
ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್‍ಗೆ ಅಂತಿಮ ಸ್ಪರ್ಶ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಜನಪ್ರಿಯತೆ ಮತ್ತು ತೆರಿಗೆ ಹೊರೆ ಮಧ್ಯೆ ಸಮತೋಲನ ನಡೆಸುವ
ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಜೆಟ್ ಸಿದ್ಧತೆ ಪ್ರಕ್ರಿಯೆ ಬುಧವಾರ ಪೂರ್ಣಗೊಳ್ಳಲಿದ್ದು, ಕರಡು ಪ್ರತಿಯನ್ನು ಮುದ್ರಣಕ್ಕೆ ಕಳುಹಿಸಲಾಗುತ್ತದೆ. ನಂತರ ಅದನ್ನು
ಕೂಲಂಕಷವಾಗಿ ಅಧ್ಯಯನ ನಡೆಸಿದ ನಂತರ ಗುರುವಾರ ಪ್ರತಿಯನ್ನು ಅಂತಿಮ ಮುದ್ರ ಣಕ್ಕೆ ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆ ಅತ್ಯಂತ ಗೌಪ್ಯವಾಗಿ ನಡೆಯಲಿದೆ.
ಆದರೆ, ಕೆಲ ಸಚಿವರು ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.ತಮ್ಮ ಇಲಾಖೆ ವತಿಯಿಂದ ನೀಡಿದ ಪ್ರಸ್ತಾಪಗಳ ಬಗ್ಗೆ ಹೇಳಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಅವರ ಕೋಪಕ್ಕೆ ಕಾರಣವಾಗಿದೆ. ಆಯವ್ಯಯ ಸದನದಲ್ಲಿ ಮಂಡನೆಯಾಗುವುದಕ್ಕೂ ಮುನ್ನವೇ ಅದರ ರಹಸ್ಯ ಸೋರಿಕೆಯಾದರೆ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. ಸಂಪುಟದ ಒಪ್ಪಿಗೆ ಪಡೆದು ನಂತರ ಸದನದಲ್ಲಿ ಮಂಡನೆ ಮಾಡಬೇಕೆಂಬ ಸಂಪ್ರದಾಯದ ಹಿಂದೆ ಇರುವುದು ಇದೇ ಕಾರಣಕ್ಕೆ ಎಂದು ಕೆಲ ಸಚಿವರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
Advertisement