
ಸ್ವಗತಗಳಂತೆಯೋ, ವರದಿಗಳಂತೆಯೋ ಕಾಣುವ ಇತ್ತೀಚಿನ ಅನೇಕ ಕವನ ಸಂಕಲನಗಳ ಸಾಲಿನಲ್ಲಿ ವಿಭಿನ್ನವಾಗಿ ನಿಲ್ಲುವ ಸಾಮರ್ಥ್ಯ ಖಂಡಿತಾ ಈ ಸಂಕಲನಕ್ಕಿದೆ ಎಂದರೆ ತಪ್ಪಾಗಲಾರದು.
ಚೇತನ ಸೊಲಗಿಯವರ ಕವಿತೆಗಳಲ್ಲಿ ಸಾಮಾಜಿಕ ತಲ್ಲಣಗಳ ಮೇಲೆ ಸಾತ್ವಿಕವಾದ ಸಿಟ್ಟಿದೆ. ಕೆಳವರ್ಗದವರೆನ್ನಿಸಿಕೊಂಡು ತುಳಿತಕ್ಕೊಳಗಾದವರ ಮೇಲೆ ಅನುಕಂಪವಿದೆ. ದೇಶ-ಭಾಷೆಗಳ ಮೇಲೆ ಅದಮ್ಯ ಅಭಿಮಾನವಿದೆ. ಬಡತನ , ನೀಚ ರಾಜಕಾಣ, ಹಸಿವು, ನಲ್ಲ -ನಲ್ಲೆಯರ ಲಲ್ಲೆ ಮುಂತಾದ ಅನೇಕ ಸಂದಿಗ್ದತೆಗಳಿಗೆ -ಸಂದರ್ಭಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಹೊಸಬನೊಬ್ಬನ ಕವಿತೆ ಇಷ್ಟು ಧ್ವನಿಪೂರ್ಣವಾಗಿರುವುದು ನಿಜಕ್ಕೂ ಆಶ್ಚರ್ಯ ತರುತ್ತದೆ.
-ವಿ. ನಾಗೇಂದ್ರ ಪ್ರಸಾದ್
ಬೆಂಗಳೂರು
ಈ ವಾರದ ಹೊತ್ತಗೆ : ಸಾಫ್ಟ್ ಜಗತ್ತಿನಲ್ಲಿ (ಕವನ ಸಂಕಲನ)
ಲೇಖಕರು: ಚೇತನ ಸೊಲಗಿ
ಪ್ರಕಾಶಕರು : ದಲಿತ ಸಾಹಿತ್ಯ ಪರಿಷತ್ತು , ರಾಜ್ಯ ಘಟಕ
ಗದಗ
ಬೆಲೆ: ರು.70
Advertisement