ಎಪಿಎಲ್ ಕಾರ್ಡ್‌ದಾರರಿಗೂ 'ಅನ್ನ ಭಾಗ್ಯ' ಯೋಜನೆ ವಿಸ್ತರಣೆ

ಎಪಿಎಲ್ ಕಾರ್ಡ್‌ದಾರರಿಗೂ 'ಅನ್ನ ಭಾಗ್ಯ' ಯೋಜನೆ ವಿಸ್ತರಣೆ

ಬೆಂಗಳೂರು: 1 ರು.ಗೆ 1ಕೆಜಿ ಅಕ್ಕಿ ನೀಡುವ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಎಪಿಎಲ್ ಕಾರ್ಡ್‍ದಾರರಿಗೂ ವಿಸ್ತರಿಲಾಗಿದೆ.

ಎಪಿಎಲ್ ಕಾರ್ಡ್ ದಾರರಿಗೆ ತಿಂಗಳಿಗೆ ತಲಾ 15 ರೂ.ಗಳಿಗೆ 3 ಕೆಜೆ ಅಕ್ಕಿ. 10ರೂಪಾಯಿಯಂತೆ 2ಕೆಜಿ ಗೋದಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಇಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು
• ಬಿಪಿಎಲ್ ಪಡಿತರ ಚೀಟಿ ಆಹಾರ ಧಾನ್ಯಗಳ ಘಟಕವಾರು ವಿತರಣಾ ಪದ್ಧತಿ ಅನುಷ್ಠಾನ.
• ಎ.ಎ.ವೈ. ಮತ್ತು ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯನಿಗೆ ತಲಾ 5 ಕೆ.ಜಿ. ಉಚಿತ ಆಹಾರ ಧಾನ್ಯ ನೀಡಿಕೆ. ರಿಯಾಯಿತಿ ದರದಲ್ಲಿ 25 ರೂ.ಗಳಿಗೆ 1 ಲೀಟರ್ ತಾಳೆ ಎಣ್ಣೆ ಮತ್ತು 2 ರೂ.ಗಳಿಗೆ 1 ಕೆ.ಜಿ.ಯಂತೆ ಅಯೋಡಿನಯುಕ್ತ ಉಪ್ಪು ವಿತರಣೆ.
• ಎ.ಪಿ.ಎಲ್. ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ಒಬ್ಬ ಸದಸ್ಯರಿದ್ದಲ್ಲಿ 5 ಕೆ.ಜಿ. ಆಹಾರಧ್ಯಾನ, ಹೆಚ್ಚು ಸದಸ್ಯರಿದ್ದಲ್ಲಿ 10 ಕೆ.ಜಿ. ಆಹಾರಧಾನ್ಯ, ಪ್ರತೀ ಕೆ.ಜಿ. ಅಕ್ಕಿಗೆ 15 ರೂ. ಮತ್ತು ಪ್ರತೀ ಕೆ.ಜಿ.ಗೋಧಿಗೆ 10 ರೂ. ನಿಗದಿ.
• ಮೇ ತಿಂಗಳ 1ನೇ ತಾರೀಕಿನಿಂದ ಹೊಸ ಪಡಿತರ ಚೀಟಿಗಳಿಗಾಗಿ ಅರ್ಜಿ ಸ್ವೀಕಾರ.
• ಗ್ರಾಹಕರಿಗೆ ನೀಡುವ ಬಿಲ್ಲುಗಳಲ್ಲಿ ತೂಕದ ಜೊತೆಗೆ ಚಿನ್ನದ/ಬೆಲೆಬಾಳುವ ಹರಳುಗಳ ಅಪ್ಪಟತೆ/ಪರಿಶುದ್ಧತೆಯ ಕಡ್ಡಾಯ ನಮೂದು - ನಿಯಮಗಳಿಗೆ ಸೂಕ್ತ ತಿದ್ದುಪಡಿ.
• ಇ-ಮಾಪನ `ಯೋಜನೆ ಜಾರಿ' ಗಣಕೀಕೃತ ಪರಿಶೀಲನಾ ಪ್ರಮಾಣಪತ್ರಗಳು ಮತ್ತು ಲೈಸೆನ್ಸುಗಳ ಆನ್-ಲೈನ್ ವಿತರಣೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com