ಎಲ್ಲವನ್ನೂ ಮೊದಲ ಬಜೆಟ್‌ನಲ್ಲೇ ಈಡೇರಿಸಲು ಸಾಧ್ಯವಿಲ್ಲ: ಸುರೇಶ್ ಪ್ರಭು

ರೈಲ್ವೆ ಸಚಿವ ಸುರೇಶ್ ಪ್ರಭು ತಮ್ಮ ಚೊಚ್ಚಲ ಬಜೆಟ್‌ನಲ್ಲೇ ಎಲ್ಲವನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ...
ರೈಲ್ವೆ ಸಚಿವ ಸುರೇಶ್ ಪ್ರಭು
ರೈಲ್ವೆ ಸಚಿವ ಸುರೇಶ್ ಪ್ರಭು

ನವದೆಹಲಿ: ರೈಲ್ವೆ ಸಚಿವ ಸುರೇಶ್ ಪ್ರಭು ತಮ್ಮ ಚೊಚ್ಚಲ ಬಜೆಟ್‌ನಲ್ಲೇ ಎಲ್ಲವನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಂಸತ್ ಭವನದಲ್ಲಿ ಹಾಜರಿದ್ದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು, ಒಳ್ಳೆ ಕಾರ್ಯಕ್ಕೆ ಉತ್ತಮ ನಿರ್ದೇಶನದ ಅಗತ್ಯವಿದೆ. ನಾವು ಕೊಲ್ಕತಾಗೆ ಹೋಗಬೇಕಿದಿದ್ದರೆ ಕೊಲ್ಕತಾ ರೈಲಿನಲ್ಲೇ ಕೂರಬೇಕು. ಅದನ್ನು ಬಿಟ್ಟು ಚೆನ್ನೈಗೆ ಹೋಗುವ ರೈಲು ಹತ್ತಿದರೆ ನಮ್ಮ ಗುರಿ ತಲುಪಲು ಸಾಧ್ಯವಿಲ್ಲ. ಮೋದಿ ಸರ್ಕಾರದ ಉದ್ದೇಶದಂತೆಯೇ ಅಭಿವೃದ್ಧಿ ಕಾರ್ಯಗಳನ್ನು ಸುಧಾರಿಸಲು ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ 2002ರಲ್ಲಿ ಇಂಧನ ಸಚಿವರಾಗಿದ್ದ ಸುರೇಶ್ ಪ್ರಭು ಅವರ ಕಾರ್ಯವೈಖರಿಯನ್ನು ಮೆಚ್ಚಿದ್ದ ಮೋದಿ ಸರ್ಕಾರ ಸುರೇಶ್ ಪ್ರಭು ಅವರನ್ನು ಕಳೆದ 3 ತಿಂಗಳ ಹಿಂದಷ್ಟೇ ಕೇಂದ್ರ ರೈಲ್ವೆ ಸಚಿವರಾಗಿ ನೇಮಕ ಮಾಡಿತ್ತು. ಇಂಧನ ಸಚಿವರಾಗಿ ಯಶಸ್ವಿಯಾಗಿದ್ದ ಸುರೇಶ್ ಪ್ರಭು ಅವರು ರೈಲ್ವೆ ಸಚಿವರಾಗಿ ನೇಮಕಗೊಂಡ ಮೊದಲ ಬಾರಿಗೆ ರೈಲ್ವೆ ಬಜೆಟ್ ಮಂಡನೆ ಮಾಡುತ್ತಿದ್ದು, ಜನರಲ್ಲಿ ಹಲವು ನಿರೀಕ್ಷೆಗಳು ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com