
ನವದೆಹಲಿ: ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಯಾವುದೇ ಸೇವಾ ತೆರಿಗೆಗಳನ್ನು ಏರಿಕೆ ಮಾಡಿಲ್ಲ. ಆದರೆ ಹೊಸದಾಗಿ ಕೃಷಿ ಕಲ್ಯಾಣ ಸೆಸ್ ಶೇಕಡಾ 0.5ರಷ್ಟು ಏರಿಕೆ ಮಾಡಿದ್ದು, ಎಲ್ಲಾ ಸೇವೆಗಳಿಗೂ ಅನ್ವಯವಾಗಲಿದೆ.
ರೆಸ್ಟೋರೆಂಟ್ ಭೋಜನ, ಆಸ್ತಿ ಮತ್ತು ವಿಮೆ ಮತ್ತು ಮೊಬೈಲ್ ಕರೆಗಳ ಮೇಲೆ ಜೂನ್ 1ರಿಂದ ಈ ಸೇವಾ ತೆರಿಗೆಗಳು ಜಾರಿಗೊಳ್ಳಲಿದೆ.
ಜಾಹಿರಾತು, ವಿಮಾನ ಪ್ರವಾಸ, ವಾಸ್ತುಶಿಲ್ಪಿಗಳು ಸೇವೆಗಳು, ನಿರ್ದಿಷ್ಟ ರೀತಿಯ ನಿರ್ಮಾಣ, ಕ್ರೆಡಿಟ್ ಕಾರ್ಡ್ ಮತ್ತು ಈವೆಂಟ್ ನಿರ್ವಹಣೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ಕೃಷಿ ಕಲ್ಯಾಣ ಸೆಸ್ ಅನ್ವಯಲಾಗಲಿದೆ. ರಿಯಲ್ ಎಸ್ಟೇಟ್, ಹೊಟೇಲ್, ಟೆಲಿಕಾಂ ಮತ್ತು ಸೇವೆ ಇಂಡಸ್ಟ್ರೀಗಳ ಮೇಲೆ ಇದು ನಕರಾತ್ಮಕವಾಗಿದೆ.
ಕಳೆದ ವರ್ಷದ ಬಜೆಟ್ ವೇಳೆ 12.36 ಇದ್ದ ಸೇವಾ ತೆರಿಗೆಯನ್ನು ಅರುಣ್ ಜೇಟ್ಲಿ ಅವರು (ಶಿಕ್ಷಣ ಸೆಸ್ ಸೇರಿದಂತೆ) ಶೇಕಡಾ 14ಕ್ಕೆ ಏರಿಸಿದ್ದರು. ನಂತರ ಸ್ವಚ್ಛ ಭಾರತ ಸೆಸ್ 0.5 ರಷ್ಟು ಹೆಚ್ಚಿಸಿ 14.5ಕ್ಕೆ ಏರಿಸಲಾಗಿತ್ತು. ಇದೀಗ ಕೃಷಿ ಕಲ್ಯಾಣ ಸೆಸ್ 0.5 ರಷ್ಟು ಏರಿಸುವ ಮೂಲಕ ಸೇವಾ ತೆರಿಗೆ 15 ರಷ್ಟಾಗಿದೆ.
Advertisement