ನವದೆಹಲಿ: 2017-18 ನೇ ಸಾಲಿನ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಇಲಾಖೆಗೆ ಕೇಂದ್ರ ಸರ್ಕಾರ ಕಳೆದ ಬಾರಿಗಿಂತ ಶೇ.9.6 ರಷ್ಟು ಹೆಚ್ಚು (4195 ಕೋಟಿ ರೂ.) ಅನುದಾನ ಘೋಷಿಸಲಾಗಿದೆ.
ಕಳೆದ ವರ್ಷದ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಇಲಾಖೆಗೆ 3,827.25 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿತ್ತು. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ 367.75 ಹೆಚ್ಚುವರಿ ಮೊತ್ತದ ಅನುದಾನವನ್ನು ಘೋಷಿಸಿದ್ದಾರೆ.
ಕೇಂದ್ರ ಸರ್ಕಾರ ಯೋಜನೇತರ ಹಾಗೂ ಯೋಜನಾ ವೆಚ್ಚಗಳ ವಿಂಗಡನೆ ರದ್ದು ಮಾಡಲಾಗಿದ್ದು, ಮುಸ್ಲಿಂ, ಸಿಖ್, ಜೈನ್, ಕ್ರೈಸ್ತ, ಪಾರ್ಸಿ, ಅಲ್ಪಸಂಖ್ಯಾತರಿಗಾಗಿ ಹೊಸ ಯೋಜನೆಗಳಿಗೆ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.