ಜಾರ್ಖಂಡ್ ಮತ್ತು ಗುಜರಾತ್ ನಲ್ಲಿ ಹೊಸ ಎಐಐಎಂಎಸ್ ಸ್ಥಾಪನೆ: ಜೇಟ್ಲಿ
ದೇಶದಲ್ಲಿ ಆರೋಗ್ಯ ಅಭಿವೃದ್ಧಿಯ ಅಂಗವಾಗಿ ಜಾರ್ಖಂಡ್ ಮತ್ತು ಗುಜರಾತ್ ನಲ್ಲಿ ಎರಡು ನೂತನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (ಎಐಐಎಂಎಸ್) ಸ್ಥಾಪಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ
ನವದೆಹಲಿ: ದೇಶದಲ್ಲಿ ಆರೋಗ್ಯ ಅಭಿವೃದ್ಧಿಯ ಅಂಗವಾಗಿ ಜಾರ್ಖಂಡ್ ಮತ್ತು ಗುಜರಾತ್ ನಲ್ಲಿ ಎರಡು ನೂತನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (ಎಐಐಎಂಎಸ್) ಸ್ಥಾಪಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.
"ಜಾರ್ಖಂಡ್ ಮತ್ತು ಗುಜರಾತ್ ನಲ್ಲಿ ಎರಡು ನೂತನ ಎಐಐಎಂಎಸ್ ಗಳು ತಲೆಯೆತ್ತಲಿವೆ" ಎಂದು ೨೦೧೭-೧೮ ಕೇಂದ್ರ ಬಜೆಟ್ ಮಂಡನೆಯ ವೇಳೆಯಲ್ಲಿ ಜೇಟ್ಲಿ ಹೇಳಿದ್ದಾರೆ.
ಇದೆ ಮೊದಲ ಬಾರಿಗೆ ಫೆಬ್ರವರಿ ೧ ರಂದು ಕೇಂದ್ರ ಬಜೆಟ್ ಮಂಡಿಸಲಾಯಿತು.
೨೦೧೭ ರೊಳಗೆ ಕಾಲ ಆಜಾರ್ ನಿರ್ಮೂಲನೆಗೆ, ೨೦೧೮ ರೊಳಗೆ ಕುಷ್ಠ ರೋಗ ನಿರ್ಮೂಲನೆ ಮತ್ತು ಇನ್ನು ಹಲವು ರೋಗಗಳನ್ನು ನಿರ್ಧಿಷ್ಟ ಸಮಯದೊಳಗೆ ನಿರ್ಮೂಲನೆ ಮಾಡುವ ಹೊಸ ಗುರಿಗಳನ್ನು ಕೂಡ ಜೇಟ್ಲಿ ಘೋಷಿಸಿದ್ದಾರೆ.
"ಆರೋಗ್ಯ ನೀತಿಯಲ್ಲಿ ೨೦೧೭ ರೊಳಗೆ ಕಾಲ ಆಜಾರ್, ೨೦೧೮ ರೊಳಗೆ ಕುಷ್ಠ ರೋಗ ಮತ್ತು ೨೦೧೦ ರೊಳಗೆ ಟ್ಯುಬರ್ ಕ್ಯುಲೋಸಿಸ್ ನಿರ್ಮೂಲನೆ ಮಾಡಲಾಗುವುದು" ಎಂದು ಜೇಟ್ಲಿ ಹೇಳಿದ್ದಾರೆ.
೨೦೨೦ರೊಳಗೆ ಶಿಶುಮರಣ ದರವನ್ನು (ಎಂಎಂಆರ್) ೧೦೦ಕ್ಕೆ ಇಳಿಸುವುದಾಗಿ ಜೇಟ್ಲಿ ಘೋಷಿಸಿದ್ದಾರೆ.
"ನಮ್ಮ ಸರ್ಕಾರ ೨೦೧೧-೧೩ ರಲ್ಲಿ ೧೬೭ ಇದ್ದ ಎಂಎಂಆರ್ ಅನ್ನು ೨೦೧೮-೨೦೨೦ ಕ್ಕೆ ೧೦೦ ಕ್ಕೆ ಇಳಿಸಿವುದಾಗಿ" ಜೇಟ್ಲಿ ಘೋಷಿಸಿದ್ದಾರೆ.
ಆರೋಗ್ಯ ವಿಭಾಗದಲ್ಲಿ ತೆಗೆದುಕೊಂಡಿರುವ ಹೊಸ ನಿರ್ಣಯದಲ್ಲಿ ಈಗಿರುವ ಉಪ ಕೇಂದ್ರಗಳನ್ನು ಆರೋಗ್ಯ ಅಭಿವೃದ್ಧಿ ಕೇಂದ್ರಗಳಾಗಿ ಬದಲಾಯಿಸಿ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ.
".... ದೇಶಾದಾದ್ಯಂತ ಹಲವು ಆಸ್ಪತ್ರೆಗಳಲ್ಲಿ ಡಿ ಎನ್ ಬಿ (ಡಿಪ್ಲೋಮಾಟ್ ರಾಷ್ಟ್ರೀಯ ಪೀಠ) ಸ್ಥಾಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ" ಎಂದು ಕೂಡ ಜೇಟ್ಲಿ ಘೋಷಿಸಿದ್ದಾರೆ.