ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ಅರುಣ್ ಜೇಟ್ಲಿ ಬಜೆಟ್ ಬಗ್ಗೆ ತಜ್ಞರ ಅಭಿಪ್ರಾಯ

ಅರುಣ್ ಜೇಟ್ಲಿ ಅವರು ಮಂಡಿಸಿರುವ 2016 -17 ನೇ ಸಾಲಿನ ಬಜೆಟ್ ಬಗ್ಗೆ ತಜ್ಞರು ಅಭಿಪ್ರಾಯ ತಿಳಿಸಿದ್ದು, ಆರ್ಥಿಕ ಶಿಸ್ತಿನ ಬಜೆಟ್ ಎಂದು ಹೇಳಿದ್ದಾರೆ.

ನವದೆಹಲಿ: ಅರುಣ್ ಜೇಟ್ಲಿ ಅವರು ಮಂಡಿಸಿರುವ 2016 -17 ನೇ ಸಾಲಿನ ಬಜೆಟ್ ಬಗ್ಗೆ ತಜ್ಞರು ಅಭಿಪ್ರಾಯ ತಿಳಿಸಿದ್ದು, ಆರ್ಥಿಕ ಶಿಸ್ತಿನ ಬಜೆಟ್ ಎಂದು ಹೇಳಿದ್ದಾರೆ.
"ವೇತನ ಆಯೋಗದ ಪ್ರಸ್ತಾವನೆಗಳ ಜಾರಿ ಕುರಿತು ಅರುಣ್ ಜೇಟ್ಲಿ ಬಜೆಟ್ ನಲ್ಲಿ  ಸ್ಪಷ್ಟವಾಗಿ ತಿಳಿಸಿಲ್ಲ. ಗ್ರಾಮೀಣ/ ಸಾಮಾಜಿಕ ಕ್ಷೇತ್ರ, ರಸ್ತೆ/ ಹೆದ್ದಾರಿ ಬಗ್ಗೆ ಹೆಚ್ಚಿನ ಗಮನ ಹರಿಸಿರುವುದು ದೀರ್ಘಾವಧಿಯಿಂದ ನಿರೀಕ್ಷಿಸಲಾಗಿದ್ದ ಅಂಶಗಳಾಗಿವೆ. ಬ್ಯಾಂಕುಗಳ ಮರುಬಂಡವಾಳೀಕರಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡದೇ ಇರುವುದು ನಿರಾಸೆ ಮೂಡಿಸಿದೆ" ಎಂದು ಆರ್ಥಿಕ ತಜ್ಞರಾದ ರಾಧಿಕಾ ರಾವ್ ಹೇಳಿದ್ದಾರೆ.
"ಬ್ಯಾಂಕಿಂಗ್ ಕ್ಷೇತ್ರಕ್ಕೆ 25 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಖಾಸಗಿ ಬಂಡವಾಳ ಉತ್ತೇಜಿಸುತ್ತಿರುವಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ" ಎಂದು ಮಿಲಿಂದ್ ಕೊಠಾರಿ ಬಿಡಿಒ ಇಂಡಿಯಾದ ವ್ಯವಸ್ಥಾಪಕ ಪಾಲುದಾರ ಹೇಳಿದಾರೆ.
"ಬಜೆಟ್ ನಲ್ಲಿ ಕೈಗೊಂಡಿರುವ ಕ್ರಮಗಳು ಸಂಕಷ್ಟದ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ರೈತರು ಚೇತರಿಸಿಕೊಳ್ಳಲು ಅನುಕೂಲವಾಗಲಿದೆ. ಆದರೆ ರೈತರ ಕೃಷಿ ವೆಚ್ಚ ಹಾಗೂ ಅವರು ಎದುರಿಸುತ್ತಿರುವ ನಷ್ಟವನ್ನು  ಸರಿದೂಗಿಸಬೇಕೆಂದರೆ, ಕೇಂದ್ರ ಸರ್ಕಾರ ಬೆಳೆ ವಿಮೆಗೆ ನೀಡಲಾಗಿರುವ ಅನುದಾನವನ್ನು ಹೆಚ್ಚಿಸಬೇಕಾಗುತ್ತದೆ. ನೀರಾವರಿಗೆ ಹೆಚ್ಚಿನ ಅನುದಾನ ನೀಡಿರುವುದನ್ನು ಸ್ವಾಗತಿಸುತ್ತೇನೆ, ಬಜೆಟ್ ನ ಅಂಶಗಳು ಜಾರಿಗೆ ಬರುವವರೆಗೆ ಕಾಡು ನೋಡಬೇಕಿದೆ ಎಂದು ಕೃಷಿ ತಜ್ಞ, ಯೋಜನಾ ಆಯೋಗದ ಮಾಜಿ ಸದಸ್ಯ ಯೋಗೇಂದ್ರ ಕೆ ಅಲಾಘ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com