ಸಿದ್ದರಾಮಯ್ಯ ಬಜೆಟ್ ನಲ್ಲಿ ನಗರಾಭಿವೃದ್ಧಿಗೆ ಸಿಕ್ಕ ಅನುದಾನ

2017-18 ನೇ ಸಾಲಿನ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ನಗರಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಬೆಂಗಳೂರು ಒನ್ ಮಾದರಿಯಲ್ಲಿ ಕರ್ನಾಟಕ ಒನ್. ಸೇರಿದಂತೆ ಹಲವು ಯೋಜನೆಗಳನ್ನು
ಸಿದ್ದರಾಮಯ್ಯ ಬಜೆಟ್ ನಲ್ಲಿ ನಗರಾಭಿವೃದ್ಧಿಗೆ ಹೆಚ್ಚಿನ ಅನುದಾನ
ಸಿದ್ದರಾಮಯ್ಯ ಬಜೆಟ್ ನಲ್ಲಿ ನಗರಾಭಿವೃದ್ಧಿಗೆ ಹೆಚ್ಚಿನ ಅನುದಾನ
ಬೆಂಗಳೂರು: 2017-18 ನೇ ಸಾಲಿನ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ನಗರಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಬೆಂಗಳೂರು ಒನ್ ಮಾದರಿಯಲ್ಲಿ ಕರ್ನಾಟಕ ಒನ್. ರಾಜ್ಯದ 9 ಜಿಲ್ಲೆಗಳಲ್ಲಿ ಕರ್ನಾಟಕ ವನ್ ಕೇಂದ್ರ ಸ್ಥಾಪನೆ, ಖಾಸಗಿ ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸು 58ರಿಂದ 60ಕ್ಕೆ ಏರಿಕೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. 
ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಗೂ ಹೆಚ್ಚಿನ ಗಮನ ಹರಿಸಲಾಗಿದ್ದು, ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ವಾಪಸ್ಸಾಗುವ ನಿರುದ್ಯೋಗಿಗಳಿಗೆ ಕೇರಳ ಮಾದರಿ ಕಾರ್ಯಕ್ರಮವನ್ನು ಘೋಷಣೆ ಮಾಡಲಾಗಿದೆ. ರಸ್ತೆ ಸಾರಿಗೆ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ಜೊತೆಯಲ್ಲೇ ರಾಜ್ಯ ಸರ್ಕಾರ ವಿಮಾನ ನಿಲ್ದಾಣಗಳನ್ನೂ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು, ಬೆಳಗಾವಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಿ, ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗಾಗಿ 588 ಎಕರೆ ಭೂಮಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಗರಾಭಿವೃದ್ಧಿಗೆ ಘೋಷಣೆಯಾದ ಯೋಜನೆಗಳು, ಅನುದಾನದ ಪ್ರಮುಖಾಂಶಗಳು ಹೀಗಿವೆ.
  • ಡಯಲ್ 100 ಜಿಲ್ಲಾ ಕೇಂದ್ರಗಳಿಗೂ ವಿಸ್ತರಣೆ.
  • ಕಾರವಾರದಲ್ಲಿ ಹೆಚ್ಚುವರಿ ಹಡಗು ನಿಲುಗಡೆಗೆ 1508ಮೀಟರ್ ಉದ್ದದ ಧಕ್ಕೆ ನಿರ್ವಿುಸಲು ಡಿಪಿಆರ್ ಮಾಡಲು ನಿರ್ಧಾರ
  • ಪೊಲೀಸ್ ತರಬೇತಿ ಶಾಲೆಗಳ ಬಲವರ್ಧನೆಗೆ 10 ಕೋಟಿ ಅನುದಾನ.
  • ಚಿಂತಾಮಣಿ, ರಾಣೆಬೆನ್ನೂರು, ಬಂಟ್ವಾಳದಲ್ಲಿ ಆರ್ ಟಿ ಒ ಸ್ಥಾಪನೆ. 
  • ಪಾವಗಡದಲ್ಲಿ 2000 ಮೆ.ವ್ಯಾ ಸಾಮರ್ಥ್ಯದ ಸೌರವಿದ್ಯುತ್ ಪಾರ್ಕ್ ಸ್ಥಾಪನೆ
  • ಪ್ರಸಕ್ತ ಸಾಲಿನಲ್ಲಿ 3,975 ಮೆ.ವ್ಯಾ ವಿದ್ಯುತ್ ಉತ್ಪಾದನೆ
  • ಪ್ರಸಕ್ತ ಸಾಲಿನಲ್ಲಿ ಇಂಧನ ಇಲಾಖೆ 14,094 ಕೋಟಿ ರೂ
  • ‘ಭಾಗ್ಯಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಯೂನಿಟ್​ಗಳನ್ನು 18 ರಿಂದ 40 ಯೂನಿಟ್​ಗೆ ಹೆಚ್ಚಳ
  • 10ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾವಾರು ಕಾರ್ಯಪಡೆ ರಚನೆ
  • ರಾಜ್ಯ ಸರ್ಕಾರದಿಂದ 50 ‘ಸಾಲು ಮರದ ತಿಮ್ಮಕ್ಕ’ ವೃಕ್ಷ ಪಾರ್ಕ್ ಅಭಿವೃದ್ಧಿ
  • ಶಬರಿಮಲೆಯಲ್ಲಿ ಕರ್ನಾಟಕದ ಉಪ ಕಚೇರಿ ಆರಂಭಿಸಲಾಗುವುದು. 
  • ರಾಜ್ಯದ 50ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಈ ಯೋಜನೆ. 
  • ಕಚೇರಿಯಲ್ಲಿ ವೈದ್ಯಕೀಯ ಸೌಲಭ್ಯ, ಸಹಾಯವಾಣಿ ಮತ್ತು ರಕ್ಷಣೆಗಾಗಿ ಕ್ರಮ.
ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಅನುದಾನ, ಯೋಜನೆಗಳ ಘೋಷಣೆ 
  • ಮೈಲಾರ ಲಿಂಗೇಶ್ವರ, ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.
  • ಹೊಸ ತಾಲೂಕು ಪಂಚಾಯ್ತಿ ಕಚೇರಿ ನಿರ್ಮಾಣಕ್ಕೆ 300 ಕೋಟಿ ಅನುದಾನ
  • ರಾಜ್ಯದಲ್ಲಿ ಹೊಸದಾಗಿ 460 ಗ್ರಾಮ ಪಂಚಾಯ್ತಿಗಳ ಆರಂಭ.
  • ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಉಚಿತ ವೈಫೈ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com