ಸಮಸ್ಯೆ ಮೂಲಕ್ಕೆ ಕೈ ಹಾಕಿದ ಜೇಟ್ಲಿ

ಮೂಲಸೌಲಭ್ಯದಲ್ಲಿ ಸರ್ಕಾರದ ಹೂಡಿಕೆ ಹೆಚ್ಚಿಸುವುದು ಸವಾಲಿನ ಕೆಲಸ. ಪಿಪಿಪಿ ಮಾದರಿಯಲ್ಲಿ ಖಾಸಗಿ ಬಂಡವಾಳದ ಪ್ರಮಾಣ ಹೇಳಿಕೊಳ್ಳುವಂತಿಲ್ಲ. ಹೀಗಾಗಿ ಖಾಸಗಿ ಹಣ ಹರಿದು ಬರಲೇಬೇಕು!..
ವಿತ್ತ ಸಚಿವ  ಅರುಣ್ ಜೇಟ್ಲಿ
ವಿತ್ತ ಸಚಿವ ಅರುಣ್ ಜೇಟ್ಲಿ

ಮೂಲಸೌಲಭ್ಯದಲ್ಲಿ ಸರ್ಕಾರದ ಹೂಡಿಕೆ ಹೆಚ್ಚಿಸುವುದು ಸವಾಲಿನ ಕೆಲಸ. ಪಿಪಿಪಿ ಮಾದರಿಯಲ್ಲಿ ಖಾಸಗಿ ಬಂಡವಾಳದ ಪ್ರಮಾಣ ಹೇಳಿಕೊಳ್ಳುವಂತಿಲ್ಲ. ಹೀಗಾಗಿ ಖಾಸಗಿ ಹಣ ಹರಿದು ಬರಲೇಬೇಕು!

ಪ್ರಧಾನಿ ಮೋದಿ ಅವರ ಆರ್ಥಿಕ ಪ್ರಗತಿಯ ನಾಗಾಲೋಟದ ಕನಸಿಗೆ ಸರಿಸಮನಾಗಿ ದೇಶದ ಮೂಲಸೌಲಭ್ಯ ಕ್ಷೇತ್ರ ಬೆಳವಣಿಗೆ ಸಾಧಿಸುತ್ತಿಲ್ಲ. ಇದನ್ನು ಮನಗಂಡೇ ಜೇಟ್ಲಿ ರು. 70 ಸಾವಿರ ಕೋಟಿಯಷ್ಟು ಹಣವನ್ನು ಮೂಲಸೌಲಭ್ಯ ಕ್ಷೇತ್ರದಲ್ಲಿನ ಹೂಡಿಕೆ ಉತ್ತೇಜನಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಅಂದರೆ ಬಜೆಟ್ ನ ಅತಿ ದೊಡ್ಡ ಭಾಗ ಮೂಲಸೌಲಭ್ಯ ಕ್ಷೇತ್ರಕ್ಕಾಗಿಯೇ ಹಂಚಿದ್ದಾರೆ. ಇದಲ್ಲದೆ, ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಲಭ್ಯ ನಿಧಿ(ಎನ್ ಐಐಎಫ್), 4 ಮೆಗಾ ವಿದ್ಯುತ್ ಯೋಜನೆಗಳನ್ನು ಆರಂಭಿಸುವುದಾಗಿ ಜೇಟ್ಲಿ ಘೋಷಿಸಿದ್ದಾರೆ.

ನಾನಾ ಸಮಸ್ಯೆಗಳಿಂದಾಗಿ ಕೆಲ ವರ್ಷಗಳಿಂದ ದೇಶದಲ್ಲಿ ಮೂಲಸೌಲಭ್ಯ ಕ್ಷೇತ್ರ ಹಿನ್ನಡೆ ಸಾಧಿಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಹಾಗಾಗಿ ಈ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಯ ಅಗತ್ಯ ಹೆಚ್ಚಿದೆ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ, ಮೂಲಸೌಲಭ್ಯ ಅಭಿವೃದ್ಧಿಗಾಗಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿ ಮರುಪರಿಶೀಲಿಸುವ, ಅದರಲ್ಲೊಂದಷ್ಟು ಬದಲಾವಣೆ ತರುವ ಸುಳಿವನ್ನೂ ನೀಡಿದ್ದಾರೆ.

ಮೂಲಸೌಲಭ್ಯದಲ್ಲಿ ಸರ್ಕಾರದ ಹೂಡಿಕೆಯನ್ನು ಹೆಚ್ಚಿಸುವುದು ಸವಾಲಿನ ಕೆಲಸ. ಪಿಪಿಪಿ ಮಾದರಿಯಲ್ಲಿ ಖಾಸಗಿ ಬಂಡವಾಳದ ಪ್ರಮಾಣ ಹೇಳಿಕೊಳ್ಳುವಂತಿಲ್ಲ. ಈ ಕ್ಷೇತ್ರದಲ್ಲಿ ಸುಧಾರಣೆಯಾಗಬೇಕಿದ್ದರೆ ಖಾಸಗಿ ಹೂಡಿಕೆ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಎನ್ಐಐಎಫ್?
ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಲಭ್ಯ ನಿಧಿ ಮೂಲ ಸೌಲಭ್ಯ ಕ್ಷೇತ್ರದ ಅಭಿವೃದ್ಧಿಗೆ ಸ್ಥಾಪಿಸಲಾಗುವ ನಿಧಿ. ದೇಶ ಪ್ರಗತಿ ಸಾಧಿಸಬೇಕಾದರೆ ಮೂಲಸೌಲಭ್ಯ ಕ್ಷೇತ್ರದಲ್ಲೂ ಸುಧಾರಣೆಯಾಗುವುದು ಅತ್ಯಗತ್ಯ. ಇದನ್ನು ಮನಗಂಡು ಸರ್ಕಾರ ಈಕ್ವಿಟಿಗಳ ರೂಪದಲ್ಲಿ ರು.20 ಸಾವಿರ ಕೋಟಿ ನಿಧಿ ತೆಗೆದಿಡುತ್ತಿದೆ.

ಟ್ಯಾಕ್ಸ್ ಫ್ರೀ ಬಾಂಡ್ ಗಳು ರೈಲು, ರಸ್ತೆ ಮತ್ತು ನೀರಾವರಿ ಕ್ಷೇತ್ರದ ಯೋಜನೆಗೆ ತೆರಿಗೆರಹಿತ ಮೂಲಸೌಲಭ್ಯ ಬಾಂಡ್ ಗಳಿಗೆ ಅನುಮತಿ ನೀಡಲಾಗಿದೆ.

ಪಿಪಿಪಿ ಮಾದರಿ ಮರುಪರಿಶೀಲನೆ
ಮೂಲಸೌಲಭ್ಯ ಅಭಿವೃದ್ಧಿಗೆ ಸಂಬಂಧಿಸಿದ ಪಿಪಿಪಿ ಮರು ಪರಿಶೀಲಿಸಲಾಗುವುದು. ಮತ್ತು ಇದರಲ್ಲಿ ಒಂದಷ್ಟು ಬದಲಾವಣೆಯನ್ನೂ ತರಲಾಗುವುದು. ಹಾಲಿ ಅಸ್ತಿತ್ವದಲ್ಲಿರುವ
ಪಿಪಿಪಿ ಮಾದರಿ ನಿರೀಕ್ಷಿತ ಯಶಸ್ಸು ಸಾಧಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಮಾದರಿಯಲ್ಲಿ ರಿಸ್ಕ್ ಅನ್ನು ಮರುಸಮತೋಲನ ಮಾಡುವುದೇ ನಿಜವಾದ ಸಮಸ್ಯೆ ಎಂದಿದ್ದಾರೆ ಜೇಟ್ಲಿ.

ಏನಿದು ಎಐಎಂ?
ಅಟಲ್ ಇನ್ನೋವೇಷನ್ ಮಿಷನ್(ಎಐಎಂ) ಇದು ಜೇಟ್ಲಿ ಬಜೆಟ್ ನ ಮತ್ತೊಂದು ಘೋಷಣೆ. ಆವಿಷ್ಕಾರಕ್ಕೆ ಉತ್ತೇಜನ ನೀಡುವ ವೇದಿಕೆಯಾಗಿ ಇದು ಅಸ್ವಿತ್ವಕ್ಕೆ ಬರಲಿದೆ. ಶಿಕ್ಷಣತಜ್ಞರು, ಉದ್ಯಮಿಗಳು ಮತ್ತು ಸಂಶೋಧಕರು ಈವೇದಿಕೆಯಲ್ಲಿರಲಿದ್ದಾರೆ. ದೇಶಿಯ ಮತ್ತು ಅಂತಾರಾಷ್ಟ್ರೀಯ ಅನುಭವವನ್ನು ಬಳಸಿಕೊಂಡು ಸಾಂಸ್ಕೃತಿಕ ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ದೇಶದಲ್ಲಿ ವೈಜ್ಞಾನಿಕ ಸಂಶೋಧನೆಗೆ ಪ್ರೋತ್ಸಾಹ ನೀಡುವುದು ಇದರಿಂದ ಸಾಧ್ಯವಾಗಲಿದೆ. ಇದಕ್ಕಾಗಿ ಸರ್ಕಾರ ಆರಂಭಿಕ ನಿಧಿಯಾಗಿ ರು.150 ಕೋಟಿ ತೆಗೆದಿರಿಸಲಿದೆ.

ಯೋಜನೆಗೆ ಬಹುಪರವಾನಗಿ ಬೇಕಿಲ್ಲ ದೇಶದಲ್ಲಿ ಉದ್ಯಮ ನಡೆಸುವ ಪ್ರಕ್ರಿಯೆ ಸುಲಭಗೊಳಿಸಲು, ವಿದೇಶಿ ಬಂಡವಾಳವನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವಂತಾಗಲು ಪರವಾನಗಿ ಪ್ರಕ್ರಿಯೆಯನ್ನೂ ಸುಲಭಗೊಳಿಸಬೇಕು. ಇದಕ್ಕಾಗಿ ಇಬಿಜ್ ಪೋರ್ಟಲ್ ವೊಂದನ್ನು ಆರಂಭಿಸಲಾಗಿದೆ. ಇಲ್ಲಿ 14 ಪರವಾನಗಿಗಳನ್ನು ಏಕಗವಾಕ್ಷಿ ವ್ಯವಸ್ಥೆ ರೀತಿಯಲ್ಲಿ ನೀಡಲಾಗುತ್ತದೆ. ಇದರ ಜತೆಗೆ, ಉದ್ಯಮ ಆರಂಭಿಸುವ ಮೊದಲೇ ಹತ್ತಾರು ಪರವಾನಗಿ ತೆಗೆದುಕೊಳ್ಳುವ ಸಂಬಂಧ ಇರುವ ಹಾಲಿ ವ್ಯವಸ್ಥೆಯನ್ನು ಬದಲಾಯಿಸುವ ಸಂಬಂಧ ತಜ್ಞರ ಸಮಿತಿ ಯೊಂದನ್ನು ರಚಿಸಲೂ ನಿರ್ಧರಿಸಲಾಗಿದೆ.

5 ಮೆಗಾ ಪವರ್ ಯೋಜನೆಗಳು

ದೇಶದಲ್ಲಿ ಐದು ಮೆಗಾ ವಿದ್ಯುತ್ ಯೋಜನೆಗಳನ್ನು ಆರಂಭಿಸಲೂ ನಿರ್ಧರಿಸಲಾಗಿದೆ. ಪ್ರತಿ ಯೋಜನೆಯೂ 4 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿವೆ. ಇದು ಒಟ್ಟಾರೆ ರು.1 ಲಕ್ಷ ಕೋಟಿ ಯೋಜನೆ. ವಿಶೇಷವೆಂದರೆ ಈ ರೀತಿಯ ಯೋಜನೆ ಆರಂಭಿಸಲು ಮುಂದೆ ಬರುವ ಕಂಪನಿಗಳಿಗೆ ಪರವಾನಗಿ ಸಂಬಂಧ ಹೆಚ್ಚುವರಿ ಕಿರಿ ಕಿರಿ ಇರುವುದಿಲ್ಲ. ಇದಲ್ಲದೆ, ರಸ್ತೆ, ಬಂದರುಗಳು, ರೈಲು, ಏರ್ಪೋರ್ಟ್ ಯೋಜನೆಗಳಲ್ಲೂ ಇದೇ ರೀತಿಯ ಕ್ರಮ ಅನುಸರಿಸುವ ಗುರಿ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com