
ನವದೆಹಲಿ: ಕೇಂದ್ರ ರೇಲ್ವೆ ಸಚಿವ ಸುರೇಶ್ ಪ್ರಭು ಅವರು ಗುರುವಾರ ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ರೇಲ್ವೆ ಬಜೆಟ್ ಮಂಡಿಸಿದ್ದು, ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಮಾಡಿದೇ, ಯಾವುದೇ ಹೊಸ ರೈಲುಗಳನ್ನು ಘೋಷಿಸದೇ ಪ್ರಯಾಣಿಕರ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ.
ಬಜೆಟ್ ಮಂಡನೆಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ ಪ್ರಭು, ಸ್ವಾತಂತ್ರ್ಯ ಪೂರ್ವದಿಂದಲೂ ರೇಲ್ವೆ ಇಲಾಖೆಯಲ್ಲಿ ಯಾವುದೇ ಹೇಳಿಕೊಳ್ಳುವಂತಹ ಬದಲಾವಣೆ ಆಗಿಲ್ಲ. ಹೀಗಾಗಿಯೇ ರೇಲ್ವೆ ಇಲಾಖೆ ನಷ್ಟದಲ್ಲಿದೆ ಎಂದರು. ಅಲ್ಲದೆ ರೇಲ್ವೆ ಇಲಾಖೆಯಲ್ಲಿ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಅವಕಾಶ ಇದ್ದು, 8. 50 ಲಕ್ಷ ಕೋಟಿ ಯೋಜನೆ ರೂಪಿಸಲಾಗಿದೆ ಮತ್ತು ಇದರಿಂದ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದರು.
ಜನರೇ ನಮಗೆ ದೊಡ್ಡ ಆಸ್ತಿಯಾಗಿದ್ದು, ರೇಲ್ವೆ ಆಧುನೀಕರಣಕ್ಕಾಗಿ ಖಾಸಗಿ ವಲಯದವರನ್ನು ಆಹ್ವಾನಿಸಲಾಗುವುದು ಮತ್ತು ಪಾರದರ್ಶಕ ಆಡಳಿತ ನೀಡುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸ್ವಚ್ಛತೆ, ಮಹಿಳಾ ಭದ್ರತೆ ಮತ್ತು ರೇಲ್ವೆ ಸುರಕ್ಷತೆಗೆ ಸಂಬಂಧಿಸಿದಂತೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ರೇಲ್ವೆ ಇಲಾಖೆ ಭಾರಿ ಸುಧಾರಣೆ ಕಾಣಲಿದೆ ಎಂದು ಸುರೇಶ್ ಪ್ರಭು ಹೇಳಿದರು.
ಬಜೆಟ್ ಮುಖ್ಯಾಂಶಗಳು
Advertisement