ನವದೆಹಲಿ: 2017-18 ನೇ ಸಾಲಿನ ಬಜೆಟ್ ಮಂಡಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಬಜೆಟ್ ಕುರಿತು ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಟ್ವಿಟರ್ ನಲ್ಲಿ ಉತ್ತರಿಸಲಿದ್ದಾರೆ.
ವಿಡಿಯೋ ಸಂದೇಶದಲ್ಲಿ ಹೇಳಿಕೆ ನೀಡಿರುವ ಅರುಣ್ ಜೇಟ್ಲಿ, ಸಾರ್ವಜನಿಕರು ಟ್ವಿಟರ್ ನಲ್ಲಿ ಬಜೆಟ್ ಕುರಿತ ಪ್ರಶ್ನೆಗಳನ್ನು ನನ್ನಲ್ಲಿ ನೇರವಾಗಿ ಕೇಳಬಹುದು, #MyQuestionToFM ಹ್ಯಾಶ್ ಟ್ಯಾಗ್ ಬಳಸಿ ಟ್ವಿಟರ್ ನಲ್ಲಿ ಬಜೆಟ್ ಕುರಿತು ವಿತ್ತ ಸಚಿವರಿಗೆ ಪ್ರಶ್ನೆಗಳನ್ನು ಕೇಳಬಹುದಾಗಿದೆ.
ಇದೇ ಮೊದಲ ಬಾರಿಗೆ ವಿತ್ತ ಸಚಿವರು ಟ್ವಿಟರ್ ಮೂಲಕ ಸಾರ್ವಜನಿಕ ಪ್ರಶ್ನೆಗಳನ್ನು ಸ್ವೀಕರಿಸಿ ಉತ್ತರ ನೀಡುವುದಕ್ಕೆ ಮುಂದಾಗಿದ್ದಾರೆ.