'ಅಶೋಕ ಚಕ್ರ' ರೂಪದ ಚಿನ್ನದ ನಾಣ್ಯ ಬಿಡುಗಡೆ: ಜೇಟ್ಲಿ

ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಂಸತ್ ನಲ್ಲಿ ಮಂಡಿಸುತ್ತಿದ್ದು,
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಂಸತ್ ನಲ್ಲಿ ಮಂಡಿಸುತ್ತಿದ್ದು, ಅಶೋಕ ಚಕ್ರ ರೂಪದ ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ತಟಸ್ಥವಾಗಿರುವ ಚಿನ್ನದ ಸದ್ಭಳಕೆಗಾಗಿ ಅಶೋಕ ಚಕ್ರ ರೂಪವುಳ್ಳ ಚಿನ್ನದ ನಾಣ್ಯ ಬಿಡುಗಡೆ ಮಾಡಲಾಗುವುದು ಎಂದರು. ಈ ರೀತಿಯ ಚಿನ್ನವನ್ನು ಸಕ್ರಿಯಗೊಳಿಸಲು ಚಿನ್ನದ ಮೇಲಿನ ನಿಗಾ ಯೋಜನೆಯೊಂದನ್ನು ರೂಪಿಸಲು ನಾವು ಉದ್ದೇಶಿಸಿದ್ದೇವೆ.

ಇದೀಗ ನಮ್ಮ ದೇಶದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 20,000 ಟನ್‌ ಚಿನ್ನ ತಟಸ್ಥ ರೂಪದಲ್ಲಿದೆ. ನಮ್ಮ ದೇಶದಲ್ಲಿ ಚಿನ್ನದ ಬಳಕೆ ಅತಿಯಾಗಿದೆ. ಪ್ರತೀ ವರ್ಷ ನಾವು 800-1000 ಟನ್‌ ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಪರೋಕ್ಷ ತೆರಿಗಾಗಿ ಜಿಎಸ್ ಟಿ ಬಳಕೆ. 20 ಸಾವಿರ ಟನ್ ಚಿನ್ನ ದೇಶದಲ್ಲಿ ತಟಸ್ಥವಾಗಿ ಉಳಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com