
ಪಟ್ನಾ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮಂಡಿಸಿರುವ 3ನೇ ರೈಲ್ವೆ ಬಜೆಟ್ ನಲ್ಲಿ ಯಾವುದೇ ಜನಪರ ಕೊಡುಗೆಗಳನ್ನು ನೀಡದೆ ಜನರನ್ನು ವಂಚಿಸಿದೆ ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಟೀಕಿಸಿದ್ದಾರೆ.
ರೈಲ್ವೆ ಸಚಿವ ಸುರೇಶ್ ಪ್ರಭು ಅವರು, ರೈಲ್ವೆ ಸುರಕ್ಷತಾ ಕ್ರಮಗಳ ಬಗ್ಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಿಲ್ಲ. ಬಜೆಟ್‌ನಲ್ಲಿ ಏನೂ ಇಲ್ಲ. ನಿರೀಕ್ಷೆಯಲ್ಲಿದ್ದ ಜನರಿಗೆ ಮೋಸ ಮಾಡಲಾಗಿದೆ. ಆರ್ಥಿಕ ಬಜೆಟ್ ಮಂಡನೆಗೆ ಅವಕಾಶವಿತ್ತು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಲಾಲು ತಾವು ಮಂಡಿಸಿದ್ದ ಬಜೆಟ್ ರು. 60 ಸಾವಿರ ಕೋಟಿ ಹೆಚ್ಚುವರಿ ಆದಾಯ ಗಳಿಸಿತ್ತು ಎಂದು ಹೇಳಿದ್ದಾರೆ.
Advertisement