
ಜಾಗತಿಕ ತಾಪಮಾನದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ `ಹಸಿರು ಭಾರತ'ದ ಕನಸಿಗೆ ನೀರೆರೆಯಲಾಗಿದೆ. ತೈಲ ಹಾಗೂ ಕಲ್ಲಿದ್ದಲು ಬಳಕೆಯಿಂದ ನಿಸರ್ಗದ ಮೇಲಾಗುತ್ತಿರುವ ದುಷ್ಪರಿಣಾಮಕ್ಕೆ ಕಡಿವಾಣ ಹಾಕಲು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಾಹ ಹಾಗೂ ಉತ್ಪಾದನೆಗೆ ಉತ್ತೇಜನ ನೀಡಲು ವಿಶೇಷ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರು.75 ಕೋಟಿ ಮೀಸಲಿರಿಸಲಾಗಿದೆ. ನವೀಕರಿಸಬಹುದಾದ ಇಂಧನ ಗುರಿ ಹೆಚ್ಚಿಸಲಾಗಿದ್ದು 2022ರ ವೇಳೆಗೆ 1.75 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ.
ಇದರಲ್ಲಿ ಸೋಲಾರ ವಿದ್ಯುತ್ ನಿಂದ 1 ಲಕ್ಷ ಮೆಗಾವ್ಯಾಟ್, ಪವನ ವಿದ್ಯುತ್ ನಿಂದ 60 ಸಾವಿರ ಮೆಗಾವ್ಯಾಟ್, ಜೈವಿಕ ಇಂಧನದಿಂದ 10 ಸಾವಿರ ಮೆಗಾವ್ಯಾಟ್ ಹಾಗೂ ಕಿರು ವಿದ್ಯುತ್ ಯೋಜನೆಗಳಿಂದ 5 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ.
Advertisement