
ನವದೆಹಲಿ: ರೈಲ್ವೆ ಸಚಿವ ಸುರೇಶ್ ಪ್ರಭು ತಮ್ಮ ಎರಡನೇ ಬಜೆಟ್ ನಲ್ಲಿ ಹಲವು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಘೋಷಿಸಿದ್ದಾರೆ.
ರೈಲ್ವೆ ಕೋಚ್ ಗಳಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ಪರದೆಗಳ ಅಳವಡಿಕೆ, ನಿಖರ ಸಮಯದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಒದಗಿಸಲು ರೈಲ್ ಸ್ಪೀಡ್ ನೆಟ್ವರ್ಕ್ ಸೌಲಭ್ಯ ಒದಗಿಸಲಾಗುವುದು ಎಂದು ಸುರೇಶ್ ಪ್ರಭು ಘೋಷಿಸಿದ್ದಾರೆ. ರೈಲು ನಿಲ್ದಾಣಗಳಲ್ಲಿ ಮಕ್ಕಳಿಗಾಗಿಯೇ ವಿಶೇಷ ಮೆನು, ಪ್ರಯಾಣಿಕ ತಾಯಂದಿರಿಗೆ ಅನುಕೂಲವಾಗಲು ಶಿಶು ಆಹಾರ, ಬೇಬಿ ಬೋರ್ಡ್ ಗಳನ್ನು ಪರಿಚಯಿಸಲಾಗುತ್ತದೆ. ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ಕಾರ್ಪೊರೇಶನ್ ನಿಂದ ಪ್ರಯಾಣಿಕರಿಗೆ ಸ್ಥಳಿಯ ಆಹಾರಪದ್ಧತಿಗಳು ಲಭ್ಯವಿರಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸುರೇಶ್ ಪ್ರಭು ತಿಳಿಸಿದ್ದಾರೆ.
ಕ್ಲೀನ್ ಮೈ ಕೋಚ್ ಸೇವೆಯಡಿ ಪ್ರಯಾಣಿಕರು ಎಸ್ ಎಂ ಎಸ್ ಮೂಲಕ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಮನವಿ ಸಲ್ಲಿಸುವುದು, ಬಾರ್ ಸಂಕೇತವನ್ನೊಳಗೊಂಡ ಟಿಕೆಟ್ ಗಳನ್ನು ಪರಿಚಯಿಸುವುದು, ಇ- ಟಿಕೆಟಿಂಗ್ ವ್ಯವಸ್ಥೆಯಲ್ಲಿ ಪ್ರತಿ ನಿಮಿಷಕ್ಕೆ 2000 ಟಿಕೆಟ್ ಗಳ ಸಾಮರ್ಥ್ಯವನ್ನು 7,200 ಕ್ಕೆ ಏರಿಸುವುದು, ಮಹಿಳೆಯರು ಹಾಗೂ ಹಿರಿಯನಾಗರಿಕರಿಗಾಗಿ ಇರುವ ಮೀಸಲು ಆಸನಗಳ ಸಂಖ್ಯೆಯನ್ನು ಹೆಚ್ಚಿಸುವುದು, ಎಸಿ ರಹಿತ ಕೋಚ್ ಗಳಲ್ಲಿ ಡಸ್ಟ್ ಬಿನ್ ಗಳ ವ್ಯವಸ್ಥೆ ಕಲ್ಪಿಸುವುದು ಸುರೇಶ್ ಪ್ರಭು ಘೋಷಿಸಿದ ಪ್ರಯಾಣಿಕ ಸ್ನೇಹಿ ಕ್ರಮಗಳ ಪೈಕಿ ಪ್ರಮುಖ ಅಂಶಗಳಾಗಿವೆ.
Advertisement