ರಾಜ್ಯ ಬಜೆಟ್ 2015: ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 303 ಕೋಟಿ

2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಾರಂಪರಿಕ ಪ್ರದೇಶಗಳಾದ ಮೈಸೂರು...
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Updated on

ಬೆಂಗಳೂರು: 2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಾರಂಪರಿಕ ಪ್ರದೇಶಗಳಾದ ಮೈಸೂರು, ಶ್ರೀರಂಗಪಟ್ಟಣ, ಬೇಲೂರು, ಹಳೇಬೀಡು ಸೇರಿದಂತೆ ಇನ್ನಿತರೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗಳಿಗೆ ರು.20 ಕೋಟಿಗಳ ಒದಗಿಸಿದ್ದಾರೆ.

ಯೋಜನೆಗಳು
• ಕನ್ನಡದ ಆದಿಕವಿ ಪಂಪನ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ -1 ಕೋಟಿ ರೂ.
• `ಹಾವೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಸ್ತು ಸಂಗ್ರಹಾಲಯ ಸ್ಥಾಪನೆ'-2.5 ಕೋಟಿ.ರೂ.
• ಕನ್ನಡದ ಪ್ರಥಮ ಅಂತರ್ಜಾಲ ವಿಶ್ವಕೋಶ `ಕಣಜ' ಅಭಿವೃದ್ಧಿಗೆ ಸಮಿತಿ ಸ್ಥಾಪನೆ - 2 ಕೋಟಿ ರೂ.
• ತಲಾ 1 ಕೋಟಿ ರೂ.ಗಳ ಅನುದಾನದಲ್ಲಿ,
1 ಕಡಲ ತೀರದ ಭಾರ್ಗವ ಡಾ|| ಶಿವರಾಮ ಕಾರಂತ ಸ್ಮಾರಕ ನಿರ್ಮಾಣ.
2 ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಮಡಿಕೇರಿಯ ನಿವಾಸ - ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ.
3 ಕನ್ನಡದ ಮೊದಲ ರಾಷ್ಟ್ರಕವಿ ಡಾ|| ಮಂಜೇಶ್ವರ ಗೋವಿಂದ ಪೈ ಅವರ ನಿವಾಸದ ಪುನರುಜ್ಜೀವನ.
4 ಕವಿ ಶೈಲ ಮಾದರಿಯಲ್ಲಿ ಜಿ.ಎಸ್. ಶಿವರುದ್ರಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ. ಬೇಂದ್ರೆ ಇವರ ಜನ್ಮ ಸ್ಥಳ/ಮನೆಗಳ ಅಭಿವೃದ್ಧಿ.

• ಕೊಂಕಣಿ ಅಧ್ಯಯನ ಪೀಠ ಸ್ಥಾಪನೆ - 2 ಕೋಟಿ ರೂ.ಗಳ ಶಾಶ್ವತ ನಿಧಿ ಘೋಷಣೆ.
• ಶ್ರವಣಬೆಳಗೊಳದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಜೈನ ಶಾಸನಗಳ ಅಧ್ಯಯನ ಪೀಠ ಸ್ಥಾಪನೆ - 1 ಕೋಟಿ ರೂ.
• ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ವರ್ಚುವಲ್ ತರಗತಿಗಳ ಮತ್ತು ಬೆಂಗಳೂರಿನಲ್ಲಿ ಕನ್ನಡ ಕಲಿಕೆ ಕೇಂದ್ರಗಳ ಸ್ಥಾಪನೆ - 1 ಕೋಟಿ ರೂ.

• ಒಟ್ಟು 4 ಕೋಟಿ ರೂ.ಗಳ ಅನುದಾನದಲ್ಲಿ,
1 ಹವ್ಯಾಸಿ ರಂಗತಂಡಗಳ ಪುನಶ್ಚೇತನ.
2 ಜನಪದ ಪ್ರದರ್ಶನ ಕಲೆಗಳಲ್ಲಿ ಮಹಿಳೆಯರಿಗೆ ತರಬೇತಿ ಕಾರ್ಯಾಗಾರಗಳ ಹಾಗೂ ತಂಡಗಳ ನಿರ್ಮಾಣ.
3 ಮಹಿಳಾ ದೌರ್ಜನ್ಯಗಳ ಕುರಿತ ಹೊಸ ನಾಟಕಗಳ ಪ್ರಯೋಗ.
4 ಮಕ್ಕಳ ಸಮಸ್ಯೆ ಕುರಿತ ನಾಟಕ ರಚನೆ ಮತ್ತು ಪ್ರದರ್ಶನಕ್ಕೆ ಪ್ರೋತ್ಸಾಹ ಹಾಗೂ ಸಾಹಿತ್ಯ ಚಟುವಟಿಕೆಗಳ ವಿಸ್ತರಣೆ.
• ಚರ್ಮವಾದ್ಯ ಕಲಾವಿದರ ರಾಜ್ಯಮಟ್ಟದ ಸಮ್ಮೇಳನ, ಕಾರ್ಯಾಗಾರಗಳ ಆಯೋಜನೆ.
• ವಿಭಾಗೀಯ ರಂಗಾಯಣಗಳ ಕಾರ್ಯನಿರ್ವಹಣೆಗೆ ಮತ್ತು ಹೊಸ ನಾಟಕಗಳ ಸಿದ್ಧತೆಗಾಗಿ 4 ಕೋಟಿ ರೂ.ಗಳ ವಿಶೇಷ ಅನುದಾನ.
• ಬೆಂಗಳೂರಿನಲ್ಲಿ ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ - 1.2 ಕೋಟಿ ರೂ.
• ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳನ್ನೊಳಗೊಂಡ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ರಚನೆ - ಪ್ರಾಥಮಿಕವಾಗಿ 1 ಕೋಟಿ ರೂ.
• ಘೋಷಿತ 772 ಸಂರಕ್ಷಿತ ಸ್ಮಾರಕಗಳ ಪಹರೆ/ಕಾವಲು, ಜಿ.ಐ.ಎಸ್. ಮೂಲಕ ಸರ್ವೆ ಮತ್ತು 3ಡಿ ಮ್ಯಾಪಿಂಗ್, ಸಂರಕ್ಷಣೆ ಹಾಗೂ ಅರಕ್ಷಿತ ಸ್ಮಾರಕಗಳ ಇನ್‍ವೆಂಟರಿ ತಯಾರಿಕೆಗಾಗಿ 5 ಕೋಟಿ ರೂ.
• ಘೋಷಿತ 20 ಪಾರಂಪರಿಕ ಪ್ರದೇಶಗಳ ಸಮಗ್ರ ಅಭಿವೃದ್ಧಿ- 20 ಕೋಟಿ ರೂ.
• ಮಳಖೇಡ ಕೋಟೆಯ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿ - 5 ಕೋಟಿ ರೂ.
• ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಯಲ್ಲಿರುವ ರಾಜ್ಯದ 3 ಸ್ಮಾರಕ ಸಮೂಹ ತಾಣಗಳ ಡೋಸಿಯರ್ ಮತ್ತು ವರದಿ ತಯಾರಿಕೆ - 3 ಕೋಟಿ ರೂ.
• ದೇವರದಾಸಿಮಯ್ಯನವರಿಗೆ ಸಂಬಂಧಿಸಿದ ಸ್ಮಾರಕಗಳು, ಪುಷ್ಕರಣಿಗಳ ಸಂರಕ್ಷಣೆಗೆ ಕಾರ್ಯ ಯೋಜನೆ - 2 ಕೋಟಿ ರೂ.
• ಕಿತ್ತೂರು ರಾಣಿ ಚನ್ನಮ್ಮ ಸಮಾಧಿ ಸ್ಥಳದ ಸಮಗ್ರ ಅಭಿವೃದ್ಧಿ- 1 ಕೋಟಿ ರೂ.
• ಶಿವಶರಣ ಬಸವಣ್ಣನವರ ಸಮಕಾಲೀನ ಹರಳಯ್ಯನವರ ಗದ್ದಿಗೆ ಅಭಿವೃದ್ಧಿ ಮತ್ತು ಸಂರಕ್ಷಣೆ - 50 ಲಕ್ಷ ರೂ.
• ಕನ್ನಡ ಸಾಹಿತ್ಯ ಪರಿಷತ್ 100 ವರ್ಷ ಪೂರ್ಣ, 2015-16 ಕನ್ನಡ ವರ್ಷಾಚರಣೆ - 10 ಕೋಟಿ ರೂ.ಗಳು.
• ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸಿದ್ಧ ಚಿತ್ರ ಕಲಾವಿದ ಪಿ.ಆರ್.ತಿಪ್ಪೇಸ್ವಾಮಿರವರ ಅಧ್ಯಯನ ಪೀಠ ಸ್ಥಾಪನೆ - 1 ಕೋಟಿ ರೂ.ಗಳು.
• ಚಿತ್ರದುರ್ಗದ ಶ್ರೀ ಮುರುಘಮಠದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ 325 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ- 10 ಕೋಟಿ ರೂ.ಗಳು.
• ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ 20ಕೋಟಿ ರೂ. ನಿಗದಿ.

ಒಟ್ಟಾರೆಯಾಗಿ ಕನ್ನಡ ಮತ್ತುತ ಸಂಸ್ಕೃತಿ ಇಲಾಖೆಗೆ 2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರು.303 ಕೋಟಿ ಗಳನ್ನು ಒದಗಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com