ನವದೆಹಲಿ: ಕೇಂದ್ರ ಹಣಕಾಸು ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಆದಾಯ ತೆರಿಗೆಯಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿದ್ದು ಸಾಮಾನ್ಯ ಜನರ ನಿರೀಕ್ಷೆಗೆ ಸ್ಪಂದಿಸಿದ್ದಾರೆ.
ಈಗ 2.5 ಲಕ್ಷದಿಂದ 5 ಲಕ್ಷ ಆದಾಯ ಹೊಂದಿರುವವರಿಗೆ ತೆರಿಗೆಯನ್ನು ೧೦% ನಿಂದ ೫% ಗೆ ಕಡಿತಗೊಳಿಸಿದ್ದಾರೆ.
ಉಳಿದಂತೆ ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ನೂತನ ಆದಾಯ ತೆರಿಗೆ ಪಟ್ಟಿ ಹೀಗಿದೆ.
2.5 ಲಕ್ಷದವರೆಗೆ ----- ಯಾವುದೇ ತೆರಿಗೆ ಇಲ್ಲ
3 ಲಕ್ಷದಿಂದ ೫ ಲಕ್ಷದವರೆಗೆ ---- 5%
5 ಲಕ್ಷದಿಂದ ೧೦ ಲಕ್ಷದವರೆಗೆ --- 20%
10 ಲಕ್ಷ ಮೇಲ್ಪಟ್ಟು ---- 30%
ಈ ಹಿಂದಿನ ಆದಾಯ ತೆರಿಗೆ ಪಟ್ಟಿ ಹೀಗಿತ್ತು
2.5 ಲಕ್ಷದವರೆಗೆ ----- ಯಾವುದೇ ತೆರಿಗೆ ಇಲ್ಲ
2.5 ಲಕ್ಷದಿಂದ ೫ ಲಕ್ಷದವರೆಗೆ ---- 10 %
5 ಲಕ್ಷದಿಂದ ೧೦ ಲಕ್ಷದವರೆಗೆ --- 20%
10 ಲಕ್ಷ ಮೇಲ್ಪಟ್ಟು ---- 30%
50 ಲಕ್ಷದಿಂದ 1 ಕೋಟಿ ಆದಾಯ ತೆರಿಗೆದಾರರಿಗೆ ಶೇಕಡಾ 10 ಸರ್ಚಾರ್ಜ್ ಅನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ. 5 ಲಕ್ಷ ಒಳಗಿನ ಆದಾಯದ ತೆರಿಗೆದಾರರಿಗೆ, ರಿಟರ್ನ್ಸ್ ದಾಖಲಿಸುವುದನ್ನು ಸರಳಗೊಳಿಸುವುದಾಗಿ ತಿಳಿಸಿದ್ದು ಒಂದು ಪುಟದ ಫಾರ್ಮ್ ಮಾತ್ರ ತುಂಬಬೇಕಾಗುತ್ತದೆ ಎಂದಿದ್ದಾರೆ.