
ನವದೆಹಲಿ: ಫೆ.25 ರಂದು ರೈಲ್ವೆ ಬಜೆಟ್ ಮಂಡನೆ ಮಾಡಲಿರುವ ಸಚಿವ ಸುರೇಶ್ ಪ್ರಭು, ರೈಲ್ವೆ ಸಂಪನ್ಮೂಲ ನಿರಂತರವಾಗಿ ಕುಸಿಯುತ್ತಿದೆ ಎಂದು ಸಂಸತ್ ನಲ್ಲಿ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿರುವ ಸುರೇಶ್ ಪ್ರಭು, ಸರಕು ಸಾಗಣೆ ಹಾಗೂ ಪ್ರಯಾಣಿಕ ದರಗಳನ್ನು ಸರಿಯಾಗಿ ನಿಗದಿ ಮಾಡದೇ ಇರುವ ಪರಿಣಾಮ ರೈಲು ಸಂಪನ್ಮೂಲಗಳು ಕುಸಿಯುತ್ತಿದೆ. ಉಳಿದ ಪ್ರಕಾರಗಳ ಸಾರಿಗೆಗೆ ಹೋಲಿಸಿದರೆ ಸರಕು ಸಾಗಣೆಯಲ್ಲಿ ರೈಲಿನ ಪಾಲು ಕಡಿಮೆ ಇದೆ ಎಂದು ಸುರೇಶ್ ಪ್ರಭು ಮಾಹಿತಿ ನೀಡಿದ್ದಾರೆ.
ರೈಲ್ವೆ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡುವುದರ ಬಗ್ಗೆ ಸುಳಿವು ನೀಡಿರುವ ಸುರೇಶ್ ಪ್ರಭು, ಸರಕು ಸಾಗಣೆ ನಿರ್ವಾಹಕರು, ಪ್ರಯಾಣಿಕರು ಹಾಗೂ ರೈಲ್ವೆ ಇಲಾಖೆ ಹಿತಾಸಕ್ತಿಯನ್ನು ಕಾಪಾಡಲು ಸಮತೋಲನ ಕಾಯ್ದುಕೊಳ್ಳಬೇಕಾದ ಅನಿರ್ವಾರ್ಯತೆ ಇದೆ, ರೈಲ್ವೆಯ ಅಭಿವೃದ್ಧಿಗಾಗಿ ಖಾಸಗಿ ಸಹಭಾಗಿತ್ವ ಅಗತ್ಯವಿದೆ. ಆದರೆ ಖಾಸಗಿ ಸಹಭಾಗಿತ್ವ ಪ್ರಯಾಣಿಕರ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯದಂತೆ ಎಚ್ಚರ ವಹಿಸಲಾಗುತ್ತದೆ ಎಂದಿದ್ದಾರೆ.
Advertisement