
ಹಿಂದಿನ ವರ್ಷಗಳಂತೆ ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ಮೀಸಲು ಇರಿಸಲಾಗಿಲ್ಲ ನಿಜ. ಆದರೆ ಪ್ರಮುಖಾಂಶವೇನೆಂದರೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಣೆ ಮಾಡಿರುವಂತೆ ಭಾರತದಲ್ಲೇಉತ್ಪಾದಿಸಿ (ಮೇಕ್ ಇನ್ ಇಂಡಿಯಾ) ಅಡಿಯಲ್ಲೇ ಹೆಚ್ಚಿನ ಉತ್ಪಾದನೆಗೆ ಪ್ರೋತ್ಸಾ ಹ ನೀಡಿ, ವಿದೇಶಗಳಿಂದ ಶಸ್ತ್ರಾಸ್ತ್ರ ಮತ್ತು ವಿಮಾ ನಗಳನ್ನು ಆಮದು ಮಾಡುವ ಪ್ರಕ್ರಿಯೆ ಗೆ ಬ್ರೇಕ್ ಹಾಕುವ ಕ್ರಮಕ್ಕೆ ಇಂಬು ಕೊಡುವ ಪ್ರಯತ್ನ ಇದಾಗಿದೆ. ಇಂಥ ಕ್ರಮ ದೂರಗಾಮಿ ಪರಿಣಾಮ ಬೀರಬಹು ದಾಗಿದೆ. ಇತ್ತೀಚಿನ ವರ್ಷಗಳ ಮುಂಗಡ ಪತ್ರಗಳನ್ನು ಗಮನಿಸಿ ದಾಗ ಹಣಕಾಸು ಸಚಿವ ಜೇಟ್ಲಿ ಮಂಡಿಸಿದ ಬಜೆಟ್‍ನಲ್ಲಿ ಇಂಥ ಕ್ರಮ ನಿಜಕ್ಕೂ ಬೊಕ್ಕಸದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ಸತ್ಯ. ಎಲ್ಲದಕ್ಕಿಂತ ಹೆಚ್ಚಾಗಿ ಈ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿರುವುದು ಮುಂದಿನವರ್ಷಗಳಲ್ಲಿ ಶಸ್ತ್ರಾಸ್ತ್ರಮತ್ತು ಯುದ್ಧವಿಮಾನ ಉತ್ಪಾದನೆಯಲ್ಲಿ ಪ್ರಮುಖ ಪರಿಣಾಮ ಬೀರಲಿರುವುದಂತೂಸತ್ಯ. ಇದರಿಂದಾಗಿ ರಕ್ಷಣಾ ಕ್ಷೇತ್ರದಲ್ಲಿ ನಮ್ಮ ದೇಶವೂ ಉತ್ಪಾದನೆ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಅವಕಾಶವೂ ಲಭ್ಯವಾಗಲಿದೆ.ಆದರೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.11ರಷ್ಟು ಅಂದರೆ ರು. 2,46,727 ಕೋಟಿ ಮೊತ್ತವನ್ನು ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಮೀಸಲುಇರಿಸಲಾಗಿದೆ. 2014-15ನೇ ಹಣಕಾಸು ವರ್ಷದಲ್ಲಿ ಈ ಕ್ಷೇತ್ರಕ್ಕೆ ರು. 2.22 ಲಕ್ಷ ಕೋಟಿ ಮೊತ್ತವನ್ನು ತೆಗೆದಿರಿಸಲಾಗಿತ್ತು.ರಕ್ಷಣಾ ಪಡೆಗಳಿಗಾಗಿ ಈಗಾಗಲೇ 126 ಬಹೂಪಯೋ ಗಿ ಯುದ್ಧ ವಿಮಾನಗಳ ಖರೀದಿಗಾಗಿ ರು. 60 ಸಾವಿರ ಕೋಟಿ, 22 ಅಪಾಚೆ ಹೆಲಿಕಾಪ್ಟರ್‍ಗಳು, 15 ಚಿನೂಕ್ ಕಾಪ್ಟರ್‍ಗಳು, ಹಾರುವ ಸಂದರ್ಭದಲ್ಲೇ ಇಂಧನವನ್ನು ಪೂರೈಸಿಕೊಳ್ಳಲಿರುವ ಆರು ವಿಮಾನಗಳ ಖರೀದಿ, ಅತ್ಯಾಧುನಿಕ ಬಂದೂಕುಗಳು ಹಾಗೂ ಮದ್ದುಗುಂಡುಗಳ ಖರೀದಿ ಪ್ರಕ್ರಿಯೆ ನಡೆದಿದೆ.
Advertisement