
ನವದೆಹಲಿ: ಕೇಂದ್ರ ವಿತ್ತ ಸಚಿವ ನರೇಂದ್ರ ಮೋದಿ ಅವರು ಸೋಮವಾರ ಘೋಷಣೆ ಮಾಡಿದ ಮುಂಗಡ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ವಚ್ಛ ಭಾರತಕ್ಕೆ ಸುಮಾರು 9 ಸಾವಿರ ಕೋಟಿ ರು.ಗಳನ್ನು ಮೀಸಲಿಡಲಾಗಿದೆ.
ಕಳೆದ 2014 ಅಕ್ಟೋಬರ್ 2 ರಂದು ರಾಜಘಾಟ್ ನಲ್ಲಿ ನರೇಂದ್ರ ಮೋದಿ ಅವರಿಂದಲೇ ವಿದ್ಯುಕ್ತವಾಗಿ ಆರಂಭಗೊಂಡ ಈ ಮಹತ್ವಾಕಾಂಕ್ಷಿ ಯೋಜನೆಗೆ ಕಳೆದ ಬಜೆಟ್ ನಲ್ಲೂ ಹಣ ಮೀಸಲಿಡಲಾಗಿತ್ತು. ಈ ಬಾರಿ ಅದರ ಮಿತಿಯನ್ನು ಏರಿಸಲಾಗಿದ್ದು, ಈ ವರ್ಷ ಸ್ವಚ್ಛ ಭಾರತ್ ಯೋಜನೆಗೆ 9 ಸಾವಿರ ಕೋಟಿ ರುಗಳನ್ನು ಮೀಸಲಿಡಲಾಗಿದೆ. ದೇಶದ ಸುಮಾರು 4041 ನಗರಗಳು ಮತ್ತು ಪಟ್ಟಣಗಳ ರಸ್ತೆಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಈ ಎಲ್ಲ ಪ್ರದೇಶಗಳ ಮೂಲ ಸೌಕರ್ಯವನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ.
ಯೋಜನೆ ಅನ್ವಯ ದೇಶವನ್ನು ಬಯಲು ಶೌಚ ಮುಕ್ತವನ್ನಾಗಿ ಮಾಡಲು 20198 ಅಕ್ಟೋಬರ್ ತಿಂಗಳೊಳಗೆ ದೇಶದ ಮೂಲೆ ಮೂಲೆಯಲ್ಲಿ ಸುಮಾರು 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ 1.96 ಲಕ್ಷ ಕೋಟಿ ಮೀಸಲಿಟ್ಟಿದೆ. ಇನ್ನು ಈ ಹಿಂದೆ ಘೋಷಣೆಯಾದ 12ನೇ ಪಂಚವಾರ್ಷಿಕ ಯೋಜನೆ (2012-17)ಯಲ್ಲಿಯೂ ಕೂಡ ನಿರ್ಮಲ ಭಾರತ ಅಭಿಯಾನದಡಿಯಲ್ಲಿ ಗ್ರಾಮೀಣ ಭಾರತದ ಮೂಲ ಸೌಕರ್ಯವೃದ್ಧಿಗೆ ಒತ್ತು ನೀಡಲಾಗಿತ್ತು. ಇದಕ್ಕಾಗಿ ಅಂದಿನ ಯುಪಿಎ ಸರ್ಕಾರ 37,159 ಕೋಟಿ ರು.ಗಳನ್ನು ಮೀಸಲಿಟ್ಟಿತ್ತು.
Advertisement