ನೀರಾವರಿ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಸಿಕ್ಕಿದ್ದು...

ಕೆರೆಗಳ ಪುನರುಜ್ಜೀವನಕ್ಕೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಆದ್ಯತೆ ನೀಡಿದ್ದು, ಇದಕ್ಕಾಗಿ ಕೆರೆ ಸಂಜೀವಿನಿ ಎಂಬ ಯೋಜನೆ ಘೋಷಿಸಿ 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ.
ನೀರಾವರಿ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಸಿಕ್ಕಿದ್ದು...
ಬೆಂಗಳೂರು: ಕೆರೆಗಳ ಪುನರುಜ್ಜೀವನಕ್ಕೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಆದ್ಯತೆ ನೀಡಿದ್ದು, ಇದಕ್ಕಾಗಿ ಕೆರೆ ಸಂಜೀವಿನಿ ಎಂಬ ಯೋಜನೆ ಘೋಷಿಸಿ 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. 

2017-18 ನೇ ಸಾಲಿನ ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿರುವ ಸಿಎಂ ಸಿದ್ದರಾಮಯ್ಯ ಹಲವು ಯೋಜನೆ, ಕೆರೆಗಳ ಅಭಿವೃಧಿಗೆ ಕ್ರಮಗಳನ್ನು ಘೋಷಿಸಿದ್ದಾರೆ.  ನೀರಾವರಿ, ರೈತರಿಗೆ ಸಿಕ್ಕಿದ್ದು ತುಂತುರು ನೀರಾವರಿ ಯೋಜನೆಗೆ 375 ಕೋಟಿ ಅನುದಾನ, ಕರಾವಳಿ ವ್ಯಾಪ್ತಿಯಲ್ಲಿ ಪಶ್ಚಿಮ ವಾಹಿನಿ ಯೋಜನೆ ಪ್ರಮುಖ ಘೋಷಣೆಗಳಾಗಿವೆ.
 
42 ಕೋಟಿ ರೂಪಾಯಿ ವೆಚ್ಚದಲ್ಲಿ 10 ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಿರುವುದಾಗಿ ಬಜೆಟ್ ಭಾಷಣದಲ್ಲಿ ತಿಳಿಸಿರುವ ಸಿಎಂ ಸಿದ್ದರಾಮಯ್ಯ,  ಚಿಕ್ಕಮಗಳೂರು, ಹಾಸನದಲ್ಲಿ ಚೆಕ್ ಡ್ಯಾಂ ನಿರ್ಮಾಣವಾಗಲಿದೆ ಎಂದಿದ್ದಾರೆ. 

ಬೆಂಗಳೂರಿನ ಕೋರಮಂಗಲ- ಚಲಘಟ್ಟ ಕಣಿವೆ ನೀರು ಸಂಸ್ಕಣೆ, ಇದರಿಂದ ಸಿಗುವ 8 ಟಿಎಂಸಿ ನೀರನ್ನು ಎರಡು ಜಿಲ್ಲೆಗಳ 126 ಕೆರೆಗಳ ಭರ್ತಿಗೊಳಿಸಲು ಕ್ರಮ ಸಣ್ಣ ನೀರಾವರಿ ಗೆ 2099 ರೂ ಕೋಟಿ ರೂಪಾಯಿ. ತುಂತುರು ನೀರಾವರಿ ಯೋಜನೆಗೆ 375 ಕೋಟಿ ಅನುದಾನ ನೀರಾವರಿ ಕ್ಷೇತ್ರಕ್ಕೆ ಘೋಷಿಸಲಾದ ಅಂಶಗಳಾಗಿದ್ದು, ನೀರಾವರಿ ಯೋಜನೆಗಳಿಗೆ ಒಟ್ಟು 3 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com