
ಎರಡನೇ ಬಾರಿಗೆ ರೈಲ್ವೆ ಬಜೆಟ್ ಮಂಡನೆ ಮಾಡುತ್ತಿರುವ ಸಚಿವ ಸುರೇಶ ಪ್ರಭು ರೈಲ್ವೆ ಇಲಾಖೆಯನ್ನು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಯ ಇಂಜಿನ್ ಮಾಡಬೇಕೆಂಬುದು ಮುಖ್ಯ ಗುರಿ ಎಂದು ಹೇಳಿದ್ದಾರೆ.
ರೈಲ್ವೆ ಇಲಾಖೆ ಪ್ರಸ್ತುತ ಸವಾಲಿನ ಪರಿಸ್ಥಿತಿ ಎದುರಿಸುತ್ತಿದೆ, ಆದರೆ ನಾವು ಪರಿವರ್ತನೆಯ ಪ್ರಯಾಣಕ್ಕೆ ಮುಂದಡಿ ಇಟ್ಟಿದ್ದೇವೆ, ಇದು ನನ್ನ ಬಜೆಟ್ ಅಲ್ಲ, ಈ ಬಜೆಟ್ ಭಾರತೀಯ ಕುಟುಂಬಗಳ ನಿರೀಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಸುರೇಶ್ ಪ್ರಭು ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ. ಪ್ರಯಾಣಿಕರ ಘನತೆ, ರೈಲುಗಳ ವೇಗ ಮತ್ತು ದೇಶದ ಪ್ರಗತಿ ಈ ಮೂರು ಅಂಶಗಳು ರೈಲ್ವೆ ಬಜೆಟ್ ನ ಮುಖ್ಯ ಗುರಿಯಾಗಿದೆ. ಮುಂದಿನ ವರ್ಷದಲ್ಲಿ 2000 ಕಿಮಿ ನಷ್ಟು ರೈಲು ಮಾರ್ಗಗಳನ್ನು ವಿದ್ಯುತೀಕರಣಗೊಳಿಸುವ ಪ್ರಸ್ತಾವನೆ ಹೊಂದಲಾಗಿದೆ ಎಂದು ಸುರೇಶ್ ಪ್ರಭು ತಿಳಿಸಿದ್ದಾರೆ.
Advertisement