
5 ನೂತನ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್‍ಗಳ ಸ್ಥಾಪನೆಗೆ ಪ್ರಸ್ತಾವನೆ. ಪ್ರತಿ ಘಟಕದಿಂದಲೂ 4000 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯ
ಹೊಂದಿರಲಿದೆ. ಉದ್ದೇಶ ಈಡೇರಿಕೆಗಾಗಿ 1 ಲಕ್ಷ ಕೋಟಿ ಹೂಡಿಕೆ. ಇದರಿಂದ 20 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೊಳ್ಳಲಿದ್ದು, ದೇಶದ ಕೈಗಾರಿಕೋದ್ಯಮ ಮತ್ತು
ವಾಣಿಜ್ಯ- ವಹಿವಾಟು ಪ್ರಗತಿಗೆ ಪೂರಕ. ವಿದ್ಯುತ್ ಉತ್ಪಾದನೆಗೆ ಸಂಬಂಧಪಟ್ಟಂತೆ ಮತ್ತೊಂದು ಪ್ರಮುಖ ಘೋಷಣೆ ಎಂದರೆ ಕುಡನಕುಲಮï ನ್ಯೂಕ್ಲಿಯರ್ ಪವರ್
ಸ್ಟೇಷನ್‍ನ ಎರಡನೆ ಘಟಕ ಆರಂಭಿಸಲು ನಿರ್ಧಾರ. ಪ್ಲಗ್ ಅಂಡ್ ಪ್ಲೇ ಯೋಜನೆಗೆ ಹೆಚ್ಚಿನ ಆದ್ಯತೆ. ಇದರಿಂದ ಉದ್ಯಮಿಗಳು, ತಮ್ಮ ಕಚೇರಿಗಳನ್ನು ಇಲ್ಲವೇ ಉತ್ಪಾದನಾ ಘಟಕಗಳನ್ನು ಆರಂಭಿಸಲು ವಿದ್ಯುತ್ ಕೊರತೆಯಂತೂ ಇರುವುದೇ ಇಲ್ಲ. ಈ ಸೌಲಭ್ಯವನ್ನು ಮೂಲಸೌಕರ್ಯ ಕ್ಷೇತ್ರಗಳಾದ ರಸ್ತೆ, ಬಂದರು, ರೈಲ್ವೇ ಹಳಿ, ವಿಮÁನ
ನಿಲ್ದಾಣಗಳಲ್ಲೂ ಆರಂಭಿಸಲು ಪರಿಗಣನೆ.
ಪ್ರತಿಭೆಯ ಸದ್ಬಳಕೆ
ಸೆಲ್ಪ್ ಎಂಪ್ಲಾಯ್ ಮೆಂಟ್ ಅಂಡ್ ಟ್ಯಾಲೆಂಟ್ ಯುಟಿಲೈಸೇಷನ್(ಸೇತು) ಸ್ಥಾಪನೆ. ಸ್ವಉದ್ಯೋಗ ಮತ್ತು ಪ್ರತಿಭೆ ಸದ್ಬಳಕೆ ಉದ್ಯಮಗಳಿಗೆ ಸೂಕ್ತವಾಗಲಿದೆ.
ಟೆಕ್ನೋ ಫೈನಾನ್ಷಿಯಲ್ ಪೂರಕವಾಗಿರುವ ಕಾರ್ಯಕ್ರಮ ಇದಾಗಿದೆ. ಇದರಿಂದ ವಹಿವಾಟು, ಸ್ವ ಉದ್ಯೋಗ ಚಟುವಟಿಕೆಗಳಿಗೆ ಮತ್ತು ತಂತ್ರಜ್ಞಾನ ಆಧಾರಿತ ಕ್ಷೇತ್ರಗಳಿಗೆ ಸೇತು ಸಹಾಯಕ. ಪ್ರಾಥಮಿಕ ಹಂತದಲ್ಲಿ ಸೇತುವಿಗಾಗಿ ನೀತಿ ಆಯೋಗದಿಂದ 1000 ಕೋಟಿ ರುಪಾಯಿ ಮೀಸಲು. ಸೇತು ಆರಂಭಕ್ಕೆ ಹೆಚ್ಚಿನ ಆಸಕ್ತಿ ವ್ಯಕ್ತವಾಗಿರುವುದನ್ನು ನಾವು ನೋಡುತ್ತಿದ್ದೇವೆ. ತಂತ್ರಜ್ಞಾನದ ಔನ್ನತ್ಯ, ಐಡಿಯಾಗಳಿಂದ ಮೌಲ್ಯ ಸೃಷ್ಟಿಸಲು ಆದ್ಯತೆ.
ಗೃಹ ಲೆಕ್ಕ ಈಗ ಹೆಚ್ಚು
ಮೋದಿ ಸರ್ಕಾರದಲ್ಲಿ ನಂ.2 ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಾಜನಾಥ್ ಸಿಂಗ್‍ರ ಗೃಹ ಇಲಾಖೆಗೆ ಮೋಸವೇನೂ ಆಗಿಲ್ಲ. ಕಳೆದ ಹಣಕಾಸು ವರ್ಷಕ್ಕೆ
ಹೋಲಿಕೆ ಮಾಡಿದರೆ ಮುಂದಿನ ವರ್ಷಕ್ಕಾಗಿ ರು. 62,124.52 ಕೋಟಿ ಸಿಕ್ಕಿದೆ. ಅಂದರೆ ಶೇ.10.2ರಷ್ಟು ಅನುದಾನ ಹೆಚ್ಚಳ ಮಾಡಲಾಗಿದೆ.
ಕಳೆದ ವರ್ಷ ರು.56,372.45 ಕೋಟಿ ನೀಡಲಾಗಿತ್ತು. ಮಹಿಳೆಯರ ಸುರಕ್ಷತೆ, ಕಾಶ್ಮೀರಿ ಪಂಡಿತರ ಪುನರ್ವಸತಿ ಮತ್ತು ಆಂತರಿಕ ಭದ್ರತೆಯ ಖರ್ಚುವೆಚ್ಚ ನಿಭಾಯಿಸಲು ಹೆಚ್ಚುವರಿ ಮೊತ್ತವನ್ನು ವಿನಿಯೋಗಿಸಲಾಗುತ್ತದೆ. ರು. 62 ಸಾವಿರ ಕೋಟಿಯ ಪೈಕಿ ರು. 580 ಕೋಟಿಯನ್ನು ಕಾಶ್ಮೀರಿ ಪಂಡಿತರ ಪುನರ್ವಸತಿಗೆ ವಿನಿಯೋಗಿಸಲಾಗುತ್ತದೆ.
Advertisement