ಸುರೇಶ್ ಪ್ರಭು ಚೊಚ್ಚಲ ರೈಲ್ವೆ ಬಜೆಟ್: ಜನಪ್ರಿಯತೆ ಕಡಿಮೆ, ಹೆಚ್ಚಿನ ನವೀನತೆಯ ನಿರೀಕ್ಷೆ

ಜನಪ್ರಿಯ ಯೋಜನೆಗಳ ಜೊತೆಗೆ, ಹಣದ ಕೊರತೆಯಿಂದ ನಲುಗುತ್ತಿರುವ ಭಾರತೀಯ ರೈಲ್ವೆಯನ್ನು ಮತ್ತೆ ಸರಿದಾರಿಗೆ ತರುವ ಯೋಜನೆಗಳೊಂದಿಗೆ ನವೀನತೆಯನ್ನು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜನಪ್ರಿಯ ಯೋಜನೆಗಳ ಜೊತೆಗೆ, ಹಣದ ಕೊರತೆಯಿಂದ ನಲುಗುತ್ತಿರುವ ಭಾರತೀಯ ರೈಲ್ವೆಯನ್ನು ಮತ್ತೆ ಸರಿದಾರಿಗೆ ತರುವ ಯೋಜನೆಗಳೊಂದಿಗೆ ನವೀನತೆಯನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಗುರುವಾರದ ಚೊಚ್ಚಲ ರೈಲ್ವೆ ಬಜೆಟ್ ನಲ್ಲಿ ನಿರೀಕ್ಷಿಸಲಾಗಿದೆ.

ಜಾಗತಿಕವಾಗಿ ಇಂಧನದ ಬೆಲೆಯಲ್ಲಿ ಅತಿ ಹೆಚ್ಚಿನ ಕಡಿತ ಕಂಡಿದ್ದರು, ಪ್ರಯಾಣಿಕರ ಟಿಕೆಟ್ ದರವನ್ನು ಇಳಿಸುವುದು ಅನುಮಾನ ಎನ್ನಲಾಗಿದೆ ಹಾಗು ನಿಯಮಿತ ಹೊಸ ರೈಲು ಯೋಜನೆಗಳು ಮತ್ತು ರೈಲುಗಳನ್ನಷ್ಟೆ ಘೋಷಣೆ ಮಾಡಲಾಗುವುದು ಹಾಗು ಇನ್ನೂ ಮುಗಿಯದ ೩೬೦ ರೈಲ್ವೆ ಯೋಜನೆಗಳ ಮುಕ್ತಾಯಕ್ಕೆ ಆದ್ಯತೆ ನೀಡಲಾಗುವುದು ಎನ್ನಲಾಗಿದೆ. ಆದರೆ ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ಮತ್ತು ರಕ್ಷಣೆ ನೀಡುವ ಕ್ರಮಗಳನ್ನು ನಿರೀಕ್ಷಿಸಲಾಗಿದೆ.

"ರೈಲ್ವೆ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರೂ ಜನರ ಆಕಾಂಕ್ಷೆಗಳನ್ನು ಮತ್ತು ನಿರೀಕ್ಷೆಗಳನ್ನು ಪೂರೈಸಲು ನಮ್ಮ ಸಾಧ್ಯತೆ ಮೀರಿ ಕೆಲಸ ಮಾಡಿದ್ದೇವೆ" ಎಂದು ರೈಲ್ವೆ ಬಜೆಟ್ ನ ಅಂತಿಮ ಕಾರ್ಯದ ಸಮಯದಲ್ಲಿ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ರೈಲ್ವೆ ಗಳಿಸುವ ಪ್ರತಿ ೧ ರುಪಾಯಿಗೆ ೯೪ ಪೈಸೆಯನ್ನು ವ್ಯಯಿಸುತ್ತಿದೆ. ಈ ಉಳಿಯುತ್ತಿರುವ ೬ ಪೈಸೆ ಕೂಡ, ಪ್ರಯಾಣಿಕ ದರದ ಯಾವುದೇ ಪರಿಷ್ಕರಣೆ ಇಲ್ಲದೆ ಸೋರಿ ಹೋಗುತ್ತಿದೆ ಎನ್ನಲಾಗಿದೆ.

ಮೂಲತಃ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಪ್ರಭು ಅವರಿಗೆ ಅರ್ಥಶಾಸ್ತ್ರದ ನಿಯಮಗಳ ಪರಿಚಯವಿದ್ದು, ಅದು ರೈಲ್ವೆ ಬಜೆಟ್ ನಲ್ಲಿ ಕೂಡ ಕಾಣಲಿದೆ ಎನ್ನಲಾಗಿದೆ. ಹಿರಿಯ ರೈಲ್ವೆ ಅಧಿಕಾರಿಗಳ ಪ್ರಕಾರ ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ಜನಪ್ರಿಯ ಯೋಜನೆಗಳಿಗೆ ಕಡಿವಾಣ ಹಾಕಿ, ವಿನೂತನ ಯೋಜನೆಗಳೊಂದಿಗೆ ಹೆಚ್ಚಿನ ಆದಾಯ ಗಳಿಸುವತ್ತ ಗಮನ ಹರಿಸಲಾಗುವುದು ಎನ್ನಲಾಗಿದೆ.

ಪ್ರಭು ಅವರು ರಚಿಸಿದ್ದ ಸಮಿತಿಯ ವರದಿ ಪ್ರಕಾರ ರೈಲ್ವೇ ಕೋಚ್ ಗಳಲ್ಲಿ, ಸ್ಟೇಶನ್ ಗಳಲ್ಲಿ ಜಾಹೀರಾತಿಗೆ ಅವಕಾಶ ನಿಡುವ ಮೂಲಕ ೧೦ ಸಾವಿರ ಕೋಟಿ ಹೆಚ್ಚಿನ ಆದಾಯ ಗಳಿಸುವ ಶಕ್ತಿ ಭಾರತೀಯ ರೈಲ್ವೆ ಹೊಂದಿದೆ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಇಡಿ ಸ್ಟೇಶನ್ ಗಳನ್ನು ಅಥವಾ ಇಡೀ ರೈಲನ್ನು ಒಂದು ಸಂಸ್ಥೆಯ ಜಾಹೀರಾತಿನಿಂದ ಕಂಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆಗಳಾದ 'ಮೇಕ್ ಇನ್ ಇಂಡಿಯಾ' ಮತ್ತು 'ಸ್ವಚ್ಛ ಭಾರತ' ಕೂಡ ರೈಲ್ವೆ ಬಜೆಟ್ನಲ್ಲಿ ಪ್ರಮುಖ ಸ್ಥಾನ ಪಡೆಯಲಿವೆ ಎಂದು ಊಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com