
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿಯವರು ಸಂಸತ್ತಿನಲ್ಲಿ ಮಂಡಿಸಿದ 2016-17ನೇ ಸಾಲಿನ ಬಜೆಟ್ ನಲ್ಲಿ ವಿವಿಧ ವಲಯಗಳಿಗೆ ಯಾವ ರೀತಿ ಉಪಯೋಗವಾಗಿದೆ ನೋಡೋಣ ಬನ್ನಿ:
ಗ್ರಾಮೀಣ ಮತ್ತು ಕೃಷಿ ವಲಯ:
- ಕೃಷಿ ವಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ 35 ಸಾವಿರದ 984 ಕೋಟಿ ರೂಪಾಯಿ ಮೀಸಲು.
- ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ 19 ಸಾವಿರ ಕೋಟಿ ರೂಪಾಯಿ.
-ಗ್ರಾಮೀಣ ವಲಯಗಳ ಅಭಿವೃದ್ಧಿಗೆ 87 ಸಾವಿರದ 765 ಕೋಟಿ ರೂಪಾಯಿ.
-ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 38 ಸಾವಿರದ 500 ಕೋಟಿ ರೂಪಾಯಿ.
-ಮೇ 1, 2018ರ ಹೊತ್ತಿಗೆ ಗ್ರಾಮೀಣ ಭಾಗಗಳಿಗೆ ಸಂಪೂರ್ಣ ವಿದ್ಯುತ್.
- ಕೃಷಿ ಸಾಲದ ಗುರಿ 9 ಲಕ್ಷ ಕೋಟಿ ರೂಪಾಯಿ. ಬೆಳೆ ವಿಮಾ ಯೋಜನೆಗೆ 5 ಸಾವಿರದ 500 ಕೋಟಿ ರೂಪಾಯಿ.
-ಸಾವಯವ ಕೃಷಿಯಡಿ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ 5 ಲಕ್ಷ ಎಕರೆ,
ಸಾಮಾಜಿಕ ವಲಯ:
-ಶಿಕ್ಷಣ, ಆರೋಗ್ಯ ಸೇರಿದಂತೆ ಇತರ ಸಾಮಾಜಿಕ ವಲಯಗಳಿಗೆ 1 ಲಕ್ಷದ 51 ಸಾವಿರದ 581 ಕೋಟಿ ರೂಪಾಯಿ ಮೀಸಲು.
- ಪ್ರತಿ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡುವ ಆರೋಗ್ಯ ರಕ್ಷಣೆ ಯೋಜನೆ. ಹಿರಿಯ ನಾಗರಿಕರಿಗೆ 30 ಸಾವಿರ ರೂಪಾಯಿ ಹೆಚ್ಚು ಮೊತ್ತ ನೀಡಿಕೆ.
- ಜೆನಿರಿಕ್ ಔಷಧಿಗಳ ಮಾರಾಟಕ್ಕೆ 3 ಸಾವಿರ ಮಳಿಗೆಗಳು.
-ಸ್ವಚ್ಛ ಭಾರತ ಅಭಿಯಾನಕ್ಕೆ 9 ಸಾವಿರ ಕೋಟಿ ರೂಪಾಯಿ.
-ಸಾರ್ವಜನಿಕ ಮತ್ತು ಖಾಸಗಿ ಸಹಯೋಗದಲ್ಲಿ ರಾಷ್ಟ್ರೀಯ ಡಯಾಲಿಸಿಸ್ ಸೇವಾ ಕೇಂದ್ರ. ಗ್ರಾಮೀಣ ಭಾಗದ ಮಹಿಳೆಯರಿಗೆ ಎಲ್ ಪಿಜಿ ಸಂಪರ್ಕ.
ಶಿಕ್ಷಣ ಮತ್ತು ಉದ್ಯೋಗ:
-62 ಹೊಸ ನವೋದಯ ವಿದ್ಯಾಲಯಗಳ ಸ್ಥಾಪನೆ.
- ಸಾವಿರ ಕೋಟಿ ರೂಪಾಯಿ ಹೂಡಿಕೆಯಲ್ಲಿ ಉನ್ನತ ಶಿಕ್ಷಣ ಹಣಕಾಸು ನೆರವು ಸಂಸ್ಥೆ ಸ್ಥಾಪನೆ.
-10 ಸರ್ಕಾರಿ ಮತ್ತು 10 ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವಿಶ್ವದರ್ಜೆ ಮಟ್ಟಕ್ಕೇರಿಸುವುದು. ಶಾಲೆ ಮತ್ತು ಡಿಪ್ಲೊಮಾ ಪದವಿ ಮುಗಿಸಿದವರಿಗೆ ಡಿಜಿಟಲ್ ಪ್ರಮಾಣಪತ್ರ.
-ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಸಾವಿರದ 804 ಕೋಟಿ ರೂಪಾಯಿ ಮೀಸಲು.
- ಎಲ್ಲಾ ನೌಕರರಿಗೆ ಮೊದಲ ಮೂರು ವರ್ಷಗಳಲ್ಲಿ ಪಿ.ಎಫ್ ಹಣದ ಶೇಕಡಾ 8.33 ಸರ್ಕಾರವೇ ಭರಿಸಲಿದೆ.
ಮೂಲಭೂತ ಸೌಕರ್ಯ:
-ರಸ್ತೆ ನಿರ್ಮಾಣಕ್ಕೆ 97 ಸಾವಿರ ಕೋಟಿ ರೂಪಾಯಿ.
-ಮೂಲಭೂತ ಸೌಕರ್ಯಕ್ಕೆ ಈ ವರ್ಷದ ಬಜೆಟ್ ನಲ್ಲಿ 2 ಲಕ್ಷದ 21 ಸಾವಿರದ 246 ಕೋಟಿ ರೂಪಾಯಿ.
-10 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಮತ್ತು 50 ಸಾವಿರ ಕಿಲೋ ಮೀಟರ್ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಬದಲಾವಣೆ.
- ಪೂರ್ವ ಮತ್ತು ಪಶ್ಚಿಮ ತೀರಗಳಲ್ಲಿ ಹೊಸ ಹಸಿರು ಬಂದರು ಅಭಿವೃದ್ಧಿ. ಹಳೆ ವಿಮಾನ ನಿಲ್ದಾಣಗಳು ಪುನರುಜ್ಜೀವನ. ಸಣ್ಣ ಬಂದರುಗಳ ಅಭಿವೃದ್ಧಿಗೆ ರಾಜ್ಯಗಳೊಂದಿಗೆ ಕೇಂದ್ರದ ಸಹಕಾರ.
- ಮುಂದಿನ 15-20 ವರ್ಷಗಳಲ್ಲಿ ಪರಮಾಣು ಶಕ್ತಿಯ ವೃದ್ಧಿಗೆ ಯೋಜನೆ.
-ವಿಮೆ ಮತ್ತು ಪಿಂಚಣಿ, ಸಂಪತ್ತು ಪುನರ್ರಚನಾ ಕಂಪೆನಿ, ಷೇರು ವಿನಿಮಯಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಸುಧಾರಣೆ.
ಹಣಕಾಸು ವಲಯ:
ಹಣಕಾಸು ಮಸೂದೆ-2016ರ ಮೂಲಕ ಹಣಕಾಸು ನೀತಿ ಚೌಕಟ್ಟು ಮತ್ತು ಹಣಕಾಸು ನೀತಿ ಸಮಿತಿಯ ಶಾಸನಬದ್ಧ ಆಧಾರ
-ಸಾರ್ವಜನಿಕ ವಲಯ ಬ್ಯಾಂಕುಗಳ ಮರುಬಂಡವಾಳೀಕರಣಕ್ಕೆ 25 ಸಾವಿರ ಕೋಟಿ ರೂಪಾಯಿ ಮೀಸಲು.
-ಷೇರು ಮಾರುಕಟ್ಟೆಗೆ ಸಾಮಾನ್ಯ ವಿಮಾ ಕಂಪೆನಿಗಳ ಸೇರ್ಪಡೆ.
ಖಾಸಗಿ ಹಣಕಾಸು ವಲಯ:
5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬಗಳ ಮಕ್ಕಳಿಗೆ ಸೆಕ್ಷನ್ 87 ಎ ಅಡಿ 5 ಸಾವಿರ ಶಾಲಾ ಶುಲ್ಕ ವಿನಾಯಿತಿ. ಬಾಡಿಗೆ ರಿಯಾಯಿತಿ ಮೊತ್ತ ಪ್ರತಿವರ್ಷ 24 ಸಾವಿರದಿಂದ 60 ಸಾವಿರಕ್ಕೆ ಏರಿಕೆ.
-ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನಿವೃತ್ತಿ ಸಂದರ್ಭದಲ್ಲಿ ಪಡೆಯುವ ಪಿಂಚಣಿಯ ಮೊತ್ತದ ಶೇಕಡಾ 40 ರಷ್ಟು ಹಣಕ್ಕೆ ತೆರಿಗೆ ವಿನಾಯ್ತಿ.
- 35 ಲಕ್ಷದವರೆಗಿನ ಮನೆ ಕೊಳ್ಳುವವರಿಗೆ ಗೃಹ ಸಾಲದಲ್ಲಿ 50 ಸಾವಿರ ರೂಪಾಯಿ ವಿನಾಯ್ತಿ, ಮೊದಲ ಮನೆ ಕೊಳ್ಳುವವರು 50 ಲಕ್ಷದೊಳಗಿನ ಮನೆ ಕೊಂಡವರಿಗೆ ಸಹ 50 ಸಾವಿರ ರೂಪಾಯಿ ವಿನಾಯ್ತಿ.
ಪ್ರಸ್ತುತ ಇರುವ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ.
Advertisement