
'ಪುಸ್ತಕಮನೆ' ಹರಿಹರಪ್ರಿಯ ಅವರು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಪುಸ್ತಕದ ಬೆನ್ನುಡಿಯಲ್ಲಿ ಸಿ.ಎನ್. ರಾಮಚಂದ್ರನ್ ಅವರು ಪುಸ್ತಕದ ಬಗ್ಗೆ ಬರೆದದ್ದು ಹೀಗೆ:
ಸಾಹಿತಿ ಮಿತ್ರ ಹರಿಹರಪ್ರಿಯ ಅವರು ತಾವು ಸಂಕಲಿಸಿರುವ 'ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು' ಎಂಬ ಸಂಕಲನಕ್ಕೆ ಮುನ್ನುಡಿಯನ್ನು ಬರೆಯಲು ಕೇಳಿದಾಗ , ಇಬ್ಬರು ಪರಿಚಿತ ವಿದ್ವಾಂಸರ ನಡುವೆ ಪತ್ರ ಮುಖೇನ ನಡೆದಿರುವ ಸಂವಾದವನ್ನು ತಿಳಿಯುವ ಕುತೂಹಲ ನನಗೂ ಇದ್ದು ಸಂತೋಷದಿಂದ ಆ ಕಾರ್ಯವನ್ನು ಒಪ್ಪಿಕೊಂಡೆ..ಈ ನೆಲೆಯಲ್ಲಿ , ಈ ಸಂಕಲನ ಬನ್ನಂಜೆಯವರ ಪ್ರಾಚೀನ-ಅರ್ವಾಚೀನ ಸಾಹಿತ್ಯ ಕ್ಷೇತ್ರದಲ್ಲಿರುವ ಅಗಾಧ ಪಾಂಡಿತ್ಯ, ಉದಯೋನ್ಮುಖ ಲೇಖಕನ ಬಗ್ಗೆ ಅವರಿಗಿರುವ ಪ್ರೀತಿ-ಸೌಜನ್ಯಗಳು, ಮತ್ತು ಪತ್ರಿಕೋದ್ಯಮದ ಚೌಕಟ್ಟಿನಲ್ಲಿ ಅವರು ಅನುಭವಿಸುತ್ತಿದ್ದ ಒತ್ತಡಗಳು ಇವೆಲ್ಲವನ್ನೂ ಪ್ರತಿಫಲಿಸುತ್ತದೆ...ಓದುಗರಿಗೂ ಈ ಕೃತಿಯಿಂದ ಅನೇಕ ಹೊಸ ಒಳನೋಟಗಳು, ಹಳೆಯ ವಿಚಾರಗಳನ್ನು ಪುನರ್ವಿಮರ್ಶಿಸುವ ಅವಕಾಶ, ಇತ್ಯಾದಿ ದೊರೆಯುತ್ತವೆಂದು ನಾನು ನಂಬಿದ್ದೇನೆ."
-ಸಿ.ಎನ್. ರಾಮಚಂದ್ರನ್
ಈ ವಾರದ ಹೊತ್ತಗೆ: ಬನ್ನಂಜೆ ಗೋವಿಂದಾಚಾರ್ಯರ ಪತ್ರಗಳು
ಸಂಕಲನ:
'ಪುಸ್ತಕಮನೆ' ಹರಿಹರಪ್ರಿಯ
ಪ್ರಕಾಶಕರು:
ಆಕೃತಿ ಪುಸ್ತಕ
ರಾಜಾಜಿನಗರ, ಬೆಂಗಳೂರು
ಬೆಲೆ: ರು.99
Advertisement