ಬಜೆಟ್ 2017: ಯಾವುದು ಅಗ್ಗ? ಯಾವುದು ದುಬಾರಿ?

ಕೇಂದ್ರ ಸರ್ಕಾರ ಫೆ.1 ರಂದು 2017-18 ನೇ ಸಾಲಿನ ಬಜೆಟ್ ಮಂಡಿಸಿದ್ದು ಸಿಗರೇಟ್ ಪಾನ್ ಮಸಾಲ, ಎಲ್ ಇಡಿ ಬಲ್ಬ್ ಗಳ ಮೇಲಿನ ತೆರಿಗೆಯನ್ನು ಏರಿಕೆ ಮಾಡಿದೆ.
ಬಜೆಟ್ 2017: ಯಾವುದು ಅಗ್ಗ? ಯಾವುದು ದುಬಾರಿ?
ನವದೆಹಲಿ: ಕೇಂದ್ರ ಸರ್ಕಾರ ಫೆ.1 ರಂದು 2017-18 ನೇ ಸಾಲಿನ ಬಜೆಟ್ ಮಂಡಿಸಿದ್ದು ಸಿಗರೇಟ್ ಪಾನ್ ಮಸಾಲ, ಎಲ್ ಇಡಿ ಬಲ್ಬ್ ಗಳ ಮೇಲಿನ ತೆರಿಗೆಯನ್ನು ಏರಿಕೆ ಮಾಡಿದೆ. 
ಎಲ್ ಇಡಿ ಬಲ್ಬ್ ಗಳ ಬಳಕೆಯನ್ನು ಉತ್ತೇಜಿಸುತ್ತಿದ್ದ ಕೇಂದ್ರ ಸರ್ಕಾರ, ಈ ಹಿಂದೆ ಎಲ್ ಇಡಿ ಬಲ್ಬ್ ಗಳ ದರ ಕಡಿಮೆ ಮಾಡಲು ಹಲವು ಕ್ರಮ ಕೈಗೊಂಡಿತ್ತು. ಆದರೆ ಜನಸಾಮಾನ್ಯರು ಅತಿ ಹೆಚ್ಚು ಬಳಕೆ ಮಾಡುವ ಈ ಉತ್ಪನ್ನದ ಮೇಲೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅಬಕಾರಿ ಸುಂಕವನ್ನು ಶೇ.6 ರಷ್ಟು ಹೆಚ್ಚಿಸಿದೆ.  
ಹಲವು ಉತ್ಪನ್ನಗಳ ಮೇಲಿನೆ ತೆರಿಗೆ ಏರಿಕೆಯಾಗಿದ್ದರೆ ಇನ್ನೂ ಕೆಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿದ್ದು, ಯಾವ ಉತ್ಪನ್ನಗಳು ಅಗ್ಗ, ಯಾವುದರ ಬೆಲೆ ದುಬಾರಿಯಾಗಲಿದೆ ಎಂಬ ಬಗ್ಗೆ  ಮಾಹಿತಿ ಹೀಗಿದೆ. 
ಯಾವುದು ಅಗ್ಗ?
ರೈಲ್ವೆ ಇ-ಟಿಕೆಟ್: ರೈಲ್ವೆ ಇಲಾಖೆ ಮೂಲಕವೇ ಟಿಕೆಟ್ ಗಳನ್ನು ಕಾಯ್ದಿರಿಸಿದರೆ, ಈ ಹಿಂದೆ ವಿಧಿಸಲಾಗುತ್ತಿದ್ದ ಸೇವಾ ಶುಲ್ಕವನ್ನು ರದ್ದುಗೊಳಿಸಲಾಗಿದ್ದು, ರೈಲ್ವೆ ಇ-ಟಿಕೆಟ್ ದರ ಇಳಿಕೆಯಾಗಲಿದೆ 
ಪಿಒಎಸ್ ಮಿಷನ್: ನೋಟು ನಿಷೇಧದ ಬಳಿಕ ಕೇಂದ್ರ ಸರ್ಕಾರ ನಗದು ರಹಿತ ವಹಿವಾಟುಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ಬಜೆಟ್ ನಲ್ಲಿ ಪಾಯಿಂಟ್‌ ಆಫ್ ಸೇಲ್‌ ಮಿಷನ್‌ ಅಥವಾ ಸ್ವೈಪಿಂಗ್ ಮಿಷನ್ ಗಳ ದರವನ್ನು ಇಳಿಕೆ ಮಾಡಲಾಗಿದ್ದು, ಪಿಒಎಸ್ ಗಳ ದರ ಕಡಿಮೆಯಾಗಲಿದೆ. 
ಸೋಲಾರ್ ಮತ್ತಷ್ಟು  ತಂಪು: ಸೋಲಾರ್ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿದ್ದು, ಸೋಲಾರ್ ಉತ್ಪನ್ನಗಳ ದರ ಇಳಿಕೆಯಾಗಲಿದೆ. ಫಿಂಗರ್ಪ್ರಿಂಟ್ ರೀಡರ್ ಬೆಲೆ ಸಹ ಇಳಿಕೆಯಾಗಲಿದೆ. 
ಯಾವುದು ದುಬಾರಿ:  
ಮತ್ತಷ್ಟು ಸುಡಲಿದೆ ಸಿಗರೇಟ್: ಸಿಗರೇಟ್ ಮೇಲಿನ ತೆರಿಗೆಯನ್ನು ಏರಿಕೆ ಮಾಡಲಾಗಿದ್ದು, ಸಿಗರೇಟ್ ದರ ಸಹ ಏರಿಕೆಯಾಗಲಿದೆ. 
ಪಾನ್ ಮಸಾಲ ಮತ್ತಷ್ಟು ಖಾರ: ಬಜೆಟ್ ನಲ್ಲಿ ಪಾನ್ ಮಸಾಲ ತೆರಿಗೆಯನ್ನೂ ಹೆಚ್ಚಿಸಲಾಗಿದ್ದು,  ಪಾನ್ ಮಸಾಲ ಬೆಲೆಯೂ ಏರಲಿದೆ. 
ಗೋಡಂಬಿ ಉತ್ಪನ್ನ: ಗೋಡಂಬಿ ಸಂಸ್ಕರಣೆ ದರ ಏರಿಕೆಯಾಗಿರುವುದರಿಂದ ಗೋಡಂಬಿ ಉತ್ಪನ್ನಗಳು ಸಹಜವಾಗಿಯೇ ಏರಿಕೆಯಾಗಲಿದೆ. 
ಚರ್ಮದ ಉತ್ಪನ್ನಗಳು, ಬೆಳ್ಳಿ, ಮೊಬೈಲ್ ಟ್ಯಾಬ್,  ಎಲ್ ಇಡಿ ಬಲ್ಬ್, ವಾಟರ್ ಫಿಲ್ಟರ್ 
ಅಲ್ಯೂಮಿನಿಯಂ ಉತ್ಪನ್ನಗಳೂ ಸಹ ಬೆಲೆ ಏರಿಕೆ ಕಾಣಲಿರುವ ಉತ್ಪನ್ನಗಳ ಪಟ್ಟಿಗೆ ಸೇರಲಿವೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com