ನವದೆಹಲಿ: 2016-17 ರ ರೈಲ್ವೆ ಬಜೆಟ್ ನಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ಆದ್ಯತೆ ನೀಡಿದ್ದಾರೆ.
ಕೊಂಕಣ ರೈಲ್ವೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಾರಥಿ ಸೇವಾ ಎಂಬ ಯೋಜನೆಯನ್ನು ಸ್ವಲ್ಪ ಪರಿಷ್ಕರಣೆಗೊಳಪಡಿಸಿ ಹಿರಿಯ ನಾಗರಿಕರಿಗಾಗಿ ರೈಲ್ವೆ ಮಿತ್ರ ಸೇವಾ ಎಂಬ ಹೊಸ ಸೇವೆಯನ್ನು ಪ್ರಭು ಬಜೆಟ್‌ನಲ್ಲಿ ಪ್ರಸ್ತುತ ಪಡಿಸಿದ್ದಾರೆ.
ಹಿರಿಯ ನಾಗರಿಕರಿಗೆ ರೈಲ್ವೇ ಫ್ಲಾಟ್‌ಫಾರಂ ನಲ್ಲಿ ಬ್ಯಾಟರಿ ಬಳಸಿ ಪುಟ್ಟ ಕಾರುಗಳನ್ನು ಬುಕ್ ಮಾಡುವ ಸೌಕರ್ಯ ಈ ಯೋಜನೆಯಲ್ಲಿದೆ. ಪೋರ್ಟರ್‌ಗಳು (ಸಹಾಯಕ್) ಸೇವೆಯನ್ನು ಕೂಡಾ ಬುಕ್ ಮಾಡುವ ಸೌಕರ್ಯ ಇಲ್ಲಿದೆ. ಅಷ್ಟೇ ಅಲ್ಲದೆ ವೀಲ್ ಚೇರ್ ಸಹಾಯವೂ ದೊರೆಯಲಿದೆ.
ಮಕ್ಕಳಿಗೆ ಹಾಲು, ಬಿಸಿನೀರು ಮತ್ತು ಬೇಬಿ ಫುಡ್ ರೈಲ್ವೇ ಬೋಗಿಯಲ್ಲೇ ಕಲ್ಪಿಸುವ ಜನನೀ ಸೇವೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ರೈಲ್ವೇ ಪೋರ್ಟರ್‌ಗಳನ್ನು ರೈಲ್ವೇ ಸಹಾಯಕ್ ಎಂದು ಕರೆಯಲಾಗುವುದು. ಇವರಿಗೆ ಹೊಸ ಸಮವಸ್ತ್ರವನ್ನೂ ನೀಡಲಾಗುವುದು