ಕೇಂದ್ರ ಬಜೆಟ್

ವಿತ್ತ ಸಚಿವರಿಗೆ ವಿಚಿತ್ರ ಸವಾಲು: ಪರೋಕ್ಷ ತೆರಿಗೆ ನಿಖರ ಅಂಕಿ-ಅಂಶಗಳೇ ಇಲ್ಲ!

2017-18 ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧಗೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿಗೆ ವಿಚಿತ್ರ ಸವಾಲೊಂದು ಎದುರಾಗಿದೆ. ಜಿಎಸ್ ಟಿ ಕಾರಣದಿಂದಾಗಿ ಈ ಸವಾಲು ಎದುರಾಗಿದ್ದು, ಪರೋಕ್ಷ ತೆರಿಗೆಯ ಕುರಿತು ನಿಖರ ಅಂಕಿ-ಅಂಶಗಳಿಲ್ಲದೇ ಬಜೆಟ್ ನ್ನು ಮಂಡಿಸಬೇಕಾಗಿದೆ.

ವಿತ್ತ ಸಚಿವರಿಗೆ ವಿಚಿತ್ರ ಸವಾಲು: ಪರೋಕ್ಷ ತೆರಿಗೆ ನಿಖರ ಅಂಕಿ-ಅಂಶಗಳೇ ಇಲ್ಲ!
ಅರುಣ್ ಜೇಟ್ಲಿ
Published On :
ನವದೆಹಲಿ: 2017-18 ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧಗೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿಗೆ ವಿಚಿತ್ರ ಸವಾಲೊಂದು ಎದುರಾಗಿದೆ. ಜಿಎಸ್ ಟಿ ಕಾರಣದಿಂದಾಗಿ ಈ ಸವಾಲು ಎದುರಾಗಿದ್ದು, ಪರೋಕ್ಷ ತೆರಿಗೆಯ ಕುರಿತು ನಿಖರ ಅಂಕಿ-ಅಂಶಗಳಿಲ್ಲದೇ ಬಜೆಟ್ ನ್ನು ಮಂಡಿಸಬೇಕಾಗಿದೆ. 
ಬಜೆಟ್ ಮಂಡನೆಯಲ್ಲಿ ಯೋಜನೆಗಳ ಘೋಷಣೆಗಾಗಿ ವಿತ್ತ ಸಚಿವಾಲಯ ಸಾಮಾನ್ಯವಾಗಿ ನೇರ ಹಾಗೂ ಪರೋಕ್ಷ ತೆರಿಗೆಯ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಬಜೆಟ್ ನ್ನು ಸಿದ್ಧಪಡಿಸುತ್ತದೆ. ಆದರೆ ಈ ಬಾರಿ ಜಿಎಸ್ ಟಿ ಜಾರಿಯ ವಿಳಂಬದಿಂದಾಗಿ ವಿತ್ತ ಸಚಿವಾಲಯದ ಬಳಿ ಪರೋಕ್ಷ ತೆರಿಗೆ ಕುರಿತು ನಿಖರ ಅಂಕಿ-ಅಂಶಗಳಿಲ್ಲದಂತಾಗಿದೆ. 
ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಸೇರಿದಂತೆ ನೇರ ತೆರಿಗೆ ವ್ಯಾಪ್ತಿಯಲ್ಲಿ ಬರುವ ತೆರಿಗೆಗಳ ಬಗ್ಗೆ ಅಂಕಿ-ಅಂಶಗಳಿವೆ. ಆದರೆ ಜಿಎಸ್ ಟಿ ಜಾರಿ ಜು.1 ಕ್ಕೆ ಮುಂದೂಡಲಾಗಿದ್ದು, ಜಿಎಸ್ ಟಿ ಜಾರಿ ವಿಳಂಬದಿಂದಾಗಿ ಸೀಮಾ ಸುಂಕ, ಸೇವಾ ತೆರಿಗೆ ಸೇರಿದಂತೆ ಪರೋಕ್ಷ ತೆರಿಗೆಯ ಅಂಕಿ-ಅಂಶಗಳು ಈ ವರೆಗೂ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪರೋಕ್ಷ ತೆರಿಗೆಯ ಅಂಕಿ-ಅಂಶಗಳೇ ಇಲ್ಲದೇ ಬಜೆಟ್ ಮಂಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.
2017-18 ನೇ ಸಾಲಿನ ಬಜೆಟ್ ನಲ್ಲಿ ತೆರಿಗೆ ಕಡಿತಗೊಳಿಸುವ ನಿರೀಕ್ಷೆ ಇದೆಯಾದರೂ ಪರೋಕ್ಷ ತೆರಿಗೆ ಅಂಕಿ-ಅಂಶಗಳು ಲಭ್ಯವಿಲ್ಲದ ಕಾರಣ ತೆರಿಗೆ ಕಡಿತ ಸಹ ಕಷ್ಟ ಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.