ಕೇಂದ್ರ ಬಜೆಟ್ 2015: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದು, ಬಡತನ ನಿರ್ಮೂಲನೆಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದು, ಬಡತನ ನಿರ್ಮೂಲನೆಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಯತಾಸ್ಥಿತಿ ಕಾಯ್ದುಕೊಂಡಿದ್ದಾರೆ.

2020ರ ವೇಳೆ ವಿದ್ಯುತ್ ಸಮಸ್ಯೆ ಇಲ್ಲದಂತೆ, ವಿದ್ಯುತ್ ಸೌಲಭ್ಯವಿಲ್ಲದ 20 ಸಾವಿರ ಹಳ್ಳಿಗಳಿಗೆ ವಿದ್ಯುತ್ ಹಾಗೂ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಅಲ್ಲದೆ, ಹಣದುಬ್ಬರವನ್ನು ಶೇ.6ಕ್ಕಿಂತ ಕಡಿಮೆ ಮಾಡುವುದು ನಮ್ಮ ಸರ್ಕಾರದ ಗುರಿ ಎಂದು ಜೇಟ್ಲಿ ತಿಳಿಸಿದರು.

ಕೇಂದ್ರ ಬಜೆಟ್ ಮುಖ್ಯಾಂಶಗಳು

  • ಮೇಕ್ ಇನ್ ಇಂಡಿಯಾದಿಂದ ಉದ್ಯೋಗ ಸೃಷ್ಟಿ
  • ಸಣ್ಣ ನೀರಾವರಿ ಯೋಜನೆಗೆ 5,300 ಕೋಟಿ
  • ಗ್ರಾಮೀಣಾಭಿವೃದ್ಧಿ ನಿಧಿಗೆ 25 ಸಾವಿರ ಕೋಟಿ ಮೀಸಲು
  • ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ಭೀಮಾ ಯೋಜನೆ.
  • ಮನ್ ರೇಗಾ ಯೋಜನೆಗೆ 34,100 ಕೋಟಿ ರೂಪಾಯಿ
  • ದೇಶಾದ್ಯಂತ 80 ಸಾವಿರ ಪ್ರೌಢಶಾಲೆಗಳು ಮೇಲ್ದರ್ಜೆಗೆ
  • ಸಂಶೋಧನಾ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ 1580 ಕೋಟಿ ರು
  • ಅಂಚೆ ಕಚೇರಿಗಳ ಮೂಲಕ ಜನ ಧನ ಯೋಜನೆ ಜಾರಿ
  • ಬಿಪಿಎಲ್ ಕಾರ್ಡ್ ವಯೋವೃದ್ಧರಿಗೆ ಸರ್ಕಾರದಿಂದ ಸಂಪೂರ್ಣ ಚಿಕಿತ್ಸಾ ವೆಚ್ಚ.
  • ಪ್ರತಿ 5 ಕಿ.ಮೀ.ಗೆ 1 ಶಾಲೆ ನಿರ್ಮಾಣ - 75 ಸಾವಿರ ಪ್ರಾಥಮಿಕ ಶಾಲೆಗಳ ನಿರ್ಮಾಣ - ಪ್ರೌಢಶಾಲೆಗಳ ಸಂಖ್ಯೆ ಹೆಚ್ಚಳ
  • ಈಗಾಗಲೇ 50 ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ, 6 ಕೋಟಿ ಶೌಚಾಲಯ ನಿರ್ಮಾಣ ನಮ್ಮ ಗುರಿ
  • ಗೋಲ್ಡ್ ಮಾನಿಟರಿಂಗ್ ಸ್ಕೀಮ್ ಮೂಲಕ ಗೋಲ್ಡ್ ಅಕೌಂಟ್ ತೆರೆಯಲಾಗುವುದು.
  • ನಿರ್ಭಯಾ ಫಂಡ್ ಗೆ 1000 ಕೋಟಿ ರೂಪಾಯಿ ಹೆಚ್ಚುವರಿ ನೀಡಿಕೆ.
  • ದೇಶದ ಬಡ ಜನರಿಗಾಗಿ ಅಟಲ್ ಪೆನ್ಶನ್ ಯೋಜನೆ. ಮಕ್ಕಳ ಸುರಕ್ಷತಾ ಯೋಜನೆಗಾಗಿ 1,500 ಕೋಟಿ ರೂ. ಮೀಸಲು.
  • 'ಸೆಟು' ಹೆಸರಿನಲ್ಲಿ ಐ.ಟಿ. ವಲಯಕ್ಕೆ ನೂತನ ಯೋಜನೆ.
  • ಸಂಶೋಧನೆ ಮತ್ತು ಅಭಿವೃದ್ದಿಗೆ 150 ಕೋಟಿ.
  • 150 ದೇಶಗಳಿಗೆ ವೀಸಾ ಆನ್ ಅರೈವಲ್ ಸೌಲಭ್ಯ
  • ವಾರ್ಷಿಕ 1ಕೋಟಿಗಿಂತ ಅಧಿಕ ಆದಾಯ ಹೊಂದಿರುವವರಿಗೆ 2% ಸರ್‌ಛಾರ್ಜ್‌. 
  • ಸೇವಾ ತೆರಿಗೆ ಶೇ.14ಕ್ಕೆ ಏರಿಕೆ. ಸೇವಾ ತೆರಿಗೆ ಏರಿಕೆಯಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ.
  • ಸ್ಥಳೀಯ ಚರ್ಮೋದ್ಯಮಕ್ಕೆ ಪ್ರೋತ್ಸಾಹ. ದೇಶೀಯ ಚರ್ಮೋದ್ಯಮಕ್ಕೆ ಶೇ.6 ರಷ್ಟು ಸುಂಕ ಕಡಿತ
  • 22 ವಸ್ತುಗಳ ಸಾಂಪ್ರದಾಯಿಕ ತೆರಿಗೆ ಕಡಿತಗೊಳಿಸಲಾಗುವುದು.
  • ಕಪ್ಪು ಹಣ ಹೊಂದಿರುವವರಿಗೆ 10 ವರ್ಷ ಜೈಲು, ಜಾಮೀನು ಇಲ್ಲ.
  • 2.5 ಲಕ್ಷದವರೆಗೆ ಟ್ಯಾಕ್ಸ್ ಇಲ್ಲ. 2.5ರಿಂದ 5 ಲಕ್ಷದವರೆಗೆ ಶೇ.10ರಷ್ಟು, 5ರಿಂದ 10ಲಕ್ಷದವರೆಗೆ ಶೇ.20ರಷ್ಟು, 10 ಲಕ್ಷಕ್ಕೆ ಮೇಲ್ಪಟ್ಟು ಶೇ.30ರಷ್ಟು ತೆರಿಗೆ.
  • ತೆರಿಗೆ ಕಳ್ಳರಿಗೆ 10 ವರ್ಷಗಳ ಕಾಲ ಜೈಲುಶಿಕ್ಷೆ. ಐಟಿ ರಿಟರ್ನ್ಸ್ ಮಾಡದಿದ್ದರೆ ಏಳು ವರ್ಷ ಶಿಕ್ಷೆ
  • ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ವಿಶೇಷ ನೆರವು.
  • ಕಪ್ಪು ಹಣ ನಿಯಂತ್ರಣಕ್ಕೆ ಹೊಸ ಮಸೂದೆ 
  •  ಕಾರ್ಪೋರೆಟ್ ತೆರಿಗೆ ಶೇ.30ರಿಂದ ಶೇ.25ಕ್ಕೆ ಇಳಿಕೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಪೋರೆಟ್ ತೆರಿಗೆ ಇಳಿಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com