ಪ್ರಯಾಣಿಕರಿಗೆ ಸಿಗಲಿದೆ ಅತ್ಯಾಧುನಿಕ ಸೌಲಭ್ಯಗಳು!

ರೈಲ್ವೆ ನಿಲ್ದಾಣ
ರೈಲ್ವೆ ನಿಲ್ದಾಣ
Updated on

ಕೇಂದ್ರ ರೇಲ್ವೆ ಸಚಿವ ಸುರೇಶ್ ಪ್ರಭು ಅವರು ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ರೇಲ್ವೆ ಬಜೆಟ್ ಮಂಡಿಸುತ್ತಿದ್ದು, ಬಜೆಟ್ ನಲ್ಲಿನ ಸೌಲಭ್ಯಗಳು ಈಗಿವೆ.

* ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮೆಷಿನ್ ವ್ಯವಸ್ಥೆ.

* ರೈಲು ನಿಲ್ದಾಣ ಆಧುನೀಕರಣಕ್ಕೆ ಹೊಸ ಯೋಜನೆ ಆರಂಭ. ಎಲ್ಲಾ ರೈಲ್ವೆ ನಿಲ್ದಾಣಗಳ ಖಾಸಗೀಕರಣಕ್ಕೆ ಮುಕ್ತ ಅವಕಾಶ.

* ಸ್ವಯಂ ಚಾಲಿತ ಟಿಕೆಟ್ ನೀಡುವ ಯಂತ್ರದ ಯೋಜನೆ ಜಾರಿ. ಕೇವಲ ಐದೇ ನಿಮಿಷದಲ್ಲಿ ಟಿಕೆಟ್ ವಿತರಿಸಲು ಯೋಜನೆ.

* ಇನ್ನು ಮುಂದೆ 120 ದಿನಗಳ ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಬಹುದು. ಎಸ್ ಎಂಎಸ್ ಟಿಕೆಟ್ ಖಾತ್ರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುವುದು.

* ಈಶಾನ್ಯ ರಾಜ್ಯಗಳಲ್ಲಿ ರೈಲು ಸೌಕರ್ಯ ಅಭಿವೃದ್ಧಿಗೆ ಆದ್ಯತೆ. ಎಲ್ಲಾ ಹೊಸ ಬೋಗಿಗಳಲ್ಲಿ ಅಂಧರಿಗೆ ಸಹಾಯವಾಗಲು ಬ್ರೈಲ್ ಲಿಪಿ ವ್ಯವಸ್ಥೆ ಮಾಡಲಾಗುವುದು.

* ಬಿ ಕೆಟಗರಿ ರೈಲ್ವೆ ನಿಲ್ದಾಣಗಳಲ್ಲಿ ವೈ ಫೈ ಸೌಕರ್ಯ ಒದಗಣೆ. ಮಹಿಳಾ ಕೋಚ್ ಗಳಲ್ಲಿ ಸಿಸಿಟಿವಿ ಅಳವಡಿಕೆ.

* ಅಶಕ್ತರಿಗೆ, ವೃದ್ಧರಿಗಾಗಿ ಆಲ್ ಲೈನ್ ನಲ್ಲೇ ವೀಲ್ ಚೇರ್ ಬುಕ್ಕಿಂಗ್ ಮಾಡಬಹುದು. ಅಂಧರಿಗೆ ಸಹಾಯಕವಾಗಲು ರೈಲ್ವೆ ಇಲಾಖೆಯಿಂದ ಬ್ರೈಲ್ ಲಿಪಿ ಯೋಜನೆ ಜಾರಿ.

* 10 ಆಯ್ದ ರೈಲು ನಿಲ್ದಾಣಗಳಲ್ಲಿ ಸೆಟಲೈಟ್ ಸ್ಷೇಶನ್ ನಿರ್ಮಾಣಕ್ಕೆ ಆದ್ಯತೆ

* 400 ರೈಲ್ವೆ ನಿಲ್ದಾಣಗಳಲ್ಲಿ ವೈ ಫೈ ಸೌಲಭ್ಯ ಮೊದಲ ಹಂತದಲ್ಲಿ ಕಲ್ಪಸಲಾಗುವುದು. ಈಶಾನ್ಯ ರಾಜ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ರೈಲು ವ್ಯವಸ್ಥೆ.

* ವಿವಿಧ ಭಾಷೆಗಳಲ್ಲಿ ಇ ಟಿಕೆಟ್ ಸೌಲಭ್ಯ ಕಲ್ಪಿಸಲಾಗುವುದು. ಕಾಗದ ರಹಿತ ಟಿಕೆಟ್ ವ್ಯವಸ್ಥೆ ಮಾಡಲಾಗುವುದು. ಐಆರ್ ಸಿಟಿಸಿ ವೆಬ್ ಸೈಟ್ ಮೂಲಕ ಫುಡ್ ಆರ್ಡರ್ ವ್ಯವಸ್ಥೆ.

* ರೈಲ್ವೆ ಇಲಾಖೆಯಿಂದ ಸ್ವಚ್ಚ ಶೌಚಾಲಯ ವ್ಯವಸ್ಥೆ. ಬಯೋ ಟಾಯ್ಲೆಟ್ ನಿರ್ಮಾಣಕ್ಕೆ ಯೋಜನೆ. ವಿಮಾನ ಮಾದರಿಯಲ್ಲಿ ವ್ಯಾಕ್ಯೂಂ ಟಾಯ್ಲೆಟ್ ಯೋಜನೆ ಗುರಿ.

* ರೈತರಿಗಾಗಿ ನಿಲ್ದಾಣಗಳಲ್ಲಿ ಕಾರ್ಗೋ ಸೆಂಟರ್ ನಿರ್ಮಾಣ. ಹೈಸ್ಪೀಡ್ ರೈಲುಗಳ ವೇಗ ಗಂಟೆಗೆ 160 ಕಿ.ಮೀ.ನಿಂದ 200 ಕಿ.ಮೀಗೆ ಹೆಚ್ಚಳ.

* ರೈಲ್ ಕಂ ರೋಡ್ ಟಿಕೆಟ್ ಸೌಕರ್ಯ ಹಲವು ಸ್ಷೇಶನ್ ಗಳಿಗೆ ವಿಸ್ತರಣೆ. ಕೆಲವೇ ತಿಂಗಳಲ್ಲಿ ಹೊಸ ಸೌರವಿದ್ಯುತ್ ಘಟಕ ಸ್ಥಾಪನೆ.

* ಜಾಹೀರಾತುಗಳಿಂದ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ರೈಲ್ವೆ ಸಿಬ್ಬಂದಿಗಳಿಗಾಗಿ ಪೂರ್ಣ ಪ್ರಮಾಣದ ವಿವಿ ಸ್ಥಾಪನೆ. ರೈಲ್ವೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೊಸ ಯೋಜನೆ.

* ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಕರ ಮನರಂಜನಾ ವ್ಯವಸ್ಥೆ. ರೈಲ್ವೆ ಸಮಗ್ರ ಅಭಿವೃದ್ಧಿಗೆ ಸ್ವಾಮಿ ವಿವೇಕಾನಂದರ ಮೌಲ್ಯಗಳ ಅನುಷ್ಠಾನ.

* ಹಣಕಾಸು ಕೊರತೆ ನಿಭಾಯಿಸಲು ಇನ್ ಫ್ರಾ ನಿಧಿ ಯೋಜನೆ. ರೈಲ್ವೆ ಆಸ್ತಿ ಒತ್ತುವರಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ.

* ರೈಲ್ವೆ ಪ್ರಯಾಣದ ಕುಂದು, ಕೊರತೆಗಳ ಬಗ್ಗೆ ದೂರು ನೀಡಲು Mobile App

* ಹಿರಿಯ ನಾಗರೀಕರಿಗೆ ಆನ್‘ಲೈನ್‘ನಲ್ಲಿ Wheel Chair ಬುಕ್ಕಿಂಗ್ ವ್ಯವಸ್ಥೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com