
ಅದರಲ್ಲೂ ಸ್ಥಳೀಯ ಎಲೆಕ್ಟ್ರಾನಿಕ್ ವಸ್ತುಗಳ ತಯಾರಕರಿಗೆ ಬಂಪರ್ ಕೊಡುಗೆ. ಪಿಸಿ ಬಿಡಿಭಾಗಗಳು, ಕಚ್ಚಾ ವಸ್ತುಗಳು ಸೇರಿದಂತೆ 22 ವಸ್ತುಗಳ ಮೇಲಿನ ಶೇ.4 ವಿಶೇಷ ಹೆಚ್ಚುವರಿ ಸುಂಕ(ಎಸ್‍ಎಡಿ) ವನ್ನು ರದ್ದು ಮಾಡಲಾಗಿದೆ. ಸ್ಮಾರ್ಟ್ ಕಾರ್ಡ್‍ಗಳ ಉತ್ಪಾದನೆಗೆ ಬಳಸಲಾಗುವ ಪಿವಿಸಿ ಶೀಟ್ ಮತ್ತು ರಿಬ್ಬನ್ ಮೇಲಿನ ಎಸ್‍ಎಡಿಗೂ ವಿನಾಯ್ತಿ ನೀಡಲಾಗಿದೆ. ಈ ಮೂಲಕ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಚಿವ ಜೇಟ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ ಹಾಗೂ ಪ್ರಧಾನಿಯ ಮೇಕ್ ಇನ್ ಇಂಡಿಯಾ ಯೋ ಜನೆಗೂ ಪುಷ್ಟಿ ನೀಡಿದ್ದಾರೆ.
ಕಚ್ಚಾ ವಸ್ತುಗಳ ವೆಚ್ಚ ತಗ್ಗಿಸಲು ಬ್ಲ್ಯಾಕ್ ಲೈಟ್ ಯುನಿಟ್ ಮೊಡ್ಯೂಲ್, ಎಚ್ ಡಿಪಿಇ, ಒಎಲ್‍ಇಡಿ ಟಿವಿ ಪ್ಯಾನೆಲ್
ಮತ್ತಿತರ ವಸ್ತುಗಳ ಮೂಲ ಅಬಕಾರಿ ಸುಂಕ ರದ್ದು
ಬ್ಯಾಟರಿ, ಟೈಟಾನಿಯಂ, ಸಿಲಿಕಾನ್ರೆಸಿನ್, ರಬ್ಬರ್ ಸೇರಿದಂತೆ ಕೆಲವು ಕಚ್ಚಾವಸ್ತುಗಳಿಗೆ ವಿಶೇಷ ಹೆಚ್ಚುವರಿ ಸುಂಕ ವಿನಾಯ್ತಿ
ಐಸಿ ಮೊಡ್ಯೂಲ್‍ನ ವೇಫ ರ್,
ಮೊಬೈಲ್ ಮೇಲಿನ ಅಬಕಾರಿ ಸುಂಕ ಬದಲಾವಣೆ
ಉದ್ದೇಶವೇನು?
ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು
ಅನುಕೂಲತೆಯೇ ನು?
ಹಲವಾರು ಕ್ಷೇತ್ರಗಳಲ್ಲಿನ ಉತ್ಪಾದನಾ ವೆಚ್ಚ ತಗ್ಗುತ್ತದೆ. ಸುಂಕ ವಿಪರ್ಯಯ ಕಡಿಮೆ ಮಾಡಲುಸಹಾಯಕವಾಗುತ್ತದೆ.
ಏನಿದು ಸುಂಕ ವಿಪರ್ಯಯ?
ಇಲ್ಲಿ ಸಿದ್ದ ವಸ್ತುಗಳಿಗೆ ವಿಧಿಸಲಾಗುವ ತೆರಿಗೆಯು ಕಚ್ಚಾ ವಸ್ತುಗಳಿಗೆ ವಿ„ಸಲಾಗುವ ತೆರಿಗೆಗಿಂತ ಕಡಿಮೆ ಇರುತ್ತದೆ. ಹಾಗಾಗಿ ದೇಶೀಯ ಉತ್ಪಾದಕರು
ಕಚ್ಚಾ ವಸ್ತುಗಳಿಗೆ ಹೆಚ್ಚಿನ ಹಣ ನೀಡಬೇಕಾಗುತ್ತದೆ. ಇದನ್ನು ಸುಂಕ ವಿಪರ್ಯಯ(ಡ್ಯೂಟಿ ಇನ್‍ವರ್ಷನ್) ಎನ್ನುತ್ತಾರೆ. ಟೈರ್‍ಗಳು, ಎಲೆಕ್ಟ್ರಾನಿಕ್ ಸಲಕರಣೆಗಳು, ವೈದ್ಯಕೀಯ ಸಲಕರಣೆಗಳನ್ನು ಉತ್ಪಾದಿಸುವ ಕಂಪನಿಗಳು ಈ ರೀತಿಯ ಸುಂಕ ವಿಪರ್ಯಯದ ಸಮಸ್ಯೆ ಎದುರಿಸುತ್ತಿವೆ.
ಯಾವ ಉತ್ಪಾದನೆಗೆ ಹೆಚ್ಚು ಲಾಭ?
ಸೋಲಾರ್ ಸೆಲ್, ಎಲ್‍ಸಿಡಿ/ಎಲ್‍ಇಡಿ ಟಿವಿ, ಪೇಸ್‍ಮೇಕರ್, ಮೈಕ್ರೋವೇವ್ ಓವನ್, ಆಪ್ಟಿಕಲ್ ಫೈ ಬರ್ ಕೇಬಲ್, ಎಂಡೋಸ್ಕೋಪ್- ವೈದ್ಯಕೀಯ ಎಲೆಕ್ಟ್ರಾನಿಕ್ ಇತ್ಯಾದಿಗಳ ಉತ್ಪಾದನೆಗೆ ಹೆಚ್ಚಿನ ಲಾಭ. ಜತೆಗೆ, ಭಾರತದಲ್ಲೇ ತಯಾರಾಗುವ ಮೊಬೈಲ್ ಫೋನ್‍ಗಳಿಗೆ ಶೇ.11.5 ರಷ್ಟು ಸುಂಕ ಉಳಿತಾಯ, ಟ್ಯಾಬ್ಲೆಟ್‍ಗಳಿಗೆ
ಶೇ.10.5 ಸುಂಕ ಉಳಿತಾಯವಾಗಲಿದೆ.
ಎಲೆಕ್ಟ್ರಾನಿಕ್ ಕ್ಷೇತ್ರದವರಿಗೆ ಇದಂಥೂ ಅತ್ಯುತ್ತಮ ಬಜೆಟ್. ಮೊಬೈಲ್ ಫೋ ನ್ ಮತ್ತು ಟ್ಯಾಬ್ಲೆಟ್ ಉತ್ಪಾದನೆಗೆ ಹೆಚ್ಚಿನ ಒತ್ತು ಸಿಕ್ಕಿದೆ.
-ಅಜಯ್ ಕುಮಾರ್, ಜಂಟಿ ಕಾರ್ಯದರ್ಶಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾ ನ ಇಲಾಖೆ
Advertisement