
ಕಳೆದ 2014ರಲ್ಲಿ ಮಧ್ಯಂತರ ರೈಲ್ವೇ ಬಜೆಟ್ ಅನ್ನು ರಾಜ್ಯದವರೇ ಆದ ಡಿ.ವಿ ಸದಾನಂದ ಗೌಡ ಅವರು ಮಂಡಿಸಿದ್ದರು. ಆದರೆ ಇಲ್ಲಿಯವರೆಗೂ ರಾಜ್ಯಕ್ಕೆ ಘೋಷಣೆಯಾದ ರೈಲುಗಳು ಇನ್ನೂ ಹಳಿಗೆ ಬಾರದೆ ಇರುವುದು ಸೋಜಿಗವೇ ಸರಿ.
* ಕಳೆದ ಬಜೆಟ್’ನಲ್ಲಿ ರಾಜ್ಯಕ್ಕೆ ಘೋಷಣೆಯಾದ ರೈಲುಗಳ ಪೈಕಿ 8 ರೈಲುಗಳು ಆರಂಭವಾಗಿಲ್ಲ.
* ಬಹುಬೇಡಿಕೆಯ ಬೆಂಗಳೂರು-ಮಂಗಳೂರು ಹಗಲು ರೈಲು ಇನ್ನೂ ಆರಂಭವಾಗಿಲ್ಲ.
* ಹಗಲು ವೇಳೆ ರೈಲು ಸಂಚರಿಸುವುದರಿಂದ ಹೆಚ್ಚಿನ ಆದಾಯ ಇಲ್ಲ ಅನ್ನೋ ಕಾರಣ..?
* ದಿನಕ್ಕೆ ಮೂರು ಬಾರಿ ಸಂಚರಿಸುವ ರಾಮನಗರ-ಬೆಂಗಳೂರು ಮೆಮು ರೈಲು ಆರಂಭವಾಗಿಲ್ಲ.
* ಧಾರವಾಡ-ದಾಂಡೇಲಿ ಪ್ಯಾಸೆಂಜರ್ ರೈಲು ಇನ್ನೂ ಆರಂಭವಾಗಿಲ್ಲ.
* ಬೆಂಗಳೂರು- ತಿರುವನಂತಪುರ ವಾರಕ್ಕೆ ಎರಡು ಬಾರಿ ವಿಶೇಷ ಪ್ರೀಮಿಯಂ ರೈಲು.
* ಸೆಂಟ್ರಲ್ ರೈಲ್ವೆಯಿಂದ ಮುಂಬೈ-ಬೀದರ್ (ವಾರದ ಎಕ್ಸ್’ಪ್ರೆಸ್).
* ಹೈದ್ರಾಬಾದ್-ಕಲಬುರಗಿ ಇಂಟರ್’ಸಿಟಿ ಹಾಗೂ ಸದರ್ನ್ ರೈಲ್ವೆಯಿಂದ ಕಾಸರಗೋಡು-ಕೊಲ್ಲೂರು (ವಯಾ ಮಂಗಳೂರು).
Advertisement