ಬೆಂಗಳೂರು: ಸತತ ಮೂರುವರೆ ಗಂಟೆಗಳಿಗೂ ಮೀರಿ 2018-19 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 425 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.
ಕುವೆಂಪು ಅವರ ಮೈಸೂರು ಮನೆ ಉದಯ ರವಿಯನ್ನು ರಾಷ್ಟ್ರಕವಿ ಸ್ಮಾರಕ ಮಾಡಿ ಸಂರಕ್ಷಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ. ಇನ್ನು ಕನ್ನಡ ತತ್ರಾಂಶ ಅಭಿವೃದ್ಧಿ ನಡೆಸುವ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನ್ನೂ ಸಿಎಂ ಘೋಷಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 2018-19 ನೇ ಸಾಲಿನಲ್ಲಿ ಸಿಕ್ಕ ಅನುದಾನ, ಘೋಷಣೆಗಳು
ದಾಸ ಸಾಹಿತ್ಯದ ಅಧ್ಯಯನಕ್ಕಾಗಿ ನೂತನ ಅಧ್ಯಯನ ಪೀಠ
1.5 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಸಹಯೊಗದಲ್ಲಿ ಪುಸ್ತಕ ಜಾಥಾ ಕಾರ್ಯಕ್ರಮ.
ಅಡಿಗರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ 'ಕಟ್ಟುವೆವು ಹೊಸ ನಾಡೊಂದನು' ಕಾರ್ಯಕ್ರಮ ಸಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕೇಂದ್ರ
ಗಡಿ ಪ್ರದೇಶಗಳ ಅಭಿವೃದ್ಧಿಗೆ 50 ಕೋಟಿ ರೂ ವೆಚ್ಚದಲ್ಲಿ ಕಾರ್ಯಕ್ರಮ.
ಜನಪದ ಸಂಸ್ಕೃತಿಯನ್ನು ಇಡೀ ಭಾರತಕ್ಕೆ ಪರಿಚಯಿಸಲು ಜಾನಪದ ಸಾಂಸ್ಕೃತಿಕ ಭಾರತ ಕಾರ್ಯಕ್ರಮ.