
ನವದೆಹಲಿ: ಹೆಚ್ಚಿನ ಹೊಸ ರೈಲುಗಳ ಘೋಷಣೆ, ಪ್ರಯಾಣ ದರ ಏರಿಕೆಯಿಲ್ಲದಂತೆ ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಯಾಣಿಕರ ಸ್ನೇಹಿ ಬಜೆಟ್ ಮಂಡಿಸಿದ್ದಾರೆ.
43 ನೇ ರೈಲ್ವೆ ಸಚಿವರಾಗಿ ಮೋದಿ ಸರ್ಕಾರದ 3ನೇ ರೈಲ್ವೆ ಬಜೆಟ್ ನಲ್ಲಿ ಎರಡನೇ ಬಾರಿಗೆ ರೈಲ್ವೆ ಬಜೆಟ್ ಮಂಡಿಸಿರುವ ಸಚಿವ ಸುರೇಶ್ ಪ್ರಭು ಪ್ರಸ್ತುತ ಬಜೆಟ್ನಲ್ಲಿ ಹಳೆಯ ರೈಲುಗಳಿಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ.
ಪ್ರಮುಖವಾಗಿ ಅಂಗವಿಕಲರಿಗೆ ವೀಲ್ ಚೇರ್ ವ್ಯವಸ್ಥೆ, 30 ಸಾವಿರ ಜೈವಿಕ ಶೌಚಾಲಯ ನಿರ್ಮಾಣ, ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಬಳಸಲು ವ್ಯವಸ್ಥೆ. ವೈ ಫೈ ಸೌಲಭ್ಯ ಸೇರಿದಂತೆ ಹಲವು ಆಧುನಿಕ ಪ್ರಯೋಗಕ್ಕೆ ಸಚಿವರು ಮುಂದಾಗಿದ್ದಾರೆ.
ರಿಸರ್ವೆಷನ್ ರಹಿತ ಪ್ರಯಾಣಿಕರಿಗಾಗಿ ಅಂತ್ಯೋದಯ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್, ದೀನ್ ದಯಾಳ್ಎಕ್ಸ್ ಪ್ರೆಸ್, ತಾಯಂದಿರಿಗಾಗಿ ಜನನಿ ಸೇವಾ ವ್ಯವಸ್ಥೆ.ರೈಲು ಬೋಗಿಗಳ ಒಳಗೆ ಎಲ್ ಇಡಿ ಮಾಹಿತಿ ಬೋರ್ಡ್, ಮಕ್ಕಳಿಗಾಗಿ ಬಿಸಿನೀರಿನ ವ್ಯವಸ್ಥೆ, ರೈಲುಗಳಲ್ಲಿ ಕುಡಿಯುವ ನೀರಿನ ಮತ್ತು ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಬರಲಿದೆ.
ಪತ್ರಕರ್ತರಿಗೂ ಇ ಬುಕ್ಕಿಂಗ್ ವ್ಯವಸ್ಥೆ, 820 ಮೇಲ್ಸೆತುವೆ, ಮುಂದಿನ ದಿನಗಳಲ್ಲಿ ಎಲ್ಲಾ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆ, ಜನರಲ್ ಬೋಗಿಗಳಲ್ಲೂ ಮೊಬೈಲ್ ಚಾರ್ಜ್ ವ್ಯವಸ್ಥೆ. 17 ಸಾವಿರ ಬಯೋ ಟಾಯ್ಲೆಟ್ ಸ್ಥಾಪನೆ ಬಜೆಟ್ನಲ್ಲಿ ಸೇರಿವೆ.
ಇನ್ನು ರೈಲ್ವೆ ಉಪಕರಣಗಳ ತಯಾರಿಕೆಗೆ ಎರಡು ಕಾರ್ಖಾನೆ. ಪ್ರಯಾಣಿಕರಿಂದ ಪ್ರತಿಕ್ರಿಯೆ ಪಡೆಯಲು ಐವಿಆರ್ ಸಿಸ್ಟಮ್, 2020 ರ ವೇಳೆಗೆ ಬೇಕೆಂದಾಗ ಟಿಕೆಟ್ ಸಿಗುವ ಸೌಲಭ್ಯ ಜಾರಿಗೆ ತರಲು ಮುಂದಾಗಿದ್ದಾರೆ.
ಗುಣಮಟ್ಟದ ಸೇವೆ ನೀಡಲು ಸಂಸದರ ನಿಧಿಯಿಂದ ಹಣ ಬಳಕೆ ಮಾಡಿಕೊಳ್ಳಲು ಪ್ರಭು ನಿರ್ಧರಿಸಿದ್ದಾರೆ.ರೇಲ್ವೆಯ ಎಲ್ಲಾ ಹುದ್ದೆಗಳಿಗೂ ಆನ್ ಲೈನ್ ಮೂಲಕ ನೇಮಕಾತಿ ಮಾಡಲು ತೀರ್ಮಾನಿಸಿರುವ ಪ್ರಭು, 2020 ರೊಳಗೆ ಮಾನವ ರಹಿತ ಕ್ರಾಸಿಂಗ್ ತೆಗೆದು ಹಾಕಲಾಗುವುದು ಎಂದು ಹೇಳಿದ್ದಾರೆ.
Advertisement