ಕರ್ನಾಟಕ ಬಜೆಟ್: ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ

ಮುಖ್ಯಮಂತ್ರಿ ಎಚ್,ಡಿ ಕುಮಾರ ಸ್ವಾಮಿ ಅವರು ಮಂಡಿಸಿರುವ ತಮ್ಮ ಚೊಚ್ಚಲ ಬಜೆಟ್ ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಉತ್ತೇಜನ ನೀಡಲು ಹೆಚ್ಚಿನ ...
ಸಿಎಂ ಕುಮಾರ ಸ್ವಾಮಿ
ಸಿಎಂ ಕುಮಾರ ಸ್ವಾಮಿ
ಬೆಂಗಳೂರು: ಮುಖ್ಯಮಂತ್ರಿ ಎಚ್,ಡಿ ಕುಮಾರ ಸ್ವಾಮಿ ಅವರು ಮಂಡಿಸಿರುವ  ತಮ್ಮ ಚೊಚ್ಚಲ ಬಜೆಟ್ ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಉತ್ತೇಜನ ನೀಡಲು ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಕಲಬುರಗಿಯನ್ನು ಭಾರತ್ ಸೋಲಾರ್ ಜಿಲ್ಲೆಯನ್ನಾಗಿ ಅಭಿವೃದ್ಧಿ,  ತುಮಕೂರಿನಲ್ಲಿ ಸ್ಪೋರ್ಟ್ಸ್​​ಮತ್ತು ಫಿಟ್ನೆಸ್​​ವಸ್ತುಗಳ ಉತ್ಪಾದನಾ ಘಟಕ ಸ್ಥಾಪನೆ. ಇದಕ್ಕಾಗಿ 2000 ಕೋಟಿ ಬಂಡವಾಳ ಹೂಡಿಕೆ ಉದ್ದೇಶ ಹೊಂದಿದ್ದು, ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ.
ಬೀದರ್ ನಲ್ಲಿ  ಕೃಷಿ ಉಪಕರಣಗಳ ತಯಾರಿಕೆಗಾಗಿ 2000 ಕೋಟಿ ರು ಬಂಡವಾಳ ಹೂಡಿಕೆ. ಮುಂಬರುವ ವರ್ಷಗಳಲ್ಲಿ ರಾಜ್ಯದ 7 ಜಿಲ್ಲೆಗಳಲ್ಲಿ 14 ಸಾವಿರ ಕೋಟಿ ರು ಬಂಡವಾಳ ಹೂಡಿ  8 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು.
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಾರ್ಷಿಕವಾಗಿ 10 ಸಾವಿರ ರೂ ಧನ ಸಹಾಯ. ಗಣಿಗಾರಿಕೆ ಮತ್ತು ಸುರಕ್ಷತೆಗಾಗಿ ಕ್ವಾರಿ ಗುತ್ತಿಗೆದಾರರಿಗೆ ತರಬೇತಿ ಅಗತ್ಯ ಕಡ್ಡಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com