
ನವದೆಹಲಿ: 2016-17ರ ಬಜೆಟ್ ನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಆಶಯಗಳನ್ನು ಜಾರಿಗೊಳಿಸುವ ಬಜೆಟ್ ಇದಾಗಿದ್ದು, ಬಜೆಟ್ ಪರೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಸಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ರೈತರ, ಮಹಿಳೆಯರ, ಯುವಜನತೆ ಮತ್ತು ಬಡವರ ಅಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಗುರಿಯನ್ನು ಹೊಂದಿದೆ. ಅರುಣ್ ಜೇಟ್ಲಿ ಮಂಡಿಸಿರುವ ಬಜೆಟ್ ಈ ಎಲ್ಲಾ ಅಶಯಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನವಾಗಿದೆ ಎಂದರು.
ಬಜೆಟ್ ಬಡವರ, ರೈತರ ಹಾಗೂ ಸುಧಾರಣೆಯ ಪರವಾಗಿದೆ. ಈ ಬಜೆಟ್ ಎಲ್ಲರ ನಿರೀಕ್ಷೆಗಳನ್ನೂ ಪೂರ್ಣಗೊಳಿಸಲಿದೆ ಮತ್ತು ದೇಶದ ಆರ್ಥಿಕಾಭಿವೃದ್ದಿಗೆ ಪೂರವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Advertisement