕ ನೆಲೆಯಿಂದ ಲೋಕವನ್ನು ನೋಡುತ್ತಾರೆ. ಈ ನೈತಿಕತೆ ಎಂಬುದು ಬದುಕಿನ ಕುಲುಮೆಯಲ್ಲಿ ಬೇಯ್ದು ಚೊಕ್ಕವಾಗಿದ್ದು, ಮಾನವೀಯವಾಗಿದ್ದು, ಜೀವಪರ ಕಾಳಜಿಯುಳ್ಳದ್ದಾದ್ದರಿಂದ ಘನ ಮತ್ತು ಆಪ್ತವಾಗುತ್ತದೆ.


ಈ ವಾರದ ಹೊತ್ತಗೆ: ಸುಗುಣ ಕುಬೇರ ಮತ್ತಿತ್ತರ ಕಥನಗಳು

ಲೇಖಕರು: ಎಂ.ಎಸ್. ಸಂಪತ್ತಯ್ಯಂಗಾರ್
ಪ್ರಕಾಶನ: ವಿಭಾ ಶ್ರೀ ಪ್ರಕಾಶನ
ನಂ.272, 'ಕರುಣ' 1ನೇ ಮಹಡಿ, 11ನೇ ಕ್ರಾಸ್, ಟೆಲಿಕಾಂ ಲೇಔಟ್ ,
ವಿಜಯನಗರ, ಪೈಪ್‌ಲೇನ್ ರೋಡ್
ಬೆಂಗಳೂರು -5600023
ದೂ: 98456 39808/ 080 23509981
ಬೆಲೆ: ರು.115

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com